ತುಮಕೂರು:ಕಿಡ್ನಿ ವೈಫಲ್ಯದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗನಿಗೆ ತಂದೆಯೇ ಕಿಡ್ನಿ ದಾನ ಮಾಡಿದ್ದು, ಸಿದ್ಧಗಂಗಾ ಆಸ್ಪತ್ರೆಯಲ್ಲಿ ಯಶಸ್ವಿ ಕಿಡ್ನಿ ಕಸಿ ನಡೆಸಲಾಗಿದೆ. ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಎರಡನೇ ಬಾರಿಗೆ ಯಶಸ್ವಿ ಕಿಡ್ನಿ ಕಸಿ ಇದಾಗಿದೆ.
ತಂದೆಯೇ ಮಗನಿಗೆ ಕಿಡ್ನಿ ದಾನ ಮಾಡುವ ಮೂಲಕ ಜೀವದಾನ ಮಾಡಿದ್ದು, ಇತ್ತೀಚೆಗೆ ನಾವು ಆಚರಿಸಿದ ವಿಶ್ವ ಅಪ್ಪಂದಿರ ದಿನಕ್ಕೆ ಇದು ಅರ್ಥಪೂರ್ಣ ಉದಾಹರಣೆಯಾಗಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್​. ಪರಮೇಶ್​ ಹೇಳಿದರು.
21 ವರ್ಷದ ಯುವಕ ಲೋಕೇಶ್​ಗೆ ಕಿಡ್ನಿ ಕಸಿ ಮಾಡಲು ಮುಂದಾದಾಗ ಸಿದ್ಧಗಂಗಾ ಮಠಾಧ್ಯ ಸಿದ್ಧಲಿಂಗ ಶ್ರೀಗಳು ಬಡ ಯುವಕನ ಕುಟುಂಬಕ್ಕೆ ಆರ್ಥಿಕ ಹೊರೆಯಾಗದಂತೆ ಶಸ್ತ್ರಚಿಕಿತ್ಸೆ ನಡೆಸಿ ಎಂದು ನಿರ್ದೇಶನ ನೀಡಿದ್ದರು. ಅವರ ಮಾತಿನಂತೆ ದಾನಿಗಳ ನೆರವು ಪಡೆದುಕೊಂಡು, ವೈದ್ಯಕೀಯ ವೆಚ್ಚ ಸರಿದೂಗಿಸಲು ಅಂತಿಮವಾಗಿ ನಮ್ಮ ವೈದ್ಯರೇ ನೆರವು ನೀಡಿ ಈ ಕಸಿಯನ್ನು ಯಶಸ್ವಿಯಾಗಿಸಿದ್ದಾರೆ ಎಂದು ಡಾ.ಎಸ್​. ಪರಮೇಶ್​ ತಿಳಿಸಿದರು.
ಮೂತ್ರಪಿಂಡ ತಜ್ಞ ಡಾ.ರಂಗೇಗೌಡ, ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ್​ ಮೂರ್ತಿ, ಡಾ.ನರಸಿಂಹಮೂರ್ತಿ, ಡಾ.ಅಭಿಲಾಷ್​, ಡಾ.ಕೆ.ಆರ್​.ಮಧು, ಡಾ.ಶಶಿಕಿರಣ್​, ಸಿಇಒ ಡಾ.ಸಂಜೀವ್​ಕುಮಾರ್​, ಪಿಆರ್​ಒ ಕಾಂತರಾಜು, ಟ್ರಾನ್ಸ್​ಪ್ಲಾಂಟ್​ ಕೋ-ಆರ್ಡಿನೇಟರ್​ ಡಿ.ಕೆ.ಕಾರ್ತಿಕ್​ ಇದ್ದರು.
ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ತುಮಕೂರಲ್ಲಿ ಗೆದ್ದರೆ ರಾಜ್ಯವನ್ನೇ ಗೆದ್ದಂತೆ… ಮನೆಗೆ ಬಂದ ಲಕ್ಷ್ಮೀಯನ್ನು ಒಳಗೆ ಕರೆದುಕೊಳ್ಳಿ: ಡಿಕೆಶಿ

ಆರತಕ್ಷತೆಗೂ 2 ದಿನ ಮೊದಲೇ ನವ ವಿವಾಹಿತೆ ಕಿಡ್ನ್ಯಾಪ್​! ಹುಬ್ಬಳ್ಳಿ ಕಾರ್ಪೋರೇಟರ್ ಸೇರಿ ಮೂವರ ವಿರುದ್ಧ ಕೇಸ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
