ಬೆಂಗಳೂರು:ಸಿನಿಮಾ ನಿರ್ಮಾಣ ಮಾಡಲು ಸಾಲದ ರೂಪದಲ್ಲಿ ಹಣ ಪಡೆದು ಅದನ್ನು ವಾಪಾಸ್ ಕೊಡದೆ ವಂಚಿಸಿ, ಕೊಲೆ ಬೆದರಿಕೆ ಹಾಕಿದ ಆರೋಪದಡಿ ನಿರ್ದೇಶಕರೊಬ್ಬರು ಸ್ವಂತ ಸಹೋದರ ಸೇರಿ ನಾಲ್ವರ ವಿರುದ್ಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲಗ್ಗೆರೆಯ ಕೆಂಪೇಗೌಡ ಲೇಔಟ್ ನಿವಾಸಿ ಸಿನಿಮಾ ನಟ ಹಾಗೂ ನಿರ್ದೇಶಕ ಜಿ.ರೂಪೇಶ್ ನೀಡಿದ ದೂರಿನ ಮೇರೆಗೆ ರೂಪೇಶ್‌ನ ತಮ್ಮ ಗಿರೀಶ್, ಈತನ ಸ್ನೇಹಿತರಾದ ಅಂಜುಂ, ವಿ.ಕೆ.ಮೂರ್ತಿ ಹಾಗೂ ಮೊಹನ್ ಎಂಬುವವರ ವಿರುದ್ಧ ನಿಂದನೆ, ಕೊಲೆ ಬೆದರಿಕೆ, ವಂಚನೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:ದೂರುದಾರ ಜಿ.ರೂಪೇಶ್ ಅವರ ತಮ್ಮ ಜಿ.ಗಿರೀಶ್ 2014-2019ರ ಅವಧಿಯಲ್ಲಿ ‘ಸಾರಿ ಕಣೇ’ ಮತ್ತು ‘ಧೂಳಿಪಟ’ ಎಂಬ ಚಲನಚಿತ್ರ ನಿರ್ಮಾಣ ಮಾಡಿದ್ದರು. ಈ ವೇಳೆ ಚಿತ್ರ ನಿರ್ಮಾಣಕ್ಕೆ ಹಣದ ಕೊರತೆ ಉಂಟಾದ ಹಿನ್ನೆಯಲ್ಲಿ ರೂಪೇಶ್ ಬಳಿ ಹಣಕಾಸಿನ ಸಹಾಯ ಕೇಳಿದ್ದಾನೆ. ಈ ವೇಳೆ ರೂಪೇಶ್, ತನ್ನ ಬಳಿಯಿದ್ದ ಹಣ ಹಾಗೂ ಬೇರೆಯವರಿಂದ ಸಾಲವಾಗಿ ಪಡೆದ ಹಣ ಸೇರಿ ವಿವಿಧ ದಿನಾಂಕಗಳಂದು ಒಟ್ಟು 33 ಲಕ್ಷ ರೂ. ಹಣವನ್ನು ಗಿರೀಶ್‌ಗೆ ಸಾಲವಾಗಿ ನೀಡಿದ್ದರು.
ಇದನ್ನೂ ಓದಿ:50ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಂದೆಯಾದ ಪ್ರಭುದೇವ
ಅಷ್ಟೇ ಅಲ್ಲದೆ, ಆರೋಪಿ ಗಿರೀಶ್, ರೂಪೇಶ್‌ನನ್ನು ಸಾಕ್ಷಿಯಾಗಿಸಿಕೊಂಡು ಬಾಗಲಕೋಟೆಯ ಶಿರಗಣ್ಣನವರ್ ಎಂಬುವವರಿಂದ 40 ಲಕ್ಷ ರೂ., ನಿಂಗರಾಜಯ ಪಲ್ಲೇದ್ ಎಂಬುವವರಿಂದ 10 ಲಕ್ಷ ರೂ., ಜಿಂಕೆಬಚ್ಚನಹಳ್ಳಿಯ ಬಿ.ವಿ.ಲೋಕೇಶ್ ಎಂಬುವವರಿಂದ 60 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದುಕೊಂಡಿದ್ದಾನೆ. 2022ರ ಆ.೬ರಂದು ಮತ್ತು ಸೆ.೫ರಂದು ಸಾಲದ ಹಣವನ್ನು ವಾಪಾಸ್ ನೀಡುವುದಾಗಿ ರೂಪೇಶ್ ಬಳಿ ಅಗ್ರಿಮೆಂಟ್ ಮಾಡಿಕೊಂಡಿದ್ದಾನೆ. ಅಗ್ರಿಮೆಂಟ್ ದಿನಾಂಕ ಮುಗಿದಿದ್ದರೂ ಗಿರೀಶ್ ಸಾಲ ವಾಪಾಸ್ ನೀಡಿಲ್ಲ. ಹಣ ಕೇಳಿದಾಗಲೆಲ್ಲಾ ಸಬೂಬು ಹೇಳಲು ಆರಂಭಿಸಿದ್ದಾನೆ.
ಇದನ್ನೂ ಓದಿ:ಉಚಿತ ಬಸ್​ ಪ್ರಯಾಣ; ಸಿಎಂ ಕೈಯಿಂದ ಮೊದಲು ಸ್ಮಾರ್ಟ್ ಕಾರ್ಡ್, ಟಿಕೆಟ್​​​​​ ಪಡೆದವರು ಯಾರು ಗೊತ್ತಾ?
ಇತ್ತೀಚೆಗೆ ಸಾಲದ ಹಣವನ್ನು ವಾಪಾಸ್ ನೀಡುವಂತೆ ರೂಪೇಶ್ ಕೇಳಿದಾಗ, ಗಿರೀಶ್ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ. ಈತನ ಸ್ನೇಹಿತರಾದ ಅಂಜುಂ, ವಿ.ಕೆ.ಮೂರ್ತಿ, ಮೋಹನ್ ಎಂಬುವವರು ರೂಪೇಶ್‌ಗೆ ಕರೆ ಮಾಡಿ, ಗಿರೀಶ್‌ಗೆ ಯಾವುದೇ ಹಣ ನೀಡಿಲ್ಲವೆಂದು ಪತ್ರ ಬರೆದುಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಪತ್ರ ಬರೆದುಕೊಡದಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರೂಪೇಶ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21 ವರ್ಷ ಹಿರಿಯ ರಾಜಕಾರಣಿಯನ್ನು ಮದ್ವೆಯಾದ ನಟಿ ಸ್ನೇಹಲ್ ರೈ ಕಾರು ಅಪಘಾತ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + 14 =
Remember me
