ಬೆಂಗಳೂರು:ನಾನು ಯಾವುದೇ ನಕಲಿ ಜಾತಿ ಸರ್ಟಿಫಿಕೇಟ್ ಪಡೆದಿಲ್ಲ. ನಾನು ಜಾತ್ಯತೀತ ವ್ಯಕ್ತಿ. ನಕಲಿ ಸರ್ಟಿಫಿಕೇಟ್​ ಪಡೆದು ಅದರ ಲಾಭ ಪಡೆದಿದ್ರೆ ನನ್ನನ್ನು ನೇಣಿಗೆ ಹಾಕಿ ಎಂದು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.
ರೇಣುಕಾಚಾರ್ಯ ಅವರ ಪುತ್ರಿ ಎಸ್​ಸ್ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ವಿಧಾನಸೌಧದಲ್ಲಿ ಕಲಾಪ ವೇಳೆ ಬುಧವಾರ ಜಟಾಪಟಿಯೂ ನಡೆಯಿತು. ಸ್ಪಷ್ಟನೆ ನೀಡಿದ  ರೇಣುಕಾಚಾರ್ಯ, ನನ್ನ ಸೋದರ ನನ್ನ ಮಗಳಿಗೂ ಜಾತಿ ಪ್ರಮಾಣ ಪತ್ರ ಕೊಡಿಸಿದ್ದ. ಆ ಪತ್ರವನ್ನ ನಾನೇ ವಾಪಸ್​ ಮಾಡಿಸಿರುವೆ. ನನ್ನ ತಂಗಿ ಕಲಬುರಗಿಯಲ್ಲಿ ಉಮೇಶ್ ಜಾದವ್ ವಿರುದ್ಧ ಸ್ಪರ್ಧೆ ಮಾಡಿದಾಗ ನಾನೇ ಇದನ್ನ ತಕರಾರು ಮಾಡಿದೆ. ನನಗೆ ಕೆಟ್ಟ ಹೆಸರು ಬರುತ್ತೆ ಮೊದಲು ವಾಪಸು ತೆಗೆಯಿರಿ ಎಂದು ಹೇಳಿದ್ದೆ. ನಾನು ಜಾತಿ ಸಂಬಂಧ ಯಾವುದೇ ನಕಲಿ ಸರ್ಟಿಫಿಕೇಟ್ ಪಡೆದು ಯಾವುದೇ ಸವಲತ್ತು ಪಡೆದಿಲ್ಲ. ಪಡೆದಿದ್ರೆ ನೇಣಿಗೇರಲು ನಾನು ಸಿದ್ಧ ಎಂದರು. ಹಾಗೇನಾದರೂ ರೇಣುಕಾಚಾರ್ಯರು ನಕಲಿ ಸರ್ಟಿಫಿಕೇಟ್ ಪಡೆದಿದ್ರೆ ಸಂಬಂಧಪಟ್ಟವರಿಗೆ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಸಲಹೆ ನೀಡಿದರು.
ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಆನೇಕಲ್​ನಲ್ಲಿ ವೇಶ್ಯಾವಾಟಿಕೆ ದೋಖಾ: ರೇಟ್​ ಫಿಕ್ಸ್​ ಮಾಡಿ ಸ್ವರ್ಗ ತೋರಿಸ್ತೀವಿ ಅಂತಾರೆ… ಆಮೇಲೆ ಆಗೋದೇ ಬೇರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
