ಮಂಡ್ಯ:ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ನಮ್ಮ ನಾಯಕರೇ. ಅವರ ಬಗ್ಗೆ ನನಗೆ ಈಗಲೂ ಗೌರವ ಇದೆ. ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡೋ ಅಭ್ಯಾಸ ನನಗಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆ ಜನರು ದೇವೇಗೌಡರನ್ನ ಮರೆಯಲ್ಲ ಎಂಬ ಎಚ್​ಡಿಕೆ ಹೇಳಿಕೆ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಚಲುವರಾಯಸ್ವಾಮಿ, ದೇವೇಗೌಡರ ಬಗ್ಗೆ ನಮಗೆ ಈಗಲೂ ಗೌರವವಿದೆ. ಅವರಿಗೋಸ್ಕರ ದುಡಿದಿದ್ದೀವಿ. 99ರಲ್ಲಿ 9 ಸೀಟಲ್ಲಿ ನನ್ನೊಬ್ಬನ್ನೇ ಗೆಲ್ಲಿಸಿ ದೇವೇಗೌಡರಿಗೆ ಬೆಂಬಲಕೊಟ್ಟಿದ್ದರು. ದೇವೇಗೌಡರ ಬಗ್ಗೆ ಮರೀರಿ ಅಂತಾ ಯಾರಿಗೂ ಹೇಳಿಲ್ಲ. ಕುಮಾರಸ್ವಾಮಿ ದೊಡ್ಡವರು, ಅವರು ದೇವೇಗೌಡರನೇ ಒಪ್ಪಲ್ಲ. ಆದ್ರಿಂದ ಕುಮಾರಸ್ವಾಮಿ ಬಗ್ಗೆ ಮಾತಾಡೋದು ಬೇಡ ಎಂದರು.ಮಂಡ್ಯ ಜಿಲ್ಲೆಯ ಜನರನ್ನು ಕಟ್ಟಿ ಇಟ್ಟಿಕೊಳ್ಳೋಕೆ ಆಗುತ್ತಾ? ನಮ್ಮ ಜಿಲ್ಲೆಯ ಜನರ ಮೇಲೆ ನಂಬಿಕೆ ಇದೆ. ಅವರ ಮಕ್ಕಳನ್ನ ಅವರು ಪ್ರೀತಿಸ್ತಾರೆ ಎನ್ನುವ ವಿಶ್ವಾಸವಿದೆ ಎನ್ನುತ್ತಾ ಪರೋಕ್ಷವಾಗಿ ಒಕ್ಕಲಿಗರು, ಜಿಲ್ಲೆಯ ಜನರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದರು.
ಇನ್ನು ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್​ಗಾಂಧಿಗೆ ‘ಗೌಡರ ಗೌಡ ರಾಹುಲ್ ಗೌಡ’ ಎಂದು ಮಂಡ್ಯದಲ್ಲಿ ಜೈಕಾರ ಹಾಕಿದ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಆ ಜೈಕಾರದ ಹಿಂದೆ ಯಾವುದೇ ಸ್ಟ್ರ್ಯಾಟಜಿ ಇಲ್ಲ. ಪ್ರೀತಿಯಿಂದ ಯುವಕರು ಆ ರೀತಿ ಕೂಗಿದ್ದಾರೆ. ನನಗೆ ಸ್ವಾಮೀಗೌಡ ಅಂತ ಕರೀತಾರೆ. ‘ನನಗೂ ಗೌಡ ಗೌಡ ಸ್ವಾಮೀಗೌಡ’ ಅಂತ ಕರೆದಿದ್ದಾರೆ‌. ಹಾಗೇ ರಾಹುಲ್​ ಗಾಂಧಿ ಅವರನ್ನ ‘ರಾಹುಲ್ ಗೌಡ’ ಅಂತ ಪ್ರೀತಿ-ಅಭಿಮಾನದಿಂದ ಕರೆದಿದ್ದಾರೆ ಎಂದರು.
ರಾಜ್ಯ ಸರ್ಕಾರ ಮತ್ತು ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಪ್ರವೀಣ್​ ನೆಟ್ಟಾರು ಪತ್ನಿ

ನಮಗೂ ರಾಜಕೀಯ ಮಾಡೋಕೆ ಬರುತ್ತೆ… ಇಡಿ ಕಚೇರಿಯಿಂದ ಹೊರ ಬರುತ್ತಿದ್ದಂತೆ ಸಿಡಿದೆದ್ದ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
