ಶಿವಮೊಗ್ಗ:ಭಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷನ ಹತ್ಯೆಗೂ ಮುನ್ನ ಕೊನೇ ಕ್ಷಣದಲ್ಲಿ ನಡೆದ ಘಟನೆಯೊಂದು ಬಹಳಷ್ಟು ನಿಗೂಢ ಎನಿಸಿದೆ. ಹತ್ಯೆಗೂ ಮುನ್ನ ಹರ್ಷನ ಮೊಬೈಲ್​ಗೆ ಹುಡುಗಿಯರಿಬ್ಬರು ಕರೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭಾನುವಾರ(ಫೆ.20) ಹುಡುಗಿಯರಿಬ್ಬರು ಪದೇಪದೆ ಹರ್ಷನ ಮೊಬೈಲ್​ಗೆ ಕರೆ ಮಾಡಿ, ‘ನಾವು ನಿಮ್ಮ ಸ್ನೇಹಿತರು’ ಎನ್ನುತ್ತಿದ್ದರು. ಈ ವೇಳೆ ‘ನನ್ನಿಂದ ಏನಾಗಬೇಕು?’ ಎಂದು ಹರ್ಷ ಕೇಳಿದ್ದಾನೆ. ‘ಇವರು ಯಾರು?’ ಎಂದು ಜತೆಯಲ್ಲಿದ್ದ ಸ್ನೇಹಿತರನ್ನೂ ಹರ್ಷ ಕೇಳಿದ್ದಾನೆ. ಇದಾದ ಬಳಿಕ ಸ್ನೇಹಿತರ ಹೋದ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದಿತ್ತು ಎಂದು ಮೂಲಗಳು ತಿಳಿಸಿವೆ. ಹರ್ಷನ ಮೊಬೈಲ್ ನಾಪತ್ತೆಯಾಗಿದ್ದು, ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಹರ್ಷನ ಮೊಬೈಲ್ ಎಲ್ಲಿದೆ? ಅನ್ನೊದು ಇನ್ನೂ ಗೊತ್ತಾಗಿಲ್ಲ. ಆರೋಪಿಗಳ ಬಳಿ ಇದೆಯೇ? ಹರ್ಷನ ಕೊಲೆಗೆ ಆರೋಪಿಗಳು ಹುಡುಗಿಯರನ್ನು ಬಳಸಿಕೊಂಡರೇ? ಸಹಾಯ ಕೇಳುವ ನೆಪದಲ್ಲಿ ಹರ್ಷನಿಗೆ ಕರೆ ಮಾಡಿ ಖೆಡ್ಡಾ ತೋಡಿದ್ರಾ? ನೀವ್ಯಾರು ಎಂದು ಕೇಳಿದರೂ ಆ ಹುಡುಗಿಯರೇಕೆ ಹರ್ಷನಿಗೆ ಮಾಹಿತಿ ಕೊಡಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸಿವೆ. ತನಿಖೆ ಬಳಿಕವಷ್ಟೇ ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲಿದೆ.(ದಿಗ್ವಿಜಯ ನ್ಯೂಸ್)
‘ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ… ಹುಡುಗಿ ಜತೆ ಹೋದ… ಕೇಸ್ ಇಲ್ಲ’

ಮನಸ್ಸಿಗೆ ನಾಟುತ್ತೆ ಹರ್ಷನ ಸಹೋದರಿ ಮಾತು: ಇದೆಲ್ಲಾ ಬೇಕಾ? ಕೈ ಮುಗಿದು ಬೇಡಿಕೊಳ್ಳುವೆ ಪ್ಲೀಸ್​ ಬಿಟ್ಬಿಡಿ…

ತಗೊಂಡಿದ್ದು 10 ಸಾವಿರ, ಕಟ್ಟಿದ್ದು 7 ಲಕ್ಷ ರೂ.! ಆನ್​ಲೈನ್​ ಆ್ಯಪ್​ನಲ್ಲಿ ಸಾಲ ಪಡೆದವನಿಗೆ ಬಂದ ಕಷ್ಟ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
