ಬೆಂಗಳೂರು:ಪೊಲೀಸರ ಸೋಗಿನಲ್ಲಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಇಬ್ಬರು ಹೆಂಡಿರ ಗಂಡನೊಬ್ಬನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಗಾಯತ್ರಿನಗರದ ಮಹೇಶ್​ ನಾಯ್ಕ್​(42) ಬಂಧಿತ. ಈತ ನಾಲ್ಕು ವರ್ಷದ ಹಿಂದೆ ಮೊಬೈಲ್​ ಕದ್ದು, ರೆಡ್​ಹ್ಯಾಂಡ್​ ಆಗಿ ಸೆರೆಸಿಕ್ಕಿ ಸಾರ್ವಜನಿಕರಿಂದ ಧರ್ಮದೇಟು ತಿಂದು ಜೈಲು ಸೇರಿದ್ದ. ಇದಾದ ಮೇಲೆ ನಕಲಿ ಪೊಲೀಸ್​ ವೇಷದಲ್ಲಿ ವಂಚನೆಗೆ ಹಾಕಿದ್ದ. ಓಲಾ ಮತ್ತು ಊಬರ್​ ಕ್ಯಾಬ್​ ಚಾಲಕರನ್ನೇ ಟಾರ್ಗೆಟ್​ ಮಾಡಿಕೊಂಡಿದ್ದ ಮಹೇಶ್​ನ ವಂಚನೆ ಬಯಲಾಗಿದ್ದು ಹೀಗೆ…
ಇದನ್ನೂ ಓದಿರಿಗಂಟಲು ದ್ರವ ಮಾದರಿ ಸಂಗ್ರಹಕ್ಕೆ ಎಷ್ಟು ರೂಪಾಯಿ ಕೊಡಬೇಕು ಗೊತ್ತಾ?
ಜೂ.8ರ ಮಧ್ಯಾಹ್ನ 12.30ರಲ್ಲಿ ಸುಬ್ರಮಣ್ಯನಗರದಲ್ಲಿ ವೇದಮೂರ್ತಿ ಎಂಬುವವರು ಕಾರು ನಿಲ್ಲಿಸಿಕೊಂಡು ನಿಂತಿದ್ದರು. ಅಲ್ಲಿಗೆ ಬೈಕ್​ನಲ್ಲಿ ಬಂದ ಮಹೇಶ್​, ‘ನಾನು ಪೊಲೀಸ್​. ನಮ್ಮ ಅಧಿಕಾರಿಯೊಬ್ಬರ ಮನೆಯವರಿಗೆ ಬಾಡಿಗೆ ಕಾರು ಬೇಕಿದೆ. ನನ್ನ ಜತೆ ಬನ್ನಿ’ ಎಂದು ವೇದಮೂರ್ತಿಯನ್ನು ರಾಜಾಜಿನಗರ 12ನೇ ಕ್ರಾಸ್​ಗೆ ಕರೆದುಕೊಂಡು ಹೋಗಿದ್ದ.
ಆ ವೇಳೆ ಅಧಿಕಾರಿಗೆ ಕರೆ ಮಾಡಬೇಕೆಂದು ವೇದಮೂರ್ತಿಯ ಮೊಬೈಲ್​ ಪಡೆದ ಮಹೇಶ್​ ಪರಾರಿಯಾಗಿದ್ದ. ಈ ಸಂಬಂಧ ವೇದಮೂರ್ತಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ಕೈಗೊಂಡ ಇನ್​ಸ್ಪೆಕ್ಟರ್​ ಸಂಜೀವ್​ ಗೌಡ ನೇತೃತ್ವದ ತಂಡ ಎಲ್ಲೆಡೆ ನಿಗಾವಹಿಸಿತ್ತು. ವಂಚನೆಗೆ ಯತ್ನಿಸುತ್ತಿದ್ದಾಗ ಆರೋಪಿ ಸೆರೆಸಿಕ್ಕಿದ್ದಾನೆ.
ಇದನ್ನೂ ಓದಿರಿvideo/ ಕರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್​ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಓಲಾ ಮತ್ತು ಊಬರ್​ ಕ್ಯಾಬ್​ ಚಾಲಕರನ್ನೇ ಟಾರ್ಗೆಟ್​ ಮಾಡಿ ಪೊಲೀಸ್​ ಅಧಿಕಾರಿಗೆ ಬಾಡಿಗೆ ಕಾರು ಬೇಕೆಂದು ಕರೆದುಕೊಂಡು ಹೋಗುತ್ತಿದ್ದ ಮಹೇಶ್​, ಕಾರನ್ನು ತಕ್ಷಣ ತಿರುವು ಪಡೆಯಲು ಸಾಧ್ಯವಾಗದ ಸ್ಥಳದಲ್ಲಿ ನಿಲ್ಲಿಸಿಕೊಂಡು ಮೊಬೈಲ್​ ಪಡೆದು ಬೈಕ್​ನಲ್ಲಿ ಪರಾರಿಯಾಗುತ್ತಿದ್ದ.
ಬಂಧಿತನಿಂದ 2.87 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಯ 20 ಮೊಬೈಲ್​, 2 ಬೈಕ್​ ವಶಕ್ಕೆ ಪಡೆಯಲಾಗಿದೆ. 2019ರಲ್ಲಿ ಜೆ.ಸಿ. ನಗರದಲ್ಲಿ ಬೈಕ್​ ಕದ್ದು ಅದರ ನಂಬರ್​ ಪ್ಲೆಟ್​ ತೆಗೆದು ನಕಲಿ ನಂಬರ್​ ಪ್ಲೆಟ್​ ಹಾಕಿಕೊಂಡು ಅದರ ಮೇಲೆ ಪೊಲೀಸ್​ ಎಂದು ಬರೆಸಿಕೊಂಡು ಓಡಾಡುತ್ತಿದ್ದ. ಕೆ.ಸಿ.ಜನರಲ್​ ಆಸ್ಪತ್ರೆಗೆ ರೋಗಿಗಳನ್ನು ಕರೆತರುವ ಕ್ಯಾಬ್​ ಅಥವಾ ಕಾರು ಮಾಲೀಕ/ಚಾಲಕರಿಗೆ ಯಾಮಾರಿಸಿ ಮೊಬೈಲ್​ ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ.
ಪಿಪಿಇ ಕಿಟ್​ ಧರಿಸದೆ ಕೋವಿಡ್​ ಸೋಂಕಿತನ ಅಂತ್ಯಸಂಸ್ಕಾರ ನೆರವೇರಿಸಿದ ಶಾಸಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − six =
Remember me
