ಶಿವಮೊಗ್ಗ:ದಾವಣಗೆರೆಯಲ್ಲಿ ಆಯೋಜಿಸಿದ್ದ ಸಿದ್ದರಾಮೋತ್ಸವಕ್ಕೆ ಸೇರಿದ್ದ ಜನರನ್ನು ನೋಡಿ ನಾವು(ಬಿಜೆಪಿ) ಪ್ರತಿನಿತ್ಯ ನಿದ್ರೆ, ಊಟ, ಉಪಾಹಾರ ಏನನ್ನೂ ಮಾಡುತ್ತಿಲ್ಲ… ಎಂದು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯ ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನು ನೋಡಿ ಬಿಜೆಪಿಗೆ ಶಾಕ್​ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಸಿದ್ದರಾಮೋತ್ಸವದಂತಹ ನೂರು ಉತ್ಸವಗಳನ್ನು ಮಾಡಿದ್ದೇವೆ. ಪ್ರತಿ ಬಾರಿಯೂ ಬಿಜೆಪಿ ಒಗ್ಗಟ್ಟಿನಿಂದ ಇಂಥ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್​ ಒಗ್ಗಟ್ಟಾಗಿ ಸಿದ್ದರಾಮಯ್ಯ ಅವರ ಜನ್ಮದಿನ ಆಚರಿಸಿದೆ. ಅದೇ ಅವರಿಗೆ ಸಮಾಧಾನ ಎಂದರು.
ಕಾಂಗ್ರೆಸ್​ ನಾಯಕರು ಒಟ್ಟಾಗಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಸ್​ನಲ್ಲಿ ಒಗ್ಗಟ್ಟು ಮೂಡುವುದು ಸುಳ್ಳು. ಯಾವತ್ತೂ ಅವರು ಒಂದಾಗುವುದಿಲ್ಲ, ಸದ್ಯ ಸಿದ್ದರಾಮೋತ್ಸವ ಕುರಿತು ಚರ್ಚೆ ಬೇಡ. ರಾಷ್ಟ್ರದ್ರೋಹಿಗಳನ್ನು ಬೆಂಬಲಿಸಬೇಡಿ ಎಂಬ ಸಲಹೆ ನೀಡಿದ್ದೆ. 75ನೇ ಜನ್ಮದಿನ ಆಚರಿಸಿ ಸಂಭ್ರಮಪಟ್ಟಿದ್ದಾರೆ. ಎಲ್ಲರೂ ಖುಷಿಯಾಗಿರಲಿ ಎಂದು ಹಾರೈಸಿದರು.
ರಾಹುಲ್​ ಗಾಂಧಿ ಅವರು ಕೈ ಸನ್ನೆ ಮಾಡಿದಂತೆ ಸಿದ್ದರಾಮಯ್ಯ ಅವರನ್ನು ತಬ್ಬಿಕೊಂಡು ಡಿ.ಕೆ.ಶಿವಕುಮಾರ್​ ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್​ ನಾಯಕರು ಎಂದಿಗೂ ಒಂದಾಗಲ್ಲ. ಕಾಂಗ್ರೆಸ್​ ನಾಯಕರು ಮತ್ತೊಮ್ಮೆ ಅಧಿಕಾರಕ್ಕೇರುವ ಭ್ರಮೆಯಲ್ಲಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗುವುದಿರಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವುದೇ ಅನುಮಾನ ಎಂದು ಲೇವಡಿ ಮಾಡಿದರು.
ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

https://www.vijayavani.net/a-fake-doctors-mistake-buffalo-calf-died/
ಗರ್ಭ ಧರಿಸಿದ್ದ ಎಮ್ಮೆಗೆ ಬ್ಲೇಡ್​ನಿಂದ ಶಸ್ತ್ರಚಿಕಿತ್ಸೆ: ನಕಲಿ ವೈದ್ಯನ ಎಡವಟ್ಟಿಗೆ ಎಮ್ಮೆ-ಕರು ಸಾವು

ಜಮೀರ್​ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕೆಜಿಎಫ್​​ ಬಾಬು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
