ಬೆಂಗಳೂರು:ನರೇಂದ್ರ ಮೋದಿ ಅವರು ದೇಶದ ಆಡಳಿತ ಚುಕ್ಕಾಣಿ ಹಿಡಿದು ಎಂಟು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಂಭ್ರಮ ಆಚರಿಸಿಕೊಂಡಿದ್ದು, ದೊಡ್ಡ ಪ್ರಮಾಣದ ಜಾಹೀರಾತುಗಳ ಮೂಲಕ ಸಾಧನೆಯನ್ನು ಬಿತ್ತಿದ್ದಾರೆ. ಆದರೆ ವಾಸ್ತವಾಂಶ‌ ಭಿನ್ನವಾಗಿದ್ದು, ಸಂಗ್ರಹಿಸಿದ ಮಾಹಿತಿ ಆಧರಿಸಿ ‌’ವರುಷ ಎಂಟು ಅವಾಂತರ ನೂರೆಂಟು’ ಶೀರ್ಷಿಕೆಯಡಿ ಕಿರುಹೊತ್ತಗೆಯನ್ನು ಹೊರ ತಂದಿದ್ದೇವೆ. ಬಿಜೆಪಿ ಸೇರಿ ರಾಜ್ಯದ ಜನರಿಗೆ ಕಿರುಹೊತ್ತಗೆಯನ್ನು ಹಂಚುವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿರುಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ಕಿರುಹೊತ್ತಗೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳಿಗೆ ಬಿಜೆಪಿಯವರು ಉತ್ತರಿಸಲಿ ಎಂದು ಸವಾಲು ಹಾಕಿದರು. ಇದೇ ಕಾರಣಕ್ಕೆ ಹೈದರಾಬಾದ್​ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯತ್ತಿರುವ ಸಂದರ್ಭದಲ್ಲಿ ಕಿರು ಹೊತ್ತಗೆ‌ ಬಿಡುಗಡೆ ಮಾಡಿರುವೆ ಎಂದರು.
ಮೋದಿ ಸರ್ಕಾರದ ಕೆಟ್ಟ ಆಡಳಿತ, ದೋಷಪೂರಿತ ನೀತಿಗಳು, ಆರ್ಥಿಕ ದುಸ್ಥಿತಿಯಿಂದ ಜನರ ಬದುಕು ದುಸ್ತರವಾಗಿದ್ದು, ಒಕ್ಕೂಟ ವ್ಯವಸ್ಥೆ ಶಿಥಿಲವಾಗಿದೆ. ಈ ಕಹಿಸತ್ಯ ಮರೆಮಾಚಲು ಸುಳ್ಳಿನ ಸಂಭ್ರಮ ಆಚರಿಸಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಿದ್ದರಾಮೋತ್ಸವ ಅಲ್ಲ:75 ವರ್ಷಗಳನ್ನು ಆ.3ಕ್ಕೆ ಪೂರೈಸುತ್ತಿರುವುದು ಜೀವನದಲ್ಲಿ ದೊಡ್ಡ ಮೈಲುಗಲ್ಲು ಎಂಬ ಕಾರಣಕ್ಕೆ ಹಿತೈಷಿಗಳು, ಅಭಿಮಾನಿಗಳು ಸೇರಿ 75ನೇ ಜನ್ಮದಿನ ಆಚರಿಸುತ್ತಿದ್ದು, ವೈಯಕ್ತಿಕವಾಗಿ ನಾನು ಜನ್ಮದಿನ ಆಚರಿಸಿಕೊಂಡಿಲ್ಲ. ಸಿದ್ದರಾಮೋತ್ಸವವಲ್ಲ, ಹೊಟ್ಟೆಕಿಚ್ಚಿನ ಜನರು, ರಾಜಕೀಯ ವೈರಿಗಳ ಹೇಳಿಕೆಗಳಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪರಸ್ತ್ರೀಯರ ಜತೆ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್​! ಆಟ-ಪಾಠದ ನೆಪದಲ್ಲಿ ಮಕ್ಕಳನ್ನೂ ಬಿಟ್ಟಿಲ್ಲ

ಬೆಂಗಳೂರಲ್ಲಿ ಮಗು ಕೊಂದು ಟೆಕ್ನಿ ಪತ್ನಿ ಆತ್ಮಹತ್ಯೆ: ಸಾವಿಗೂ ಮುನ್ನ ಬರೆದ ಡೆತ್​ನೋಟ್​ ಪತ್ತೆ

ಡಿಕೆಶಿ ಬುಡ ಅಲ್ಲಾಡಿಸಲು ತ್ರಿಶೂಲವ್ಯೂಹ! ‘ವಿಶ್ವನಾಥ್’ ಅಸ್ತ್ರ ಬಳಕೆಗೆ ಅಶ್ವಥ್ ನಾರಾಯಣ, ಸಿಪಿವೈ, ಜಾರಕಿಹೊಳಿ ರಣತಂತ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − 9 =
Remember me
