ಕೊಪ್ಪಳ:ತಂದೆ ಮಾಡಿದ ಸಾಲವನ್ನೇ ಮುಂದಿಟ್ಟುಕೊಂಡು ಏನೂ ಅರಿಯದ ಬಾಲಕನಿಂದ ಬೆತ್ತಲೆ ಪೂಜೆ ಮಾಡಿಸಿದ ಅಮಾನವೀಯವಾಗಿ ಘಟನೆ ಕೊಪ್ಪಳ ತಾಲೂಕಿನ ಹಾಸಗಲ್ ಗ್ರಾಮದಲ್ಲಿ ನಡೆದಿದೆ.
ಹಾಸಗಲ್ ಗ್ರಾಮದ 16 ವರ್ಷದ ಬಾಲಕನೊಬ್ಬನಿಂದ ಶರಣಪ್ಪ, ವಿರುಪನಗೌಡ ಮತ್ತು ಶರಣಪ್ಪ ತಳವರ ಎಂಬುವವರು ಬೆತ್ತಲೆ ಪೂಜೆ ಮಾಡಿಸಿದ್ದಾರೆ. ಬಾಲಕನ ತಂದೆ ಸಾಲದ ಸುಳಿಗೆ ಸಿಲುಕಿದ್ದರಂತೆ.ಇದೇ ವಿಚಾರ ಮುಂದಿಟ್ಟುಕೊಂಡ ಆ ಮೂವರು ದರುಳರು, ‘ಬೆತ್ತಲೆ ಪೂಜೆ ಮಾಡಿದರೆ ದುಡ್ಡು ಸಿಗುತ್ತೆ. ನಿಮ್ಮ ಅಪ್ಪ ಮಾಡಿದ ಸಾಲವೂ ತೀರುತ್ತೆ. ಅಷ್ಟೇ ಅಲ್ಲ ಮನೆಯಲ್ಲಿನ ಬಡತನ ಕೂಡ ನಿವಾರಣೆ ಆಗುತ್ತೆ’ ಎಂದು ಬಾಲಕನನ್ನು ನಂಬಿಸಿದ್ದಾರೆ.
ಬಳಿಕ ಹುಬ್ಬಳ್ಳಿಯ ರೂಮ್​ವೊಂದರಲ್ಲಿ ಬಾಲಕನ ಬಟ್ಟೆ ಬಿಚ್ಚಿಸಿ ಬೆತ್ತಲೆ ಮಾಡಿ, ಪೂಜೆ ಮಾಡುವ ನಾಟಕವಾಡಿದ್ದಾರೆ. ಅಲ್ಲದೆ, ಅದನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಕಳೆದ ಜೂನ್​ನಲ್ಲೇ ಈ ಘಟನೆ ನಡೆದಿದ್ದು, ಗ್ರಾಮದ ಕೆಲ ಜನರ ಮೊಬೈಲ್​ಗೆ ಪೂಜೆ ಸಲ್ಲಿಸಿದ ವಿಡಿಯೋ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ನೊಂದ ಬಾಲಕ ಮತ್ತು ಕುಟುಂಬಸ್ಥರು ನಿನ್ನೆ(ಅ.2) ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಡಿಪಾರು: ಒಂದು ವರ್ಷ ಕಲಬುರಗಿಗೆ ಕಾಲಿಡುವಂತಿಲ್ಲ

ಥೂ, ಇವರೆಂಥಾ ಕ್ರೂರಿಗಳು? ರಾತ್ರೋರಾತ್ರಿ ಅಮಾನುಷ ಕೃತ್ಯವೆಸಗಿ ‘ದೈವಾದೇಶ’ ಎಂದ ದುಷ್ಟರು.. ಈ ಸ್ಟೋರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
