ರಾಯಬಾಗ (ಬೆಳಗಾವಿ): ಮುಚ್ಚದ ಕೊಳವೆಬಾವಿಗಳಲ್ಲಿ ಮಕ್ಕಳು ಬೀಳುವ ಸುದ್ದಿಯನ್ನು ನೀವೆಲ್ಲ ಆಗಾಗ ಕೇಳಿಯೂ ಇರುತ್ತೀರಿ, ನೋಡಿಯೂ ಇರುತ್ತೀರಿ. ಆದರೆ ಅಂಥದೇ ಕೊಳವೆಬಾವಿಯಲ್ಲಿ ಇಲ್ಲಿ ಒಬ್ಬ ರೈತನೇ ಬಿದ್ದುಬಿಟ್ಟಿದ್ದಾನೆ!
ಅವನು ತಾನಾಗಿಯೇ ಹೋಗಿ ಅದರೊಳಗೆ ಬಿದ್ದನೋ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದನೋ ಇನ್ನೂ ಖಚಿತವಾಗಿಲ್ಲ. ಆದರೆ ಅವನ ಪ್ರಾಣಪಕ್ಷಿಯಂತೂ ಹಾರಿ ಹೋಗಿದೆ.
ಸುಲ್ತಾನಪುರ ಗ್ರಾಮದ ಲಕ್ಕಪ್ಪ ಸಂಗಪ್ಪ ದೊಡಮನಿ (36) ಎಂಬವನೇ ಆ ನತದೃಷ್ಟ ರೈತ. ತನ್ನ ಜಮೀನಿನಲ್ಲಿ ಕಳೆದ 3-4 ದಿನಗಳ ಹಿಂದಷ್ಟೇ ಸಾಲ ಮಾಡಿ ಬೋರ್‌ವೆಲ್ ಕೊರೆಸಲು ಮುಂದಾಗಿದ್ದ. ಆದರೆ ಅದರಲ್ಲಿ ನೀರು ಬಿದ್ದಿರಲಿಲ್ಲ.
ಇದನ್ನೂ ಓದಿಕ್ಷಿಪಣಿಗೆ 19 ಯೋಧರ ದೇಹ ಛಿದ್ರ- ಇದು ನಮ್ಮದೇ ತಪ್ಪು ಎಂದು ಇರಾನ್​ ಬಾರಿಬಾರಿ ಹೇಳುತ್ತಿರುವುದೇಕೆ?
ಇದರಿಂದ ಮನನೊಂದು ಅದೇ ಕೊಳವೆ ಬಾವಿಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಆದರೆ, ಇದು ಆತ್ಮಹತ್ಯೆಯೋ ಅಥವಾ ಕಾಲು ಜಾರಿ ಬಿದ್ದಿರುವನೋ ಎಂಬುದು ವಿಸ್ತೃತವಾದ ತನಿಖೆಯಿಂದ ಮಾತ್ರವೇ ತಿಳಿದುಬರಬೇಕಾಗಿದೆ.
ವಿಷಯ ಗೊತ್ತಾದ ಕೂಡಲೇ ಘಟನಾ ಸ್ಥಳಕ್ಕೆ ರಾಯಬಾಗ ತಹಸೀಲ್ದಾರ್, ತಾಪಂ ಇಒ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳವೆಬಾವಿಯ ಮೇಲ್ಭಾಗ ಅಗಲವಾಗಿದ್ದು, ರೈತನ ಶವ ಸುಮಾರು 20 ಅಡಿ ಆಳದಲ್ಲಿ ಸಿಲುಕಿಕೊಂಡಿದೆ. ಬಳಿಕ ಮೂರು ಜೆಸಿಬಿಯೊಂದಿಗೆ ಎಸ್‌ಡಿಆರ್‌ಎಫ್ ತಂಡ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸುತ್ತಿವೆ.
ಅಥಣಿ ಡಿವೈಎಸ್‌ಪಿ ಎಸ್.ವಿ. ಗಿರೀಶ, ತಾಪಂ ಇಒ ಪ್ರಕಾಶ ವಡ್ಡರ, ತಹಸೀಲ್ದಾರ್ ಚಂದ್ರಕಾಂತ ಭಜಂತ್ರಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಕರೊನಾ ಸಂಕಟ ಇದ್ದರೂ ಕೇಂದ್ರ ಸರ್ಕಾರಿ ನೌಕರರಿಗೆ ಪೂರ್ಣ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
