ಮಂಗಳೂರು:ವಿದ್ಯುತ್​ಚಾಲಿತ ದ್ವಿಚಕ್ರ ವಾಹನಗಳ (ಇ.ವಿ.) ಬ್ಯಾಟರಿಗಳು ಸ್ಫೋಟ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಹಲವರ ಜೀವಹಾನಿಯೂ ಆಗಿದೆ. ಇದೀಗ ಮಂಗಳೂರು ನಗರದ ಬೋಂದೆಲ್​ ಕೆಎಚ್​ಬಿ ಕಾಲನಿಯಲ್ಲಿ ಭಾನುವಾರ ಮಧ್ಯಾಹ್ನ ಚಾರ್ಜ್​ಗೆ ಇಟ್ಟಿದ್ದ ಇಲೆಕ್ಟ್ರಿಕ್​ ಸ್ಕೂಟರ್​ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ.
ಸ್ಕೂಟರನ್ನು ಮಾಲೀಕ ಜಯರಾಮ ಎಂಬುವರು ಮನೆ ಪಾರ್ಕಿಂಗ್​ ಜಾಗದಲ್ಲಿ ಚಾರ್ಜ್​ಗೆ ಇಟ್ಟಿದ್ದರು. ಕೆಲವೇ ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಕೂಟರ್​ ಸ್ಫೋಟಗೊಂಡಿದೆ. ಯಂತ್ರಗಳು, ಬಿಡಿಭಾಗಗಳು ಸೇರಿದಂತೆ ಸಂಪೂರ್ಣ ಸ್ಕೂಟರ್​ ಸುಟ್ಟಿದೆ. ಕದ್ರಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದೆ. ಕಾವೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಲೆಕ್ಟ್ರಿಕ್​ ಸ್ಕೂಟರ್​ಗಳು ಬೆಂಕಿಗಾಹುತಿ ಆಗುತ್ತಿರುವುದು ಮಾಲೀಕರಲ್ಲಿ ಆತಂಕ ಹುಟ್ಟುಹಾಕಿದೆ.
ರಾಜ್ಯದ ಕರಾವಳಿ-ಮಲೆನಾಡು ಭಾಗದಲ್ಲಿ ಮತ್ತೆ ಸ್ಯಾಟಲೈಟ್​ ಫೋನ್​ ಸಿಗ್ನಲ್​ ಪತ್ತೆ

PSI ಜತೆ ಅನುಚಿತ ವರ್ತನೆ: 6 ಪೇದೆಗಳ ಸಸ್ಪೆಂಡ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
