ಬೆಂಗಳೂರು:ಕಾರ್ಮಿಕರ ರಾಜ್ಯ ವಿಮಾ ನಿಗಮದ ಅಧೀನದಲ್ಲಿ ಕಾರ್ಯನಿರ್ವಹಿಸುವ ಕಲಬುರಗಿ ಇಎಸ್​ಐ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆಯಲ್ಲಿ ಸಹಾಯಕ ಹಾಗೂ ಸಹ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
ಹುದ್ದೆ ವಿವರಸಹಾಯಕ ಪ್ರಾಧ್ಯಾಪಕ- 9ವಿಭಾಗವಾರು ವಿವರ: ಪ್ಯಾಥೋಲಜಿ-2, ಜನರಲ್​ ಮೆಡಿಸನ್​-1, ಡರ್ಮಟಾಲಜಿ-1, ಜನರಲ್​ ಸರ್ಜರಿ-1, ರೇಡಿಯೋ ಡಯಗ್ನೋಸಿಸ್-2, ಎಮರ್ಜನ್ಸಿ ಮೆಡಿಸನ್- 1, ಫೋರೆನ್ಸಿಕ್​ ಮೆಡಿಸನ್​-1.ಸಹ ಪ್ರಾಧ್ಯಾಪಕ- 14ವಿಭಾಗವಾರು ವಿವರ: ಅಟಾನಮಿ-1, ಕಮ್ಯುನಿಟಿ ಮೆಡಿಸನ್​-2, ಮೈಕ್ರೋಬಯಾಲಜಿ-1, ಜನರಲ್​ ಮೆಡಿಸನ್-1, ಸೈಕಿಯಾಟ್ರಿ-1, ಪೀಡಿಯಾಟ್ರಿಕ್ಸ್​-1, ಜನರಲ್​ ಸರ್ಜರಿ-4, ರೇಡಿಯೋ ಡಯಗ್ನೋಸಿಸ್​-2, ಎಮರ್ಜೆನ್ಸಿ ಮೆಡಿಸನ್​-1.
ಸಹಾಯಕ ಪ್ರಾಧ್ಯಾಪಕರಲ್ಲಿ 7 ಸ್ಥಾನವನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗೆ, 2 ಸ್ಥಾನವನ್ನು ಎಸ್ಟಿ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ. ಸಹ ಪ್ರಾಧ್ಯಾಪಕರಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 10 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3 ಸ್ಥಾನ ಮತ್ತು ಎಸ್ಟಿಗೆ 1 ಸ್ಥಾನ ಮೀಸಲು. ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಈ ಅವಧಿಯಲ್ಲಿ ಅಭ್ಯರ್ಥಿಗಳು ಹೊರಗಡೆ ಬೇರೆ ಕೆಲಸ ಮಾಡಲು ಅವಕಾಶ ಇರುವುದಿಲ್ಲ.
ಅರ್ಹತಾ ಮಾನದಂಡ:ಎಂಸಿಐ/ ಎನ್​ಎಂಸಿ ನಿಯಮಾನುಸಾರ ವಿದ್ಯಾರ್ಹತೆ ಕೇಳಲಾಗಿದ್ದು, ಗರಿಷ್ಠ 69 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ:ಸಹಾಯಕ ಪ್ರಾಧ್ಯಾಪಕರಿಗೆ ಮಾಸಿಕ 1,06,000 ರೂ. ಹಾಗೂ ಸಹ ಪ್ರಾಧ್ಯಾಪಕರಿಗೆ ಮಾಸಿಕ 92,000 ರೂ. ವೇತನ ಇದ್ದು, ಇತರ ಯಾವುದೇ ಭತ್ಯೆ ಇರುವುದಿಲ್ಲ.
ಸೂಚನೆ:ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂದರ್ಶನದ ದಿನ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಅಭ್ಯರ್ಥಿಗಳು ತಮ್ಮ ಮಾಸಿಕ ವೇತನ ಮೊತ್ತವನ್ನೇ ಸೇವಾ ಬಾಂಡ್​ ಆಗಿ ಸಲ್ಲಿಸಬೇಕಿದೆ.
ಆಯ್ಕೆ ಪ್ರಕ್ರಿಯೆ:ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಸಂದರ್ಶನದಲ್ಲಿನ ಪಾಲ್ಗೊಳ್ಳುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.
ಸಂದರ್ಶನ ನಡೆಯುವ ದಿನಾಂಕ:29.4.2022 (ಬೆಳಗ್ಗೆ 9 ರಿಂದ 10.30ರ ಒಳಗೆ ನೋಂದಾಯಿತರಾಗಿರಬೇಕು)ಸಂದರ್ಶನ ನಡೆಯುವ ಸ್ಥಳ:ಇಎಸ್​ಐಸಿ ಮೆಡಿಕಲ್​ ಕಾಲೇಜ್​ ಮತ್ತು ಆಸ್ಪತ್ರೆ, ಸೀಡಂ ರಸ್ತೆ, ಕಲಬುರಗಿ- 585 106
ಅಧಿಸೂಚನೆಗೆ:https://bit.ly/3KSKvFdಮಾಹಿತಿಗೆ:www.esic.nic.in
https://www.esic.nic.in/attachments/recruitmentfile/cd9cbf00040434ba2329a1f4cb986b9b.pdf
80 ಲಕ್ಷ ರೂ.ಗೆ PSI ಹುದ್ದೆ ಡೀಲ್​! ಅಕ್ರಮಕ್ಕೆ ದಾರಿ ತೋರಿಸಿದ ಗೆಳೆಯನಿಂದಲೇ ಸ್ಫೋಟಕ ರಹಸ್ಯ ಬಯಲು

ಗುತ್ತಿಗೆದಾರ ಸಂತೋಷ್​ ಆತ್ಮಹತ್ಯೆ ಮಾಡಿಕೊಂಡಿದ್ದ ಉಡುಪಿಯ ಲಾಡ್ಜ್​ನಲ್ಲಿ ಮತ್ತೊಬ್ಬ ನೇಣಿಗೆ ಶರಣು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
