ಕೃಷ್ಣಗಿರಿ: ಗರ್ಭಿಣಿ ಮಗಳನ್ನೇ ಗುಂಡಿಕ್ಕಿ ಪಾಪಿ ತಂದೆ ಕೊಂದಿದ್ದಾನೆ. ಯುಗಾದಿ ಹಬ್ಬಕ್ಕೆಂದು ಗಂಡನ ಮನೆಯಿಂದ ತವರು ಮನೆಗೆ ಗಂಡನ ಜತೆ ಬಂದಿದ್ದ ಮಗಳು ಅಪ್ಪನ ಕೈಯಿಂದಲೇ ಕೊಲೆಯಾದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕಿನ ಮದಯ್ಯದೊಡ್ಡಿ ಗ್ರಾಮದಲ್ಲಿ ಸಂಭವಿಸಿದೆ.
ವೆಂಕಟಲಕ್ಷ್ಮೀ(21) ಮೃತ ದುರ್ದೈವಿ. ಮಗಳನ್ನೇ ಕೊಲೆ ಮಾಡಿದವ ಅರುಣಾಚಲಂ(50). ನಾಲ್ಕು ತಿಂಗಳ ಹಿಂದಷ್ಟೆ ಮಾಲೂರಿನ ಶ್ರೀನಿವಾಸನ್ ಎಂಬಾತನ ಜತೆ ವೆಂಕಟಲಕ್ಷ್ಮೀಯನ್ನು ಮದುವೆ ಮಾಡಲಾಗಿತ್ತು. ಮೂರು ತಿಂಗಳ ಗರ್ಭಿಣಿ ಆಗಿದ್ದಳು. ಯುಗಾದಿ ಹಬ್ಬಕ್ಕೆಂದು ತವರು ಮನೆಗೆ ಮಗಳು ಮತ್ತು ಅಳಿಯ ಇಬ್ಬರೂ ಬಂದಿದ್ದರು.ಇದನ್ನೂ ಓದಿರಿಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ
ಮಂಗಳವಾರ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಿದ್ದರು. ಮದ್ಯವ್ಯಸನಿಯಾಗಿದ್ದ ವೆಂಕಟಲಕ್ಷ್ಮೀಯ ತಂದೆ ಅರುಣಾಚಲಂ ಬುಧವಾರ ರಾತ್ರಿ ಕಂಠ ಪೂರ್ತಿ ಮದ್ಯ ಸೇವಿಸಿ ಬಂದಿದ್ದ. ಪತ್ನಿ ಮಾದೇವಿ ಜತೆ ಗಲಾಟೆ ತೆಗೆದಿದ್ದ. ಮನೆಯಲ್ಲಿದ್ದ ಬಂದೂಕಿನಿಂದ ಮಾದೇವಿ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದ. ಈ ವೇಳೆ ಅಪ್ಪನಿಂದ ಅಮ್ಮನನ್ನು ರಕ್ಷಣೆ ಮಾಡಲು ಮುಂದಾದ ವೆಂಕಟಲಕ್ಷ್ಮೀಗೆ ಗುಂಡು ತಗುಲಿ ಆಕೆ ಮೃತಪಟ್ಟಿದ್ದಾಳೆ.
ಕುಡಿದ ಅಮಲಿನಲ್ಲಿ ಕೋಪದ ಕೈಗೆ ಬುದ್ಧಿ ಕೊಟ್ಟ ತಂದೆ, ಗರ್ಭಿಣಿ ಮಗಳ ಸಾವಿಗೆ ಕಾರಣವಾಗಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇಬ್ಬರು ಯುವತಿಯರೊಂದಿಗೆ ಯುವಕನ ಲವ್ವಿಡವ್ವಿ! ಪ್ರಶ್ನಿಸಿದ ಪೋಷಕರಿಗೆ ಶಾಕಿಂಗ್​ ಉತ್ತರ ಕೊಟ್ಟ ಪ್ರಿಯಕರ

VIDEO| ದಿನಕ್ಕೆರಡು ಬಾರಿ ಕಲ್ಲಿಗೆ ಹಾಲುಣಿಸುತ್ತಿದೆ ಹಸು! ಪುರೋಹಿತರು ಹೇಳಿದ್ದ ಭವಿಷ್ಯ ನಿಜವಾಯ್ತೆ?

ಬಸ್​ ನಿಲ್ದಾಣದಲ್ಲೇ ವಿಷ ಕುಡಿದ ಕೆಎಸ್​ಆರ್​ಟಿಸಿ ನೌಕರ! ನರಳಾಡುತ್ತಿದ್ದರೂ ಸಾವಿಗೆ ಕಾರಣ ಬಿಚ್ಚಿಟ್ಟ

ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eleven =
Remember me
