ದೊಡ್ಡಬಳ್ಳಾಪುರ:ಸಂಬಂಧಿಕರ ಆಸ್ತಿ ಕಬಳಿಸಲು ಸಂಚು ನಡೆಸಿದ ವ್ಯಕ್ತಿಯೊಬ್ಬ ಪಹಣಿದಾರನನ್ನೇ ತಂದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಆಸ್ತಿ ಮಾರಾಟ ಮಾಡಿರುವ ಆರೋಪ ಚನ್ನಾಪುರದಲ್ಲಿ ಕೇಳಿಬಂದಿದೆ.
ದೊಡ್ಡಬಳ್ಳಾಪುರ ತಾಲೂಕು ಚೆನ್ನಾಪುರ ಗ್ರಾಮದ ಪಿಳ್ಳಪ್ಪ ಎಂಬುವರಿಗೆ 2.12 ಎಕರೆ ಜಮೀನು ಇದೆ. ಇವರಿಗೆ ಇಬ್ಬರು ಪತ್ನಿಯರಿದ್ದು, ಪಿಳ್ಳಪ್ಪ ನಿಧನ ನಂತರ ಇವರ ಮಕ್ಕಳ ನಡುವೆ ಆಸ್ತಿ ಹಂಚಿಕೆ ವಿಚಾರಕ್ಕೆ ಜಗಳವಾಗಿತ್ತು. ಆದರೆ, ಆಸ್ತಿ ಮಕ್ಕಳ ಹೆಸರಿಗೆ ಆಗಿರಲಿಲ್ಲ, ಇದರ ಸುಳಿವು ಅರಿತ ಸಂಬಂಧಿಕನೇ ಆದ ಸಿ.ಮಂಜುನಾಥ್​ ಈ ಆಸ್ತಿ ಹೊಡೆಯುವ ಸಂಚು ನಡೆಸಿದ್ದ.
ಪಿಳ್ಳಪ್ಪರು ತನ್ನ ತಂದೆಯೆಂದು ನಕಲಿ ವಂಶವೃಕ್ಷ ಸೇರಿ ಹಲವು ದಾಖಲೆ ಸೃಷ್ಟಿಸಿದ ಮಂಜುನಾಥ್​, 2019ರಲ್ಲಿ ಪೌತಿ ಖಾತೆ ಮಾಡಿಸಿಕೊಂಡಿದ್ದಾನೆ. 2022ರ ಜನವರಿಯಲ್ಲಿ ಬೆಂಗಳೂರು ಮೂಲದ ಸಲ್ಮಾನ್​ ದಾವೂದ್​ ಎಂಬುವರಿಗೆ 24 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ನಮಗೆ ತಿಳಿಯದೆ ಲಕ್ಷಾಂತರ ರೂ. ಮೌಲ್ಯದ ಜಮೀನು ಮಾರಿ ವಂಚನೆ ನಡೆಸಿದ್ದಾನೆಂದು ಆರೋಪಿಸಿ ಪಿಳ್ಳಪ್ಪನ ಮಕ್ಕಳು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಸಿ.ಮಂಜುನಾಥ್​ ಅಸಲಿ ತಂದೆ ಹೆಸರು ಚಿಕ್ಕಮುನಿಯಪ್ಪ, ಶಾಲಾ ದಾಖಲಾತಿ ಮತ್ತು ಮತದಾನದ ಗುರುತಿನ ಚೀಟಿಯಲ್ಲಿ ಮಂಜುನಾಥ್​ರ​ ತಂದೆ ಚಿಕ್ಕಮುನಿಯಪ್ಪ ಎಂದಿದೆ. ಆಸ್ತಿಗಾಗಿ ಮೋಸ ಮಾಡಿರುವುದು ಸಾಬೀತಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಟೂತ್​ ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಯುವತಿ ಸಾವು! ದಕ್ಷಿಣ ಕನ್ನಡ ಜಿಲ್ಲೇಲಿ ದುರಂತ

ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ನೆರವು

ವಿಶ್ವನಾಥನ ಸನ್ನಿಧಿಯಲ್ಲಿ ವಿಶ್ವಾರಾಧ್ಯರ ಜಾತ್ರೆ: ಕಾಶಿ ಪೀಠದಲ್ಲಿ ಶಿವರಾತ್ರಿ ಅಂಗವಾಗಿ ವಿದ್ವತ್ ಸಭೆ, ಶಾಸ್ತ್ರಾರ್ಥ ಚರ್ಚೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 15 =
Remember me
