ಹಾವೇರಿ:ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಈ ಅಂಗಡಿ ಮಾಲೀಕನ ಐಡಿಯಾ ನೋಡಿ ಜನರು ಬೆಸ್ತುಬಿದ್ದಿದ್ದಾರೆ.
ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಹಸುವಿನ ಸಗಣಿಯನ್ನು ಅಂಗಡಿ ಮಾಲೀಕ ರಾಜು ಎಂಬುವವರು ಹಿಡಿಗಾತ್ರದಷ್ಟು ಉಂಡೆ ಮಾಡಿ ಅಂಗಡಿ ಮುಂದೆ ಅಲ್ಲಲ್ಲಿ ಇಟ್ಟಿದ್ದಾರೆ. ಇದನ್ನು ಕಂಡ ಪಕ್ಕದ ಅಂಗಡಿಯವ ಮುತ್ತಪ್ಪ ಕೂಡ ತನ್ನ ಅಂಗಡಿ ಮುಂದೆಯೂ ಸಗಣಿ ಇಟ್ಟಿದ್ದಾರೆ. ಊರು ತುಂಬಾ ಈಗ ಇದರದ್ದೇ ಸುದ್ದಿ.

ಸಗಣಿ ಏಕೆ ಇಟ್ಟದ್ದು ಗೊತ್ತಾ? ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದರೂ ಬಹುತೇಕ ಜನ ಕ್ಯಾರೆ ಎನ್ನುತ್ತಿಲ್ಲ. ಇದನ್ನ ಮನಗಂಡ ಅಂಗಡಿಯವ ಗ್ರಾಹಕರು ಬಂದರೆ ಅಲ್ಲಿ ಕೂರಬಾರದು. ಬಂದ ಕೂಡಲೇ ಸಾಮಗ್ರಿ ಖರೀದಿಸಿ ಬೇಗ ಹೊರಡಬೇಕು. ಪಕ್ಕದಲ್ಲಿ ಒಟ್ಟೊಟ್ಟಾಗಿ ಯಾರೂ ನಿಲ್ಲಬಾರದು ಎಂದು ಸಗಣಿಯನ್ನೇ ಅಸ್ತ್ರವನ್ನಾಗಿ ಬಳಸಿದ್ದಾರೆ.
ಆರಂಭದಲ್ಲಿ ಸಗಣಿ ಹಾಕಿದ್ದಕ್ಕೆ ಜನರು ಥೂ ಎಂದು ಮೂದಲಿಸಿದ್ದರಾದರೂ ತದನಂತರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಟ್ಟೆಗೆ ಸಗಣಿ ಮೆತ್ತಿಕೊಳ್ಳುತ್ತೆ ಎಂದು ಜನ ಕೂರಲು ಆ ಕಡೆ ಹೋಗುವುದೇ ಎನ್ನುತ್ತಾರೆ ಮುತ್ತಪ್ಪ.(ದಿಗ್ವಿಜಯ ನ್ಯೂಸ್​)
ರೋಹಿಣಿ ಸಿಂಧೂರಿ ಇಡೀ ಕುಟುಂಬಕ್ಕೆ ಕರೊನಾ ಸೋಂಕು!

ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

ಗಂಡನ ಪ್ರಾಣ ಉಳಿಸಿಕೊಡಿ ಎಂದು ಅಂಗಲಾಚಿದ ಮಹಿಳೆಯನ್ನು ಮಂಚಕ್ಕೆ ಕರೆದ ಕೋವಿಡ್​ ಆಸ್ಪತ್ರೆ ಸಿಬ್ಬಂದಿ: ಮುಂದಾಗಿದ್ದು ದುರಂತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
