ಕೊಡಗು:ಇದು ಹೇಡಿಗಳು ಮಾಡುವ ಕೆಲಸ. ಇವರಿಗೆ ಸರ್ಕಾರ ನಡೆಸಲು ಬರಲ್ಲ, ವಿಷಯ ಡೈವರ್ಟ್ ಮಾಡಲು ಹೊರಟ್ಟಿದ್ದಾರೆ. ಟಿಪ್ಪು ಜಯಂತಿ ಮಾಡಿ ಎಷ್ಟು ವರ್ಷವಾಯಿತು? ಅದಾದ ನಂತರ ಸಾಕಷ್ಟು‌ ಬಾರಿ ಜಿಲ್ಲೆಗೆ ಬಂದಿದ್ದೆ. ಜಿಲ್ಲಾಧಿಕಾರಿ ತಡೆಗೋಡೆ ಕಳಪೆ ಮಾಡಿಸಿದ್ದಾರೆ. ಅದು ಗೊತ್ತಾಗುತ್ತೆ ಎಂದು ಈ ರೀತಿ ಮಾಡಿದ್ದಾರೆ. ಬಿಜೆಪಿಯವರು ಹೇಡಿಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಪ್ರಕೃತಿ ವಿಕೋಪ ಪೀಡಿತ ಪ್ರದೇಶ ವೀಕ್ಷಿಸಿ ಮಡಿಕೇರಿಗೆ ಬರುತ್ತಿದ್ದ ಸಿದ್ದರಾಮಯ್ಯರನ್ನು ಗುರುವಾರ ಅಡ್ಡಗಟ್ಟಿದ ಬಿಜೆಪಿ ಮತ್ತು ಹಿಂದು ಸಂಘಟನೆ ಕಾರ್ಯಕರ್ತರು, ಜನರಲ್​ ತಿಮ್ಮಯ್ಯ ಸರ್ಕಲ್​ನಲ್ಲಿ ಪ್ರತಿಭಟನೆ ನಡೆಸಿದರು. ತ್ರಿವರ್ಣ ಧ್ವಜ ಹಿಡಿದು ಸಾವರ್ಕರ್​ ಪರ ಘೋಷಣೆ ಕೂಗುತ್ತಾ ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದು ‘ಸಿದ್ದರಾಮಯ್ಯ ಟಿಪ್ಪುವಿನ ಶಿಷ್ಯ’ ಎಂದು ಆಕ್ರೋಶ ಹೊರಹಾಕಿದರು. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಇದು ಹೇಡಿಗಳು ಮಾಡುವ ಕೆಲಸ ಎಂದು ಹರಿಹಾಯ್ದರು.
ಇಡೀ ರಾಜ್ಯದಲ್ಲಿ ಜನರಿಗೆ ಮಳೆಹಾನಿ ಪರಿಹಾರ ಸಿಕ್ಕಿಲ್ಲ. ಕೊಡಗು ಜಿಲ್ಲೆಯಲ್ಲೂ ನೀಡಿಲ್ಲ. ನಮ್ಮ ಸರ್ಕಾರ ಜಿಲ್ಲೆಯ ಅಭಿವೃದ್ಧಿಗೆ ಹಣ ನೀಡಿತ್ತು. ಈಗಿನ ಸರ್ಕಾರ ಹಣ ನೀಡಿಲ್ಲ. ಈ ಬಾರಿ ಎರಡೂ ಕ್ಷೇತ್ರ ಕಾಂಗ್ರೆಸ್ ಪಾಲಾಗುತ್ತದೆ. ಆದ್ದರಿಂದ ಬಿಜೆಪಿ ಅವರು ಹತಾಶರಾಗಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು. ಯಡಿಯೂರಪ್ಪ ಅವರನ್ನು ಸಮಾಧಾನ ಪಡಿಸಲು ಸಂಸದೀಯ ಮಂಡಳಿಗೆ ಸೇರಿಸಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹೀಗೆ ಮಾಡಿದ್ದಾರೆ ಎಂದರು.
ಶಿವಮೊಗ್ಗದ ಗಲಭೆಗೆ ಈಶ್ವರಪ್ಪ ನೇರ ಕಾರಣ. ಮಡಿಕೇರಿಯಲ್ಲಿ ನನ್ನ ಕಾರಿಗೆ ಮೊಟ್ಟೆ ಎಸೆದಿದ್ದು ಗೊತ್ತಾಗಿಲ್ಲ ಎಂದ ಸಿದ್ದರಾಮಯ್ಯ, ಬಿಜೆಪಿಯವರು ಧರ್ಮಾಧರಿತ ರಾಜಕಾರಣ ಮಾಡುತ್ತಾರೆ. ಸಚಿವ ಮಾಧುಸ್ವಾಮಿ ಸತ್ಯ ಹೇಳಿದ್ದಾರೆ. ‘ಸರ್ಕಾರ ನಡೀತಿಲ್ಲ, ಹೇಗೋ ಮ್ಯಾನೇಜ್​ ಮಾಡ್ತಾ ತಳ್ಳುತ್ತಿದ್ದೇವೆ’ ಎಂದಿದ್ದಾರೆ. ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯದಲ್ಲಿ ಎಲ್ಲಾ ಧರ್ಮದವರು ಒಂದೇ ತಾಯಿ ಮಕ್ಕಳಂತೆ ಎಂದರು.
ಮಡಿಕೇರಿಯಲ್ಲಿ ಸಿದ್ದರಾಮಯ್ಯಗೆ ತಟ್ಟಿದ ಪ್ರತಿಭಟನೆ ಬಿಸಿ! ಕಾರಿನತ್ತ ಮೊಟ್ಟೆ ಎಸೆದು ಆಕ್ರೋಶ

PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
