ಚನ್ನಪಟ್ಟಣ:ನಾನು ಪ್ರೇಮಸಾಯಿ ದೇವಮಾನವ. ಜನರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ತಂಡದ ವಿರುದ್ಧ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರ ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಆರೋಪಿಗಳು ನಾಪತ್ತೆಯಾಗಿದ್ದಾರೆ. ನಗರದ ಎಂ.ಜಿ. ರಸ್ತೆಯ ಯಶೋದಮ್ಮ ಎಂಬುವರ ಮನೆಯಲ್ಲಿ 8 ತಿಂಗಳಿಂದ ಸಚಿನ್​ ಅಕಾರಾಂ ಸರ್​ಗರ್​ ಎಂಬಾತ ಜನರ ಸಮಸ್ಯೆ ಪರಿಹರಿಸುತ್ತೇನೆ ಎಂದು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಈ ಬಗ್ಗೆ ತಿಳಿದ ಹಲವರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ಪೈಕಿ ನಗರದ ಮಂಗಳವಾರ ಪೇಟೆಯ ಮರಳು ಹೊಲದ ಸಿಂಧು ಎನ್ನುವವರೂ ಒಬ್ಬರು.
ಒಂದು ದಿನ ಈ ವ್ಯಕ್ತಿ ಯಶೋದಮ್ಮನ ಮನೆ ಚಿಕ್ಕದಾಗಿದೆ. ಪ್ರತಿ ಗುರುವಾರ ಭಜನೆಗೆ ನಿಮ್ಮ ತೋಟದ ಮನೆಯಲ್ಲಿ ಅವಕಾಶ ಕೊಡುವಂತೆ ಸಿಂಧು ಅವರನ್ನು ಕೋರಿದ್ದಾನೆ. ಇದಕ್ಕೆ ಮನೆಯಿಂದಲೂ ಅನುಮತಿ ದೊರೆತಿದ್ದು, ಸುಮಾರು ಮೂರು ತಿಂಗಳು ಪ್ರತಿ ಗುರುವಾರ ಭಜನೆ ನಡೆಯುತ್ತಿತ್ತು. ನಂತರ, ಆತ ನಗರದ ಎಂ.ಜಿ. ರಸ್ತೆಯಲ್ಲಿರುವ ಯಶೋಧಮ್ಮ ಅವರ ಮನೆಗೆ ತೆರಳುತ್ತಿದ್ದ.
ಒಂದು ದಿನ ನಿಮ್ಮ ತೋಟದ ಮನೆ ಬಹಳ ವಿಶಾಲವಾಗಿದೆ. ಅದನ್ನು ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಸಮಿತಿ ಟ್ರಸ್ಟ್​ಗೆ ದಾನವಾಗಿ ಕೊಡಿ ಎಂದು ಒತ್ತಾಯಿಸಿದ್ದಾನೆ. ಆದರೆ, ದಾನ ಮಾಡಲು ಸಿಂಧು ಪತಿ ನಿರಾಕರಿಸಿದ್ದಾರೆ.
ಬೆಳಕಿಗೆ ಬಂದಿದ್ದು ಹೇಗೆ?:ಜು.13ರಂದು ಡಾ.ಸಾಯಿಕುಮಾರಿ, ಕೃಷ್ಣಯ್ಯ ಮತ್ತು ಗಿರೀಶ್​ ವಿಜೇಂದ್ರ ಎನ್ನುವವರು ನಗರದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮಾ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ಭಕ್ತರು ಸಚಿನ್​ ಅಕಾರಾಂ ಸರ್​ಗರ್​ನನ್ನು ನೋಡುತ್ತಿದ್ದಂತೆ ಈತ ಪ್ರೇಮಸಾಯಿ ಅಲ್ಲ ಎನ್ನುವುದನ್ನು ಖಾತ್ರಿಪಡಿಸಿದ್ದಾರೆ. ಇದಾದ ನಂತರ ಅನುಮಾನಗೊಂಡ ಕೆಲ ಭಕ್ತರು ಕೊಲ್ಲಾಪುರಕ್ಕೆ ತೆರಳಿ ಈತನ ಪೂರ್ವಾಪರ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದೆ.
ಆದರೆ, ಇಷ್ಟರಲ್ಲಾಗಲೇ ಹಲವರಿಂದ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಸ್ವತಃ ದೂರುದಾರರಾದ ಸಿಂಧು 1.5 ಲಕ್ಷ ರೂ., ವೆಂಕಟೇಶ್​, ಚನ್ನೇಗೌಡ ಎನ್ನುವವರು ತಲಾ 1 ಲಕ್ಷ ರೂ, ಎಚ್​.ಜೆ.ರಾಜೇಶ್​ ಎನ್ನುವವರು 2 ಲಕ್ಷ ರೂ.ಗಳನ್ನು ಕೊಟ್ಟು ಮೋಸ ಹೋಗಿದ್ದಾರೆ.
ಇದೀಗ, ಸಚಿನ್​ ಅಕಾರಾಂ ಸರ್​ಗರ್​, ವಿನಾಯಕ ರಾಜ್​, ಸಾಯಿರಾಜ್​, ಜಯಂತ್​, ಯಶೋದಮ್ಮ, ಉಮಾಶಂಕರ್​, ಪ್ರಶಾಂತ್​ ಎನ್ನುವವರು ತಲೆಮರೆಸಿಕೊಂಡಿದ್ದಾರೆ.
ಬೇಡ ಬೇಡ ಅಂದ್ರೂ ಪ್ರಿಯಕರನ ಜತೆ ಸುತ್ತಾಡಿ ಹೋಟೆಲ್​ಗೆ ಹೋದ ಮೈಸೂರಿನ ಬಿಸಿಎ ವಿದ್ಯಾರ್ಥಿನಿ ದುರಂತ ಅಂತ್ಯ!

ಡ್ರಾಪ್​ ಕೊಡುವ ನೆಪದಲ್ಲಿ ಅತ್ಯಾಚಾರ: ಬೆಂಗಳೂರಲ್ಲಿ ಇಬ್ಬರ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twenty =
Remember me
