ಮೈಸೂರು:ಮಾಂಸ ತಿಂದು ಅಂಬಾರಿ ಮೇಲಿದ್ದ ಶ್ರೀಚಾಮುಂಡೇಶ್ವರಿಗೆ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ದಸರಾ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಸಂಸದ ಪ್ರತಾಪ್​ ಸಿಂಹ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ, 2017ರಲ್ಲಿ ಸಿದ್ದರಾಮಯ್ಯ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿ ಉದ್ಘಾಟಿಸಿದ್ದಕ್ಕೆ ನಾನೇ ಸಾಕ್ಷಿ, ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ? ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಸಿದ್ದರಾಮಯ್ಯರ ಶ್ರೀಮತಿಯವರು ಚಾಮುಂಡೇಶ್ವರಿ ಭಕ್ತೆಯಾಗಿದ್ದು, ಅವರು ಸಹ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಅವರು ಅದೇ ರೀತಿ ಸಾರ್ವಜನಿಕವಾಗಿ ಹೇಳಿದರೆ ಆಗ ನಾವು ಸಿದ್ದರಾಮಯ್ಯರ ಮಾತನ್ನು ಒಪ್ಪಿಕೊಳ್ಳುತ್ತೇವೆ ಎಂದು ಸವಾಲು ಹಾಕಿದರು.
ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದರು. ಈಗ ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ತತ್ವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದು ಸಿದ್ದರಾಮಯ್ಯರನ್ನು ಟೀಕಿಸಿದ ಪ್ರತಾಪ್​ ಸಿಂಹ, ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವ ಮೂಲಕ ಪದೇಪದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 35 ಸಾವಿರ ಮತಗಳ ಅಂತರಿಂದ ಹೀನಾಯವಾಗಿ ಸೋತರು ಎಂದು ಅಣಕಿಸಿದರು.
ಹಂದಿ ತಿಂದು ಮಸೀದಿಗೆ ಹೋಗಲಿ:ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಹುದು ಎನ್ನುವ ಸಿದ್ದರಾಮಯ್ಯ ಅವರು ಹಂದಿ ತಿಂದು ಮಸೀದಿಗೆ ಹೋಗಲಿ. ಹಂದಿ ಮಾಂಸ ಕೂಡ ಆಹಾರ ಪದ್ಧತಿ. ಅದನ್ನು ತಿಂದು ಮಸೀದಿಗೆ ಹೋಗಲಿ. ಅಲ್ಲದೆ ನಿಮಗೆ ಧೈರ್ಯ ಇದ್ದರೆ ಜಮೀರ್​ ಅಹಮ್ಮದ್​ ಹಾಗೂ ಅವರ ಬೆಂಬಲಿಗರಿಗೆ ಹಂದಿ ತಿನ್ನಲು ಹೇಳಲಿ ಎಂದು ಪ್ರತಾಪ್​ ಸಿಂಹ ಸವಾಲು ಹಾಕಿದರು.
ಸಿದ್ದರಾಮಯ್ಯರ ಕಾರಿನತ್ತ ಮೊಟ್ಟೆ ಎಸೆದ ಕೊಡಗಿನ ಸಂಪತ್​ ಅವರನ್ನು ಬಿಜೆಪಿ ಕಾರ್ಯಕರ್ತ ಎಂದು ಆರೋಪ ಮಾಡುತ್ತಾರೆ. ಫೋಟೋ ಇದ್ದ ಮಾತ್ರಕ್ಕೆ ಆತ ಬಿಜೆಪಿ ಕಾರ್ಯಕರ್ತ ಆಗಲ್ಲ. ನಾನು ಲೋಕಸಭೆಗೆ ನಿಂತಾಗಲೂ ಕಾಂಗ್ರೆಸ್​ ಪರ ಆತ ಕೆಲಸ ಮಾಡಿದ್ದಾನೆ ಎಂದು ಪ್ರತಾಪ್​ ಸಿಂಹ ಸಮರ್ಥಿಸಿಕೊಂಡರು.
ಸಿದ್ದು ಸುಲ್ತಾನಾ ಬಂದರೆ ಹೆದರುತ್ತೇವಾ?:ಕೊಡಗಿಗೆ ಟಿಪ್ಪು ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನಾ ಬಂದರೆ ಹೆದರುತ್ತೇವಾ ಎನ್ನುವ ಮೂಲಕ ಆ.26ರಂದು ಕಾಂಗ್ರೆಸ್​ ಹಮ್ಮಿಕೊಂಡಿರುವ ಕೊಡಗು ಚಲೋ ಕಾರ್ಯಕ್ರಮಕ್ಕೆ ಪ್ರತಾಪ್​ ಸಿಂಹ ಟಾಂಗ್​ ನೀಡಿದರು.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಭವಿಸಿದ ದಿನವೇ ಬಿ.ಎಸ್​.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂತಹ ತಪ್ಪು ನಡೆಯಬಾರದು ಎಂದು ಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೋರಿದ್ದಾರೆ. ರಾಜಕೀಯ ವಿರೋಧ ಏನೇ ಇರಲಿ ಮೊಟ್ಟೆ ಎಸೆಯುವುದು ನಾಗರಿಕತೆಯ ಲಕ್ಷಣವಲ್ಲ ಎಂದು ಹೇಳಿದ್ದೇವೆ. ಇಷ್ಟಾಗಿಯೂ ಕೊಡಗು ಚಲೋ ಪಾದಯಾತ್ರೆ ಹಮ್ಮಿಕೊಂಡಿರುವುದು ಕೊಡಗಿನ ಮೇಲೆ ದ್ವೇಷವಾಗುತ್ತದೆ. ಅಂದು ಟಿಪ್ಪು ಸುಲ್ತಾನ್​ ದಂಡೆತ್ತಿ ಬಂದಾಗಲೇ ತಲೆಕೆಡಿಸಿಕೊಂಡಿಲ್ಲ. ಈಗ ಸಿದ್ದು ಸುಲ್ತಾನ್​ ಆಗಿ ಬಂದರೆ ಕೊಡವರು ಹೆದರುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜತೆಗೆ ಪಕ್ಕದ ಕೇರಳದಲ್ಲಿರುವ ನಿಮ್ಮ ಸಾಕು ಮಕ್ಕಳಾಗಿರುವ ಎಸ್​ಡಿಪಿಐ, ಪಿಎಫ್​ಐನವರನ್ನು ಕರೆತನ್ನಿ, ನಾವೇನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕುಟುಕಿದರು.
ಸಿದ್ದರಾಮಯ್ಯ ಮಾಂಸ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದು ತಪ್ಪಲ್ಲ, ಇದು ಚರ್ಚೆಯ ವಿಷಯವೇ ಅಲ್ಲ: ಪ್ರಮೋದ್​ ಮುತಾಲಿಕ್​

ಬೆಳಗಾವಿಯಲ್ಲಿ ಆಪರೇಷನ್ ಚಿರತೆ ಮತ್ತೆ ವಿಫಲ: ಕಣ್ಣೆದುರೇ ಹೋದರೂ ಬಲೆಗೆ ಬೀಳದ ಚಿರತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
