ಬೆಂಗಳೂರು:ಫ್ಯಾಟ್​ ಸರ್ಜರಿ ಮಾಡಿಸಲು ಹೋಗಿ ಕಿರುತೆರೆ ನಟಿ ಚೇತನಾ ರಾಜ್ ದುರಂತ ಅಂತ್ಯ ಕಂಡ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಫ್ಯಾಟ್ ಕರಗಿಸುವ ಸರ್ಜರಿಗೆ ಒಳಗಾದ ಮಹಿಳೆ, ಅಡ್ಡಪರಿಣಾಮಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಆಗಿರುವ ದೆಹಲಿ ಮೂಲದ ಬೆಂಗಳೂರು ನಿವಾಸಿ ತೊಂದರೆಗೆ ಸಿಲುಕಿದ್ದಾರೆ.
ಎಂ.ಎಸ್. ಪಾಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿರುವ ಮಹಿಳೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 10 ದಿನಕ್ಕೆ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಸೊಂಟದ ಭಾಗದಲ್ಲಿ ಕೀವು ತುಂಬಿ, ಕಪ್ಪಾಗಿ ಗಾಯಗಳಾಗಿವೆ. ಅತಿಯಾದ ನೋವಿನಿಂದ ಬಳಲುತ್ತಿರುವುದಾಗಿ ಮಹಿಳೆ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಆಸ್ಪತ್ರೆಯವರು ಯಾರು ಸ್ಪಂದಿಸಿಲ್ಲ.
ಈ ಬಗ್ಗೆ ಮತ್ತೊಬ್ಬ ವೈದ್ಯರ ಸಂಪರ್ಕ ಮಾಡಿದಾಗ ಸದ್ಯ ಕೀವು ತುಂಬಿಕೊಂಡಿರುವ ಮತ್ತೊಂದು ಸರ್ಜರಿಯ ಸಲಹೆ ನೀಡಿದ್ದಾರೆ. ಇದರಿಂದ ಮಹಿಳೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ವೈದ್ಯರ ವಿರುದ್ಧ ಮೆಡಿಕಲ್ ಕೌನ್ಸಿಲ್ ಆಫ್​ ಇಂಡಿಯಾಗೆ ದೂರು ನೀಡಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
