ಬೆಂಗಳೂರು:ಪಿಎಸ್​ಐ ನೇಮಕಾತಿಯಲ್ಲಿನ ಅಕ್ರಮ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಯ ಮಾನ ಹರಾಜು ಹಾಕಿದೆ. ಇದರ ಬೆನ್ನಲ್ಲೇ ಶಿಕ್ಷಕರ ಹದ್ದೆ ಹಗರಣ ಬಯಲಾಗಿ ರಾಜ್ಯದಲ್ಲಿ ಪ್ರತಿಭಾವಂತರಿಗೆ ಅನ್ಯಾಯ ಆಗುತ್ತಿರುವ ಹಾಗೂ ಭ್ರಷ್ಟ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ನೌಕರಿ ಕೊಡಿಸುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 25 ಲಕ್ಷ ರೂ. ಪಡೆದು ದಂಪತಿ ಸೇರಿ ಮೂವರು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಪುರ ಮೂಲದ ಪಂಡಿತ್​ ಪರಮಾನಂದ ಚೌದ್ರಿ (35) ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಮಾಗಡಿ ರಸ್ತೆ ಬ್ಯಾಡರಹಳ್ಳಿ ನಿವಾಸಿಗಳಾದ ಚಂದ್ರಕಲಾ ಬಾಯಿ, ಆಕೆಯ ಪತಿ ಗಂಗಾಧರ್​ ನಾಯಕ್​ ಮತ್ತು ಕಲಬುರಗಿ ಮೂಲದ ಶಶಿಕಾಂತ್​ ಗಾನಟೆ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲು ದಾಖಲಾಗಿದೆ.
ದೂರುದಾರ ಪಂಡಿತ್​ ಪರಮಾನಂದ ಚೌದ್ರಿಗೆ ಸ್ನೇಹಿತ ನಾಗಪ್ಪ ಎಂಬಾತನ ಮೂಲಕ ಆರೋಪಿಗಳಾದ ಚಂದ್ರಕಲಾ ಬಾಯಿ, ಗಂಗಾಧರ್​ ನಾಯಕ್​ ಮತ್ತು ಶಶಿಕಾಂತ್​ ಗನಾಟೆ ಪರಿಚಯ ಆಗಿದೆ. ಸರ್ಕಾರದ ಯಾವುದಾದರು ಇಲಾಖೆಯಲ್ಲಿ ಎಫ್​ಡಿಎ ಕೆಲಸ ಕೊಡಿಸುವುದಾಗಿ ದೂರುದಾರನಿಗೆ ನಂಬಿಸಿದ್ದಾರೆ. ಆನಂತರ 2014 ರಿಂದ 2022ರ ವರೆಗೆ ಹಂತ ಹಂತವಾಗಿ ಪಂಡಿತ್​ ಅವರಿಂದ 25 ಲಕ್ಷ ರೂಪಾಯಿಯನ್ನು ಆರೋಪಿಗಳು ಪಡೆದುಕೊಂಡಿದ್ದಾರೆ.
ಆದರೆ, ವರ್ಷಗಳೇ ಕಳೆದರೂ ಕೆಲಸ ಕೊಡಿಸಿಲ್ಲ. ಹಣ ವಾಪಸ್​ ನೀಡುವಂತೆ ಪಂಡಿತ್​ ಕೇಳಿದ್ದಾರೆ. 2015ರಲ್ಲಿ ಸಮಾಜ ಕಲ್ಯಾಣ ಇಲಾಖೆ ಎಫ್​ಡಿಎ ಹುದ್ದೆಗೆ ನೇಮಕ ಮಾಡಿರುವ ಆದೇಶ ಪತ್ರವನ್ನು ಪಂಡಿತ್​ ಮನೆಗೆ ಕಳುಹಿಸಿದ್ದಾರೆ.
ಪಂಡಿತ್​ ಆ ನೇಮಕಾತಿ ಪತ್ರ ಹಿಡಿದು ಸಂಬಂಧಪಟ್ಟ ಇಲಾಖೆಗೆ ತೆರಳಿ ವಿಚಾರಿಸಿದಾಗ, ನಕಲಿ ಆದೇಶ ಪತ್ರ ಎಂಬುದು ಗೊತ್ತಾಗಿದೆ. ಹಣ ವಾಪಸ್​ ನೀಡುವಂತೆ ಪಂಡಿತ್​ ಆರೋಪಿಗಳನ್ನು ಕೇಳಿದಾಗ ಸಬೂಬು ಹೇಳಿ ಕಾಲ ದೂಡಿದ್ದಾರೆ. ಕೆಲಸವೂ ಇಲ್ಲದೆ ಹಣವೂ ಇಲ್ಲದೆ ನೊಂದ ಅಭ್ಯರ್ಥಿ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಕೈ ಅಧ್ಯಕ್ಷ ಸ್ಥಾನಕ್ಕೆ ಇಂದು ಮತದಾನ; ಬುಧವಾರ ಪ್ರಕಟವಾಗಲಿದೆ ಫಲಿತಾಂಶ

ರಾಜ್ಯದಲ್ಲಿ ಬೆರಕೆ ಸರ್ಕಾರ ಬರೋದು ಗ್ಯಾರಂಟಿ.. ದೇಶಕ್ಕೆ ಕೇಡು ಖಚಿತ… ಹಾಸನಾಂಬೆ ಸನ್ನಿಧಿಯಲ್ಲಿ ಬ್ರಹ್ಮಾಂಡ ಗುರೂಜಿ ಭವಿಷ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
