ರಾಣೆಬೆನ್ನೂರ:ಯುದ್ಧಪೀಡಿತ ಯೂಕ್ರೇನ್​ನಲ್ಲಿ ರಷ್ಯಾ ಸೇನಾ ಪಡೆಯ ಶೆಲ್​ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದ ಎಂಬಿಬಿಎಸ್​ ವಿದ್ಯಾರ್ಥಿ ನವೀನ ಗ್ಯಾನಗೌಡರ ಅವರ ಮನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನವೀನನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸಿದ್ದರಾಮಯ್ಯ, ಮಗನನ್ನು ಕಳೆದುಕೊಂಡ ನೀವು ಧೈರ್ಯ ತಂದುಕೊಳ್ಳಬೇಕು. ಈಗಿರುವ ಮಗನ ಭವಿಷ್ಯಕ್ಕಾಗಿ ಆಲೋಚಿಸಬೇಕು ಎಂದು ಸಂತೈಯಿಸಿದರು. ಭಾರತ ದೇಶದಿಂದ ಬಹಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಯೂಕ್ರೇನ್​ಗೆ ತೆರಳಿದ್ದಾರೆ. ಚಳಗೇರಿ ಗ್ರಾಮದಿಂದಲೇ ಮೂವರು ಹೋಗಿದ್ದರು. ಅವರಿಗೆ ನಮ್ಮ ದೇಶದಲ್ಲೇ ಮೆಡಿಕಲ್​ ಸೀಟು ಸಿಕ್ಕಿದ್ದರೆ ವಿದೇಶಕ್ಕೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ನವೀನನ​ ಮೃತದೇಹ ಯೂಕ್ರೇನ್​ನಲ್ಲಿಯೇ ಇದೆ. ಅದನ್ನು ತರಿಸುವ ಕುರಿತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ನವೀನ ಮೃತಪಟ್ಟ ದಿನವೇ ವಿಮಾನದ ಮೂಲಕ ಮೃತದೇಹ ತರಲು ಪರವಾನಗಿ ನೀಡಿ ಎಂದು ಕೆ.ಬಿ. ಕೋಳಿವಾಡರ ಪುತ್ರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಮಾಜಿ ಸ್ಪೀಕರ್​ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಮಾಜಿ ಸಚಿವೆ ಜಯಮಾಲಾ, ಪ್ರಮುಖರಾದ ಎಚ್​.ಬಿ. ಬನ್ನಿಕೋಡ, ಅಜ್ಜಂಪೀರ ಖಾದ್ರಿ, ಸೋಮಣ್ಣ ಬೇವಿನಮರದ, ಎಂ.ಎಂ. ಹಿರೇಮಠ, ಪ್ರಕಾಶ ಕೋಳಿವಾಡ ಮತ್ತಿತರರು ಸಿದ್ದರಾಮಯ್ಯ ಜತೆ ನವೀನನ ಪಾಲಕರಿಗೆ ಸಾಂತ್ವನ ಹೇಳಿದರು.
ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

ಮಂಡ್ಯದಲ್ಲಿ ಇದೆಂಥಾ ಅಸಹ್ಯ? ಗ್ರಾಮದೇವತೆ ಹಬ್ಬದಲ್ಲಿ ಬಾಲಕನನ್ನು ಎಳೆದಾಡಿ ಅಶ್ಲೀಲವಾಗಿ ವರ್ತಿಸಿದ ನರ್ತಕಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
