ದಾವಣಗೆರೆ:ವಿಧಾನ ಪರಿಷತ್​ ಮಾಜಿ ಸದಸ್ಯ ಮುದೇಗೌಡ್ರ ವೀರಭದ್ರಪ್ಪ(86) ಅವರು ಮಂಗಳವಾರ ನಿಧನರಾದರು.
ದಾವಣಗೆರೆಯ ತರಳಬಾಳು ಬಡಾವಣೆಯಲ್ಲಿ ವಾಸವಿದ್ದ ಮುದೇಗೌಡ್ರ ವೀರಭದ್ರಪ್ಪ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಮೃತರ ಇಚ್ಛೆಯಂತೆ ಅವರ ದೇಹವನ್ನು ದಾವಣಗೆರೆಯ ಜೆಜೆಎಂಸಿ ವೈದ್ಯಕೀಯ ಕಾಲೇಜಿನ ಅಂಗಶಾಸ್ತ್ರ ವಿಭಾಗಕ್ಕೆ ಬುಧವಾರ ಬೆಳಗ್ಗೆ 10.30ಕ್ಕೆ ದಾನ ಮಾಡಲಾಗುವುದು. ಅವರ ಆಸೆಯಂತೆ ಶಿವಗಣಾರಾಧನೆ ಬದಲಾಗಿ ಅದೇ ಹಣವನ್ನು ಅನ್ನದಾನ, ಬಡಮಕ್ಕಳ ಸತ್ಕಾರ್ಯಗಳಿಗೆ ಬಳಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಬಿಎ ಪದವೀಧರರಾಗಿದ್ದ ವೀರಭದ್ರಪ್ಪ ಅವರು 1988ರಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್​ಗೆ ಚುನಾಯಿತರಾಗಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದರು. ಮಂಗಳೂರಿನಿಂದ ಪದವೀಧರ ಕ್ಷೇತ್ರದ ಚುನಾವಣೆಗೂ ಸ್ಪರ್ಧಿಸಿದ್ದರು.
ಮೈಸೂರು ವಿಶ್ವವಿದ್ಯಾಲಯದಲ್ಲಿ (1977) ಒಂಬತ್ತು ವರ್ಷ ಹಾಗೂ ಕುವೆಂಪು ವಿವಿಯಲ್ಲಿ 11 ವರ್ಷ ಸೆನೆಟ್​ ಹಾಗೂ ಸಿಂಡಿಕೇಟ್​ ಸದಸ್ಯರಾಗಿ ಮುದೇಗೌಡ್ರ ವೀರಭದ್ರಪ್ಪ ಸೇವೆ ಸಲ್ಲಿಸಿದ್ದರು. ಸೂರತ್ಕಲ್​ನ ಕೆಆರ್​ಇಸಿ ಕಾಲೇಜಿನಲ್ಲಿ ಆಡಳಿತ ನಿರ್ದೇಶಕರಾಗಿಯೂ, ದಾವಣಗೆರೆಯ ನೂತನ ವಿಜ್ಞಾನ ಪಿಯು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ದಾವಣಗೆರೆಯಲ್ಲಿ ಪಿಜಿ ಸೆಂಟರ್​ ಹಾಗೂ ನೂತನ ವಿವಿ ಸ್ಥಾಪನೆಗೆ ಕಾರಣಕರ್ತರೂ ಆಗಿದ್ದಾರೆ.

ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ರಟ್ಟಿಹಳ್ಳಿಯ ಕಬ್ಬಿಣಕಂಥಿ ಮಠದ ಶ್ರೀಗಳು, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಂ.ಬಸವರಾಜನಾಯ್ಕ ಹಾಗೂ ಅಭಿಮಾನಿಗಳು ಮುದೇಗೌಡ್ರ ವೀರಭದ್ರಪ್ಪರ ಅಂತಿಮ ದರ್ಶನ ಪಡೆದರು.
ಸಾಕಿದ ಯಜಮಾನನನ್ನೇ ಕೊಂದ ಕಾಂಗರೂ! ಆಸ್ಟ್ರೇಲಿಯಾದಲ್ಲಿ 8 ದಶಕದ ಬಳಿಕ ಭೀಕರ ಘಟನೆ

ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಗಂಡ… ಚೀರಾಡುತ್ತಾ ಗಂಡನನ್ನೇ ಬಿಗಿದಪ್ಪಿಕೊಂಡ ಪತ್ನಿ! ಮೈಸೂರಲ್ಲಿ ಭೀಕರ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 3 =
Remember me
