ಕಾರ್ಕಳ:ಫೇಸ್​ಬುಕ್​ ಮೂಲಕ ಪರಸ್ಪರ ಪರಿಚಯವಾದ ಯುವಜೋಡಿ, ಪ್ರೀತಿಸಿ ದಾಂಪತ್ಯ ಜೀವನಕ್ಕೂ ಕಾಲಿಟ್ಟಿತ್ತು. ವರ್ಷ ಕಳೆಯುತ್ತಿದ್ದಂತೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಗಂಡನ ವಿರುದ್ಧ ಪತ್ನಿ ಕಾರ್ಕಳ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನ ಸೌಮ್ಯಾ(33) ದೂರು ನೀಡಿದವರು. ಸೌಮ್ಯಾ ಅವರಿಗೆ ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಕಾಸರಗೋಡು ಜಿಲ್ಲೆಯ ಉಪ್ಪಳ ಬೇಕೂರು ನಿವಾಸಿ ಸುನೀಲ್ ಟಿ. ಎಂಬುವವರು ಪರಿಚಯವಾಗಿದ್ದರು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದು, 2019ರ ಮೇ 12ರಂದು ಕಾರ್ಕಳದ ಪೆರ್ವಾಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಾಹವಾಗಿದ್ದರು. 2019ರ ಜೂನ್ 1ರಂದು ವಿವಾಹ ನೋಂದಣಿ ಮಾಡಿಸಿಕೊಂಡಿದ್ದರು.
ವರ್ಷದವರೆಗೆ ದಾಂಪತ್ಯ ಜೀವನ ನಡೆಸಿದ ಬಳಿಕ ಪತಿ ಸುನೀಲ್​ಗೆ ವರದಕ್ಷಿಣೆ ದಾಹ ಶುರುವಾಗಿದೆ. 5 ಲಕ್ಷ ರೂ. ವರದಕ್ಷಿಣೆ ಕೊಡಬೇಕೆಂದು ಒತ್ತಾಯಿಸಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದನು. ಆತನ ವರ್ತನೆಯಿಂದ ಬೇಸತ್ತ ಸೌಮ್ಯಾ, ಚಿನ್ನ ಅಡವಿಟ್ಟು 80 ಸಾವಿರ ರೂ. ನೀಡಿದ್ದರು ಎನ್ನಲಾಗಿದೆ.
2019ರ ಜೂನ್ 30ರಂದು 3 ಲಕ್ಷ ರೂ. ಖರ್ಚು ಮಾಡಿ ಆರತಕ್ಷತೆಯನ್ನು ಕಾರ್ಕಳದಲ್ಲಿ ನಡೆಸಿದ್ದು, ಬಳಿಕ ಸುನೀಲ್ ತನ್ನ ಮನೆಗೆ ಕರೆದುಕೊಂಡು ಹೋಗಿಲ್ಲ. 2021ರ ನ.17ರ ಬಳಿಕ ಕರೆ ಮಾಡಿಲ್ಲ. ಕರೆ ಮಾಡಬೇಡ ಎಂದು ಬೈಯುತ್ತಿದ್ದರು. ಗಂಡನ ವರ್ತನೆಯಿಂದ ಮಾನಸಿಕವಾಗಿ ನೊಂದ ನಾನು 2022ರ ಮಾರ್ಚ್ 7ರಂದು ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸೌಮ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಅಡ್ಡ ಬಂದ ನಾಯಿ: ಬೈಕ್​ ಸವಾರರಿಬ್ಬರ ಸಾವು

ಆಟವಾಡುತ್ತಲೇ ಅಪ್ಪನ ವಾಹನಕ್ಕೆ ಬಲಿಯಾದ ಕಂದಮ್ಮ! ವಾಹನ ರಿವರ್ಸ್​ ತೆಗೆದುಕೊಳ್ಳುವಾಗ ದುರಂತ

ಬೆಂಗಳೂರಲ್ಲಿ ಬೈಕ್​ ಮೇಲೆ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 9 =
Remember me
