ಹಾಸನ‌:ಅರಸೀಕೆರೆ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಜಮೀನಿನಲ್ಲಿ ಮಹಿಳೆಯರಿಬ್ಬರ ಬರ್ಬರ ಹತ್ಯೆಯಾಗಿದ್ದು, ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.
ಮಂಜುಳಾ(28) ಮತ್ತು ಇವರ ತಾಯಿ ಭಾರತಿ(56) ಕೊಲೆಯಾದ ದುರ್ದೈವಿಗಳು. ಮಂಜುಳಾರ ಪತಿ ಶ್ರೀಧರ್ ಕೊಲೆ ಮಾಡಿದವ. ಮಂಜುಳಾ ಮತ್ತು ಶ್ರೀಧರ್​ಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆ ಆದ ಆರಂಭದಲ್ಲಿ ಇವರಿಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು.
ಗಂಡನಿದ್ದರೂ ಮಂಜುಳಾಗೆ ರಂಗಾಪುರ ಗ್ರಾಮದ ಯುವಕನೊಂದಿಗೆ ಅಕ್ರಮ ಸಂಬಂಧ ಇತ್ತಂತೆ. ಎಷ್ಟೇ ಬುದ್ದಿವಾದ ಹೇಳಿದರೂ ಆಕೆ ತನ್ನ ಹಳೇ ಚಾಳಿ ಮುಂದುವರಿದ್ದಳಂತೆ. ಇದಕ್ಕೆ ಆಕೆಯ ಅಮ್ಮನ ಸಾಥ್​ ಕೂಡ ಇತ್ತಂತೆ. ಸೋಮವಾರ ಸಂಜೆ ಜಮೀನು ಬಳಿ ಪ್ರಿಯಕರನೊಂದಿಗೆ ತನ್ನ ಪತ್ನಿ ಇರುವುದನ್ನ ಕಂಡು ಕುಪಿತಗೊಂಡ ಆಕೆಯ ಗಂಡ ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ. ಅಲ್ಲಿಯೇ ಇದ್ದ ಮಂಜುಳಾರ ತಾಯಿಯನ್ನೂ ಬಡಿದು ಕೊಂದಿದ್ದಾನೆ.
ಅಮ್ಮ-ಮಗಳು ಇಬ್ಬರೂ ರಕ್ತದದ ಮಡುವಿನಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿದ್ದು, ಸ್ಥಳಕ್ಕೆ ಬಂದ ಗಂಡಸಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಶ್ರೀಧರ್​ನನ್ನು ಬಂಧಿಸಿದ್ದಾರೆ. ಎಸ್ಪಿ ಶ್ರೀನಿವಾಸಗೌಡ, ಡಿವೈಎಸ್ಪಿ ನಾಗೇಶ್, ಗ್ರಾಮಾಂತರ ಠಾಣೆ ಸಿಪಿಐ ವಸಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತ ಅಪ್ಪ ಜೈಲು ಪಾಲು, ಅಮ್ಮ-ಅಜ್ಜಿ ಮಸಣ ಸೇರಿದ್ದು, ಮಕ್ಕಳಿಬ್ಬರು ಅನಾಥವಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜೋಡಿ ಕೊಲೆಗೆ ಗ್ರಾಮಸ್ಥರೂ ಬೆಚ್ಚಿಬಿದ್ದಿದ್ದಾರೆ.
ಹೋಟೆಲ್​ಗೆ ಬೀಗ ಹಾಕಿ ಒಳಗಡೆ ವೇಶ್ಯಾವಾಟಿಕೆ! ಪೊಲೀಸರಿಗೆ ಸಿಕ್ಕಿಬಿದ್ದ 8 ಯುವಕರು, ಇಬ್ಬರು ಯುವತಿಯರು

ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬಾವಿಗೆ ಹಾರಿ ಪ್ರಾಣಬಿಟ್ಟ ಗಂಡ, ಮನೆಯ ಮೇಲೆ ನೇಣಿಗೆ ಕೊರಳೊಡ್ಡಿದ ಪತ್ನಿ! ಡೆತ್​ನೋಟ್​ನಲ್ಲಿದೆ ಸಾವಿನ ರಹಸ್ಯ

ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − three =
Remember me
