| ವಿದ್ಯಾಧರ ಮೊರಬಾ ಅಂಕೋಲಾ
ಹತ್ತಾರು ಎಕರೆ ಜಮೀನು ಹೊಂದಿದ್ದರೂ ಕೃಷಿಯಲ್ಲಿ ಲಾಭ ಕಡಿಮೆ ಎನ್ನುವವರ ನಡುವೆ ತುಂಡು ಭೂಮಿಯಲ್ಲೇ ಕಾಕಡ ಮಲ್ಲಿಗೆ ಕೃಷಿ ಮಾಡಿ, ತಾಲೂಕಿನ ಹಟ್ಟಿಕೇರಿ ಪಂಚಾಯಿತಿ ವ್ಯಾಪ್ತಿಯ ಸಕಲಬೇಣದ ಅರೆಗದ್ದೆಯ ಮಂಜುನಾಥ ಹಾಗೂ ಮಂದಾ ದಂಪತಿ ಯಶಸ್ಸು ಕಂಡಿದ್ದಾರೆ.
ಮಂಜುನಾಥ ಅವರಿಗೆ ಚಿಕ್ಕಂದಿನಿಂದಲೂ ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವ ಇಚ್ಛೆ ಇತ್ತು. ಅದರಂತೆ ಹೂವಿನ ಬೇಸಾಯದತ್ತ ಒಲವು ತೋರಿದರು. ಇದಕ್ಕೆ ಮಡದಿ ಮಂದಾ ಹಾಗೂ ತಾಯಿ ಭಾಗೀರಥಿ ಪ್ರೋತ್ಸಾಹ ದೊರೆತಿದ್ದರಿಂದ ಇಡೀ ಕುಟುಂಬ ಕೃಷಿಯಲ್ಲೇ ಸ್ವಾವಲಂಬಿ ಬದುಕು ಸಾಗಿಸುತ್ತಿದೆ.
ಸಾವಯವ ಗೊಬ್ಬರದ ಬಲ:ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸುಬಾಗಿಸಿಕೊಂಡಿದ್ದಾರೆ. ಹತ್ತಿರದ ಕಾಡಿನಿಂದ ಸೊಪ್ಪು- ಸದೆ, ತರಗೆಲೆಗಳನ್ನು ತಂದು ಬೆರೆಸಿ ಸಾವಯವ ಗೊಬ್ಬರವನ್ನು ಇವರೇ ಸಿದ್ಧಗೊಳಿಸಿಕೊಳ್ಳುತ್ತಾರೆ. ಸಮೃದ್ಧ ಗೊಬ್ಬರ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಬಲ ತಂದಿದೆ. ಐದು ಗುಂಟೆ ಸಾಗುವಳಿ ಭೂಮಿಯಲ್ಲಿ 500ಕ್ಕೂ ಹೆಚ್ಚಿನ ಕಾಕಡ ಮಲ್ಲಿಗೆ ಗಿಡಗಳನ್ನು ಬೆಳೆಸಿದ್ದಾರೆ. ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಹೂ ನೀಡಿದ ಮಲ್ಲಿಗೆ ಈಗ ನಿರೀಕ್ಷೆಗೂ ಮೀರಿ ಹೂ ನೀಡಲಾರಂಭಿಸಿದೆ. ಬೆಳಗ್ಗೆಯಿಂದ ಸಂಜೆಯವರೆಗೂ ಹೂ ಬೇಸಾಯದಲ್ಲೆ ಬೆವರಿಳಿಸಿ ದುಡಿಯುವ ಕೃಷಿಕ ದಂಪತಿ ಹೂ ಕೊಯ್ದು, ಮಾಲೆ ಕಟ್ಟುವ ನಾಲ್ಕಾರು ಆಳುಗಳಿಗೆ ನಿತ್ಯ ಕೆಲಸ ನೀಡಿದ್ದಾರೆ.
ಸ್ಥಳೀಯವಾಗಿ ಭಾರಿ ಬೇಡಿಕೆ:ಮಳೆಗಾಲದ ಒಂದು ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹೂ ನೀಡುವ ಕಾಕಡ ಮಲ್ಲಿಗೆ ಇನ್ನುಳಿದ ತಿಂಗಳಿನಲ್ಲಿ ಹೇರಳವಾಗಿ ಹೂ ನೀಡುತ್ತದೆ. ಇವರು ಬೆಳೆಯುವ ಹೂವಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಬೆಂಗಳೂರು, ತುಮಕೂರಿನಿಂದ ಕಾಕಡಮಲ್ಲಿಗೆ ಹೂಗಳು ಮಾರುಕಟ್ಟೆಗೆ ಬರುತ್ತವೆಯಾದರೂ, ತಾಜಾತನವಿರುವುದಿಲ್ಲ. ಹೀಗಾಗಿ ಇಲ್ಲಿ ಬೆಳೆವ ಹೂವಿಗೆ ಬೇಡಿಕೆ ಜಾಸ್ತಿ.
ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಸಕಲಬೇಣದ ಅರೆಗದ್ದೆಯಲ್ಲಿ ಬೆಳೆದ ಕಾಕಡ ಮಲ್ಲಿಗೆ ತೋಟದಿಂದ ಹೂ- ಮೊಗ್ಗುಗಳನ್ನು ಆಯ್ದು ಬುಟ್ಟಿಗೆ ತುಂಬಿಕೊಳ್ಳುತ್ತಿರುವ ಮಂಜುನಾಥ ಮತ್ತು ಮಂದಾ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × one =
Remember me
