ಬಾಗಲಕೋಟೆ:ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಆ ತಾಯಿ ಗರ್ಭಿಣಿಯೂ ಆಗಲ್ಲ, ಕೂಸನ್ನೂ ಹೆರುವುದಿಲ್ಲ… ಹಾಗಾಗಿ ಕುಲಾಯಿ ಹೊಲಿಸುವ ಪ್ರಸಂಗವೂ ಬರಲ್ಲ… ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
ಜಮಖಂಡಿಯಲ್ಲಿ ಗುರುವಾರ ಮಾತನಾಡಿದ ಲಕ್ಷ್ಮಣ ಸವದಿ, ಕಾಂಗ್ರೆಸ್​ ವಿರುದ್ಧ ನಾಲಗೆ ಹರಿಯಬಿಟ್ಟಿದ್ದಾರೆ. ‘ಕಾಂಗ್ರೆಸ್ ಬಗ್ಗೆ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸುತ್ತಾರೆ’ ಅಂತಾರೆ. ನಾನು ಈ ಮಾತನ್ನ ಒಪ್ಪಲ್ಲ. ಗರ್ಭಿಣಿ ಆದರೆ ತಾನೇ ಕುಲಾಯಿ ಹೊಲೆಸುವುದು. ಕಾಂಗ್ರೆಸ್​ನಲ್ಲಿ ಕೂಸು ಹುಟ್ಟಲ್ಲ, ಕುಲಾಯಿ ಹೊಲೆಸುವ ಪ್ರಸಂಗವೂ ಬರಲ್ಲ ಎಂದು ಸವದಿ ಹೇಳಿದ್ದು, ಸಾರ್ವಜನಿಕ ವಲಯದಲ್ಲೂ ಈ ಮಾತಿಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಈ ಪಕ್ಷದಲ್ಲಿ ಸಾಕಷ್ಟು ಅಸಮಧಾನ ಇದೆ. ಸಿದ್ದರಾಮಯ್ಯ ಈಗಾಗಲೇ ಐದು ವರ್ಷ ಮುಖ್ಯಮಂತ್ರಿ ಆಗಿದ್ದಾರೆ. ಅಧಿಕಾರ ಅನುಭವಿಸಿ ಮತ್ತೆ ಸಿಎಂ‌ ಆಗುವುದು ಸರಿಯಲ್ಲ ಅಂತ ಸ್ವಪಕ್ಷದಲ್ಲೇ ಹಲವರು ಹೇಳ್ತಾರೆ. ಡಿ.ಕೆ.ಶಿವಕುಮಾರ್​ ಮುಖ್ಯಮಂತ್ರಿ ಆಗಬೇಕು ಅಂತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ನನಗೆ ವಯಸ್ಸಾಗಿದೆ, ಒಮ್ಮೆಯಾದರೂ ಸಿಎಂ ಆಗಿ ನಿವೃತ್ತಿ ಆಗಬೇಕು ಎಂಬ ಆಲೋಚನೆಯಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷನಾಗಿ ಹೆಚ್ಚು ಕಾಲ ನಿಷ್ಠೆಯಿಂದ ಕೆಲಸ ಮಾಡಿದರೂ ನನ್ನನ್ನು ಸೋಲಿಸಿದ್ರು ಎನ್ನುವ ಬೇಸರ ಪರಮೇಶ್ವರ್​ ಅವರದ್ದು. ಜಿ.ಪರಮೇಶ್ವರ್​ ಅವರಿಗೂ ಸಿಎಂ ಆಗುವ ಆಸೆ ಇದೆ. ಈಗ ಎಚ್​.ಸಿ. ಮಹದೇವಪ್ಪ ಕೂಡ ಸಿಎಂ ಆಗಬೇಕು ಅಂತಿದ್ದಾರೆ. ಇನ್ನು ಒಂದೆರಡು ತಿಂಗಳು ಕಳೆದರೆ ಕಾಂಗ್ರೆಸ್​ನಲ್ಲಿ ಎರಡು ಡಜನ್ ಜನರು ಸಿಎಂ ಆಗಲು ಎದ್ದು ನಿಲ್ಲುವ ಸಂಭವ ಇದೆ ಎಂದು ಲೇವಡಿ ಮಾಡಿದ ಸವದಿ, ಕಾಂಗ್ರೆಸ್ಸಿನ ತಾಯಿ ಬಂಜೆ ಆಗಿದ್ದಾಳೆ. ಗರ್ಭಿಣಿಯೂ ಆಗಲ್ಲ, ಕೂಸನ್ನೂ ಹೆರುವುದಿಲ್ಲ… ಕುಲಾಯಿ ಹೊಲಿಸುವ ಪ್ರಸಂಗವೂ ಬರಲ್ಲ… ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆ ಇದೆ. ದೋಣಿಯನ್ನ ದಡ ಮುಟ್ಟಿಸಲು ಪರಿಣಿತ ನಾವಿಕ ಬೇಕು. ನಾವಿಕ ಇಲ್ಲದ ದೋಣಿಯಲ್ಲಿ ಕೂರಲು ಯಾರೂ ಮುಂದೆ ಬರಲ್ಲ. ಕಾಂಗ್ರೆಸ್ ಮುಳುಗುವ ಹಡಗು. ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ ಬಿಜೆಪಿಯೇ ಆಡಳಿತಕ್ಕೆ ಬರುತ್ತೆ. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಹುಮ್ಮಸ್ಸು, ಆತ್ಮಸ್ಥೈರ್ಯ ಬಂದಿದೆ. ಸಿದ್ದರಾಮೋತ್ಸವ ಅಲ್ಲ, ಸಿದ್ದರಾಮ ಕೊನೆಗಾಲೋತ್ಸವ ಆಗುತ್ತೆ ಎಂದು ಲಕ್ಷ್ಮಣ ಸವದಿ ವ್ಯಂಗ್ಯವಾಡಿದರು.
ಮಂಗಳೂರಲ್ಲಿ ವಿದ್ಯಾರ್ಥಿಗಳ ಚುಂಬನ ವಿಡಿಯೋ ವೈರಲ್​ ಬೆನ್ನಲ್ಲೇ ಕಾಮಪುರಾಣ ಲೀಕ್​!

ವಿದ್ಯಾರ್ಥಿಗಳ ಕಿಸ್ಸಿಂಗ್​ ಹುಚ್ಚಾಟ: ಮಂಗಳೂರು ಪೊಲೀಸ್​ ಕಮಿಷನರ್​ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ

ಆರತಕ್ಷತೆ ವೇಳೆ ಕುಸಿದು ಬಿದ್ದು ಮದುಮಗ ಸಾವು! ಹೊಸಪೇಟೆಯಲ್ಲಿ ದುರಂತ ಘಟನೆ

Sign in to your account
Please enter an answer in digits:6 + 15 =
Remember me
