ಬೆಂಗಳೂರು:ಕೇಂದ್ರದ ಮಾಜಿ ಸಚಿವ ಕೆ.ಎಚ್​. ಮುನಿಯಪ್ಪ ಅವರು ಬುಧವಾರ ಜೆಡಿಎಸ್​ ವರಿಷ್ಠ ಎಚ್​.ಡಿ. ದೇವೇಗೌಡರನ್ನು ಹಾಡಿಹೊಗಳಿದ್ದು, ನನ್ನ ಪುತ್ರಿಯೂ ಆದ ಶಾಸಕಿ ರೂಪಾ ಕೂಡ ನನ್ನ ಬೆನ್ನಿಗೆ ನಿಂತಿದ್ದಾರೆ ಎಂದಿದ್ದಾರೆ. ಆ ಮೂಲಕ ಮುನಿಯಪ್ಪ ಜೆಡಿಎಸ್​ ಸೇರಲಿದ್ದಾರೆ ಎಂದು ಹರಿದಾಡುತ್ತಿರುವ ಮಾತಿಗೆ ಮತ್ತಷ್ಟು ಇಂಬು ನೀಡಿದ್ದಾರೆ.
ಅನೇಕ ವಿಚಾರಗಳಲ್ಲಿ ಕಾಂಗ್ರೆಸ್​ ರಾಜ್ಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮುನಿಯಪ್ಪ, ಕೋಲಾರದ ಕೆಲವು ಕಾಂಗ್ರೆಸ್​ ನಾಯಕರ ಬಗ್ಗೆ ಪದೇಪದೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಾಗಾಗಿ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಾಗಿದ ಹಾದಿಯಲ್ಲೇ ಮುನಿಯಪ್ಪ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ನಾನು ಜೆಡಿಎಸ್​ಗೆ ಹೋಗಲು ನಿರ್ಧರಿಸಿಲ್ಲ ಎಂದು ಸ್ವತಃ ಮುನಿಯಪ್ಪ ಅವರೇ ಹೇಳಿದ್ದರಾದರೂ ದೇವೇಗೌಡರನ್ನ ಹಾಡಿ ಹೊಗಳಿದ್ದು ಏಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಬುಧವಾರ ಸುದ್ದಿಗಾರ ಜತೆ ಮಾತನಾಡಿದ ಮುನಿಯಪ್ಪ, ‘ದೇವೇಗೌಡರು ರಾಷ್ಟ್ರದ ಪ್ರಧಾನಿಯಾಗಿದ್ದವರು. ಅವರ ಬಗ್ಗೆ ನನಗೆ ಪೂಜ್ಯ ಮನೋಭಾವ ಇದೆ. ಅವರು ರೈತಪರ ಹೋರಾಟ ಮಾಡಿಕೊಂಡು ಬಂದವರು. ತಮ್ಮ‌ ಇಡೀ ಜೀವನವನ್ನ‌ ಹೋರಾಟ ಮಾಡಿಕೊಂಡು ಬಂದವರು. ನನ್ನ ಪುತ್ರಿ ಶಾಸಕಿ ರೂಪಾ ಕೂಡ ನನ್ನ ಬೆನ್ನಿಗೆ ನಿಂತಿದ್ದಾರೆ. ಅವಳು ಪಕ್ಷದ ಶಿಸ್ತಿನ ಸಿಪಾಯಿ. ಹೋರಾಟ ಮಾಡಿ ಗೆದ್ದಿದ್ದಾಳೆ. ದೇವೇಗೌಡರ ಜತೆ ಒಳ್ಳೆಯ ಬಾಂಧವ್ಯ ಇದೆ. ಆರೋಗ್ಯ ವಿಚಾರಿಸಲು ಆಗಾಗ್ಗೆ ಭೇಟಿ ಮಾಡುತ್ತಿದ್ದೆ‌. ಕೆಲವೊಂದು ರಾಜಕೀಯ ವಿಚಾರಗಳನ್ನೂ ಅವರ ಬಳಿ ಚರ್ಚಿಸುತ್ತಿದ್ದೆ. ಇತ್ತೀಚೆಗೆ ಅವರ ಬಳಿ ಮಾತನಾಡಲು ಸಾಧ್ಯವಾಗಿಲ್ಲ’ ಎಂದರು.
‘ಹೈಕಮಾಂಡ್​ ಅನ್ನು ನಾನು ದೂರುವುದಿಲ್ಲ. ನಾನು ಯಾವ ಪಕ್ಷಕ್ಕೂ ಹೋಗೋದಿಲ್ಲ. ಪಕ್ಷದಲ್ಲೇ ಉಳಿಯುತ್ತೇನೆ. ತೀರ್ಮಾನ ಮಾಡಲು ಬಹಳ ದೂರ ಇದೆ. ಅದಕ್ಕೂ ಮೊದಲು ನಾಯಕರು ಏನು ಹೇಳುತ್ತಾರೋ ನೋಡುತ್ತೇನೆ. ಗೊಂದಲ ಸರಿಪಡಿಸುತ್ತಾರೆ ಎಂಬ ವಿಶ್ವಾಸ ಇದೆ. ನಾನು ನಿಷ್ಠಾವಂತ ಕಾರ್ಯಕರ್ತ. ನನಗೆ ಮತ ಹಾಕಿರುವ ಐದು ಲಕ್ಷ ಜನ ಇದ್ದಾರೆ. ಕ್ಷೇತ್ರದಲ್ಲಿ ಓಡಾಡುತ್ತೇನೆ. ಅವರ ಅಭಿಪ್ರಾಯ ಆಲಿಸುತ್ತೇನೆ. ಜನರು ಏನು ಹೇಳುತ್ತಾರೋ ಅದರ ಮೇಲೆ ನನ್ನ ತೀರ್ಮಾನ ನಿಂತಿದೆ’ ಎಂದು ಮುನಿಯಪ್ಪ ವಿವರಿಸಿದರು.
30 ವರ್ಷ ಸಂಸದರಾಗಿದ್ದ ಮುನಿಯಪ್ಪರನ್ನು ದೂರವಿಟ್ಟು ಮಾಜಿ ಶಾಸಕರಾದ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್​, ಮುಳಬಾಗಿಲಿನ ಕೊತ್ತೂರು ಮಂಜುನಾಥ್​ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು ಮುನಿಯಪ್ಪಗೆ ಸಹಿಸಲಾಗುತ್ತಿಲ್ಲ. ಜಿಲ್ಲೆಯಲ್ಲಿ ಪಕ್ಷದ ಮೇಲಿನ ಹಿಡಿತ ಮುನಿಯಪ್ಪರ ಕೈಯಿಂದ ಜಾರುತ್ತಿದ್ದು, ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣ ಸದೃಢವಾಗುತ್ತಿದೆ. ಕಳೆದ ಬಾರಿ ಎಸ್​.ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದ ಕೊತ್ತೂರು, ಸುಧಾಕರರೆಡ್ಡಿ ಪಕ್ಷ ಸೇರ್ಪಡೆ ವಿರುದ್ಧ ಸೆಟೆದು ನಿಂತಿರುವ ಮುನಿಯಪ್ಪ, “ರ್ನಿಲಕ್ಷ್ಯ”ವನ್ನು ತಿಂಗಳೊಳಗೆ ಸರಿಪಡಿಸಲು ಗಡುವು ವಿಧಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೆ.ಎಚ್​.ಮುನಿಯಪ್ಪ ಜೆಡಿಎಸ್​ಗೆ ಸೇರುತ್ತಾರೆ ಎಂಬ ಚರ್ಚೆಯೂ ಶುರುವಾಗಿದೆ.
ಮಾಜಿ ಸಚಿವ ರಮೇಶ್​ ಕುಮಾರ್​ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಮುನಿಯಪ್ಪ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಜೆಡಿಎಸ್​ ಮೂಲಗಳು ತಿಳಿಸಿವೆ. ಆದರೆ ಮುನಿಯಪ್ಪ ಕಾಂಗ್ರೆಸ್​ ತೊರೆಯುವ ಬಗ್ಗೆ ಎಲ್ಲೂ ಬಹಿರಂಗಪಡಿಸಿಲ್ಲ.
ಚಂದ್ರಶೇಖರ ಗುರೂಜಿ ಹಂತಕರ ಬಂಧನ: ಅಸಲಿ ವಿಚಾರ ಮುಚ್ಚಿಟ್ರಾ ಪೊಲೀಸರು?

ಹತ್ಯೆಗೂ ಮುನ್ನ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಮುಂದೆ ಹಂತಕರ ಹೈಡ್ರಾಮ ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
