ಮಂಗಳೂರು:ಯಾರಿಗೆ ಯಾರ ಮೇಲೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲೂ ಸಾಧ್ಯವಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯೆಂಬಂತಿಗೆ ಈ ಮದುವೆ. ಕಳೆದ ವರ್ಷ ಬೆಲ್ಜಿಯಂ ದೇಶದ ಹುಡುಗಿಯೊಬ್ಬಳು ಹಂಪಿಯ ಆಟೋ ಚಾಲಕನನ್ನು ಪ್ರೀತಿಸಿ ಮದುವೆ ವಿವಾಹವಾಗಿದ್ದಳು. ಇದೀಗ ನೆದರ್ಲೆಂಡ್​ನ ಯುವತಿಯೊಬ್ಬಳು ಮಂಗಳೂರಿನ ಯುವಕನೊಂದಿಗೆ ಮದುವೆ ಆಗಿದ್ದಾಳೆ.
ಮಂಗಳೂರಿನ ಯುವಕ ನೆದರ್ಲೆಂಡ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಅಲ್ಲಿನ ಹುಡುಗಿಯೊಂದಿಗೆ ಪ್ರೇಮಾಂಕುರವಾಗಿದೆ. ಇದೀಗ ಇಬ್ಬರೂ ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಸುರತ್ಕಲ್​ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ಮುಸ್ಲಿಂ ಸಂಪ್ರದಾಯದಂತೆ ಈ ಜೋಡಿಯ ಮದುವೆ ಕಾರ್ಯಕ್ರಮ ನಡೆದಿದೆ. ಯುವತಿಯ ಕುಟುಂಬಸ್ಥರು ಭಾರತೀಯ ಸಂಸ್ಕೃತಿಯಂತೆ ಸೀರೆ ಉಟ್ಟು ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಈ ಜೋಡಿಯ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.
ಮದುವೆ ಬಳಿಕ ಹುಡುಗನ ಹಿರಿಯಜ್ಜಿ ಭಾಷೆ ತಿಳಿಯದೆ ಮದುವೆ ಹೆಣ್ಣಿನ ಕುಟುಂಬಸ್ಥರ ಜತೆಗೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವೀಡಿಯೋ ನೋಡುಗರಲ್ಲಿ ನೋಡುಗರಲ್ಲಿ ನಗು ತರಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 12 =
Remember me
