ಬೆಳಗಾವಿ:ಮಕ್ಕಳಗಾದವರನ್ನೇ ಟಾರ್ಗೆಟ್​ ಮಾಡುತ್ತಿದ್ದ ನಕಲಿ ಜ್ಯೋತಿಷಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಸವರಾಜ ದುರ್ಗಪ್ಪ ಬುಡಬುಡಕೇರ (37) ಬಂಧಿತ ನಕಲಿ ಜ್ಯೋತಿಷಿ. ದೋಷ ನಿವಾರಣೆಗೆ ಸಂಪರ್ಕಿಸಿ ಎಂದು ರಾಮ್​ಭಟ್​ ಹೆಸರಿನಲ್ಲಿ ಭಿತ್ತಿಪತ್ರ ಮುದ್ರಿಸಿ, ಜಾಹೀರಾತು ನೀಡುತ್ತಿದ್ದ. ಕರೆ ಮಾಡುತ್ತಿದ್ದ ಮಹಿಳೆಯರಿಗೆ ಜ್ಯೋತಿಷ್ಯ ಹೇಳುತ್ತಿದ್ದ. ಅಷ್ಟೇ ಅಲ್ಲ, ಮಕ್ಕಳಾಗಬೇಕಂದರೆ ಅಭಿಷೇಕ ಮಾಡಬೇಕು ಎಂದೂ ನಂಬಿಸುತ್ತಿದ್ದ.
ಮಕ್ಕಳಾಗಿಲ್ಲ, ಏನಾದರೂ ದೋಷ ಇದೆಯೇ? ಎಂದು ಕಷ್ಟ ಹೇಳಿಕೊಳ್ಳುತ್ತಿದ್ದ ಮಹಿಳೆಯರಿಗೆ ಆನ್​ಲೈನ್​ನಲ್ಲಿ​ ಅಭಿಷೇಕ ಮಾಡಿಸುತ್ತೇವೆ, ಅಭಿಷೇಕ ಮಾಡಿದ ಬಳಿಕ ನಿಮಗೆ ಮಕ್ಕಳಾಗುತ್ತೆ ಎಂದು ನಂಬಿಸಿ ‘ಫೋನ್​ ಪೇ’ ಮೂಲಕ ಸಾವಿರಾರು ರೂ. ಲಪಟಾಯಿಸಿದ್ದ. ನಕಲಿ ಜ್ಯೋತಿಷಿ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆಯರು, ಮಾನಸಿಕವಾಗಿ ಕಿರಿಕಿರಿಯನ್ನೂ ಅನುಭವಿಸಿದ್ದಾರೆ. ಹಲವರಿಗೆ ಇದೇ ರೀತಿ ವಂಚಿಸಿದ್ದ ಬಸವರಾಜ್​ ವಿರುದ್ಧ ಸಿಇಎನ್​ ಠಾಣೆಗೆ ಸಂತ್ರಸ್ತರು ದೂರು ನೀಡಿದ್ದರು. ಸಿಇಎನ್​ ಇನ್​ಸ್ಪೆಕ್ಟರ್​ ಬಿ.ಆರ್​. ಗಡ್ಡೇಕರ ಅವರು ಆರೋಪಿಯನ್ನು ಗುರುವಾರ ಬಂಧಿಸಿ, ಆತನ ಬ್ಯಾಂಕ್​ ಅಕೌಂಟ್​ ಸೀಜ್​ ಮಾಡಿದ್ದಾರೆ.
ಚಾ.ನಗರದಲ್ಲಿ ದುರಂತ: ಕ್ವಾರಿಯಲ್ಲಿ ಬಂಡೆ ಕುಸಿತ, 10ಕ್ಕೂ ಹೆಚ್ಚು ಸಾವಿನ ಶಂಕೆ, ಟಿಪ್ಪರ್​ಗಳು ಚೆಲ್ಲಾಪಿಲ್ಲಿ

ಹರ್ಷನ ಅಕ್ಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿ, ನಾವು ಕಾಂಗ್ರೆಸ್​ನಿಂದ ಅಭ್ಯರ್ಥಿಯನ್ನೇ ಹಾಕಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
