ದಶರಥನ ಆಸ್ಥಾನಮಂಟಪದಲ್ಲಿ ಬ್ರರ್ಹ¾ಗಳಾದ ಶ್ರೀ ವಸಿಷ್ಠರು ಎಲ್ಲ ಸಿದ್ಧಮಹರ್ಷಿಗಳ ಉಪಸ್ಥಿತಿಯಲ್ಲಿ ಶ್ರೀರಾಮನಿಗೆ ವೇದಾಂತೋಪದೇಶವನ್ನು ಮಾಡುತ್ತಿದ್ದಾರೆ. ಇದೀಗ ಮಂಡಪೋ ಪಾಖ್ಯಾನ ಎಂಬ ಕಥೆಯ ಮೂಲಕ ಉಪದೇಶವು ನಡೆಯುತ್ತಿದೆ. ವೇದಾಂತವು ಕೇವಲ ಪುಸ್ತಕಗಳಲ್ಲಿ ಬರೆದಿಡುವ ಬರವಣಿಗೆ ಮಾತ್ರ ಆಗಿರದೆ ಅನುಭವಕ್ಕೆ ತಂದುಕೊಳ್ಳುವ ಸತ್ಯದ ಸಂಗತಿಯಾಗಿದೆ ಎಂಬುವುದು ಯೋಗವಾಸಿಷ್ಠದ ಪ್ರಧಾನ ಸಂದೇಶ. ಜಗತ್ತಿನ ಮತ್ತು ಎಲ್ಲ ಜೀವಗಳ ಮೂಲ ಸ್ವರೂಪವು ಪರಮಾತ್ಮನೇ ಆಗಿದ್ದು ಇಡೀ ಜಗತ್ತು ಮತ್ತು ಎಲ್ಲ ಜೀವಗಳು ಅವನ ನಾನಾ ಪ್ರಕಾರದ ತೋರಿಕೆಗಳೇ ಆಗಿವೆ. ಇದು ಸಮಾಧಿಸ್ಥಿತಿಗೆ ಏರಿದವನಿಗೆ ಸರಳವಾಗಿ ಗೋಚರವಾಗುತ್ತದೆ. ಇದನ್ನು ತೋರಿಸಲು ಮಂಡಪೋಪಾಖ್ಯಾನವು ಬಂದಿದೆ. ಲೀಲಾಮಹಾರಾಣಿ ಎಂಬ ಮಹಿಳೆ ಶ್ರೀದೇವಿಯ ಕೃಪೆಯಿಂದ
ಸಮಾಧಿಸ್ಥಿತಿಯ ಮೂಲಕ ಸೂಕ್ಷ್ಮಶರೀರದಲ್ಲೇ ನಿಂತು ಅನೇಕ ದರ್ಶನಗಳನ್ನು ಪಡೆಯುತ್ತಿದ್ದಾಳೆ. ಹಿಂದಿನ ಜನ್ಮಗಳ ದರ್ಶನ, ಬೇರೆ-ಬೇರೆ ಲೋಕಗಳ ದರ್ಶನಗಳನ್ನು ಪಡೆದು ಇದೀಗ ತನ್ನ ಪತಿಯ ಮುಂದಿನ ಜನ್ಮದ ಸ್ಥಳಕ್ಕೆ ಬಂದಿದ್ದಾಳೆ. ಅವಳ ಪತಿ ವಿದೂರಥನೆಂಬ ಚಕ್ರವರ್ತಿಯಾಗಿ ಭಾರತ ದೇಶದಲ್ಲಿ ಹುಟ್ಟಿದ್ದಾನೆ. ಅವನ ಸಾಮಂತ ರಾಜರಲ್ಲಿ ಕೆಲವರ ಪಿತೂರಿಯಿಂದಾಗಿ ಯುದ್ಧ ನಡೆಯುತ್ತದೆ. ಆ ಯುದ್ಧವನ್ನು ವಾಲ್ಮೀಕಿ ಮಹರ್ಷಿಗಳು ಅದ್ಭುತವಾಗಿ ವರ್ಣಿಸಿ ದ್ದಾರೆ. ಆದರೆ ಒಂದು ಸಂಗತಿಯನ್ನು ನೆನಪಿಡಬೇಕು. ಇವೆಲ್ಲ ಉಪದೇಶಗಳು ಆಗಸದಿಂದ ಇಳಿದು ಬಂದವು. ಸಿದ್ಧಮಹರ್ಷಿಗಳ ಉಪಸ್ಥಿತಿಯಲ್ಲಿ ಆಗುತ್ತಿವೆ. ಅವರು ಕೂಡ ಬ್ರರ್ಹ¾ ಶ್ರೇಷ್ಠರಾದ ವಸಿಷ್ಠರ ಉಪದೇಶಗಳನ್ನು ಕೇಳುವುದಕ್ಕೋಸ್ಕರವಾಗಿಯೇ ಇಳಿದು ಬಂದಿದ್ದಾರೆ. ಆದ್ದರಿಂದ ಇಲ್ಲಿ ವಸಿಷ್ಠರ ಬಾಯಿಂದ ಬರುತ್ತಿರುವ ಒಂದೊಂದು ಮಾತುಗಳೂ ಅತ್ಯಂತ ಪ್ರಮಾಣವಾಗಿವೆ. ಶ್ರೇಷ್ಠ ಋಷಿಗಳು ಅವತಾರಿ ಪುರುಷನಿಗೆ ಉಪದೇಶ ಮಾಡುತ್ತಿರುವುದನ್ನು ಎಲ್ಲ ಸಿದ್ಧ ಮಹರ್ಷಿಗಳು ಪ್ರತ್ಯಕ್ಷವಾಗಿ ನೋಡುತ್ತಿರುವರು. ಈ ವಾತಾವರಣ ಜಗತ್ತಿನ ಯಾವುದೇ ಉಪದೇಶಕ್ಕಿಲ್ಲ.
ಶ್ರೀ ವಸಿಷ್ಠರು ಯುದ್ಧವರ್ಣನೆಯ ಉಪದೇಶವನ್ನು ಮುಂದುವರಿಸಿದ್ದಾರೆ.ಶ್ರೀರಾಮ! ಆ ಯುದ್ಧದ ದೃಶ್ಯವನ್ನು ನೋಡಿದರೆ ಅಸ್ತ್ರಗಳ ಹೊಳಪುಗಳೆಂಬ ಸರಪಳಿಗಳ ಜಾಲದಿಂದ ಸೇನೆಯೆಂಬ ಹಕ್ಕಿಯನ್ನು ಸೆರೆ ಹಿಡಿದಿರುವಂತೆ ಕಾಣುತ್ತಿದೆ. ಅಲ್ಲದೆ ಥಳಪಿಸುತ್ತಿರುವ ಖಡ್ಗಗಳುಳ್ಳ ವೀರರ ನಿಸ್ತ್ರಿಂಶಎಂಬ ವಿಶೇಷವಾದ ಖಡ್ಗ ಯೋಧರೆಂಬ ಹಕ್ಕಿಗಳನ್ನು ಬಂಧಿಸಿಯಮನೆಂಬ ಬೇಡರ ಒಡೆಯನ ಅಂಗಳಕ್ಕೆ ಕಳುಹಿಸುತ್ತಿರುವಂತೆ ಕಾಣುತ್ತಿತ್ತು. ಯುದ್ಧದಲ್ಲಿ ಮಡಿದವರ ಶರೀರಗಳನ್ನು ಗಣಶಃ (ಸೈನ್ಯದ ಒಂದೊಂದೇ ಗುಂಪುಗಳನ್ನು ಗಮನದಲ್ಲಿಟ್ಟುಕೊಂಡು) ಎತ್ತಿಕೊಂಡು ಹೋಗುತ್ತಿರುವ ವ್ಯಾಘ್ರ, ವೃಕ ಮುಂತಾದ ಪ್ರಾಣಿಗಳು ಹೋಗುತ್ತಿವೆ. ಯುದ್ಧವು ಸಾಕಷ್ಟು ಕಾಲ ನಡೆದು ಅನೇಕ ಸೇನಾಪಡೆಗಳ ಮುಖ್ಯಸ್ಥರು ಮಡಿದಿದ್ದರಿಂದ ಸುತ್ತಲಿನ ಕಾಡಿನ ಪ್ರಾಣಿಗಳು ಮಾಂಸದ ವಾಸನೆಯಿಂದ ಯುದ್ಧ ರಂಗದ ಒಳಗೆ ಪ್ರವೇಶ ಮಾಡಿ, ಅಲ್ಲಿ ಬಿದ್ದಿದ್ದ ಶರೀರಗಳನ್ನು ಎತ್ತಿಕೊಂಡು ಹೋಗುತ್ತ ಘರ್ಜಿಸುತ್ತಿವೆ. ಜೊತೆಯಲ್ಲಿ ಆಗೊಮ್ಮೆ ಈಗೊಮ್ಮೆ ಬಾಣ ಪ್ರಯೋಗಗಳೂ ಆಗುತ್ತಿವೆ. ಕೈ ಬೆರಳಿನ (ಅಂಗುಷ್ಠದ) ಉಗುರುಗಳಿಂದ ಬಾಣದ ಪುಚ್ಛವನ್ನು ಚೆನ್ನಾಗಿ ದಬ್ಬಿ ಬಿಡುತ್ತಿರುವುದರಿಂದ, ಬಾಣಗಳು ವೇಗವಾಗಿ ಸಾಗುತ್ತಿರುವುದರಿಂದ ಬಾಣಗಳ ಶಬ್ದವು ಪ್ರಾಣಿಗಳ ಕೂಗಿಗೆ ಜೊತೆಯಾ ಗುತ್ತಿದೆ. ಊಟದಲ್ಲಿ ಎಲ್ಲ ವ್ಯಂಜನಗಳನ್ನು ಮರೀಚ (ಕಾಳು ಮೆಣಸು) ರಂಜಿಸುವಂತೆ ಪ್ರಾಣಿಗಳ ಕೂಗುಗಳನ್ನು ಬಾಣಗಳ ಈ ಶಬ್ದವು ರಂಜಿಸುವಂತೆ ಮಾಡುತ್ತಿತ್ತು. ವೈರಿ ಸೇನೆಯವರು ಇಟ್ಟಿರುವ ಕುಂಭಾಗ್ನಿಯು ಯೋಧರಿಗೆ ತುಂಬ ಸೆಕೆಯನ್ನುಂಟು ಮಾಡುತ್ತಿದ್ದರೂ ಅದಕ್ಕೆ ಬಗ್ಗದ ಯೋಧರು ಆಯುಧಗಳನ್ನು ಹಿಡಿದು ಯುದ್ಧ ಮುಂದುವರಿಸುತ್ತಿದ್ದರು. ಮತ್ತೆ ಕೆಲವೆಡೆ ಸೇನೆಯವರು ಇಟ್ಟಿದ್ದ ಕುಂಭಾಗ್ನಿಯು ಯೋಧರನ್ನು ಆವರಿಸಿ ಸುಡುತ್ತಿದ್ದರಿಂದ ಅಲ್ಲಿರುವ ಯೋಧರು ತಮ್ಮ ಆಯುಧಗಳನ್ನು ಕೈಬಿಡುತ್ತಿದ್ದರು.
ಇನ್ನು ಕೆಲವೆಡೆ ಹೀಗೆಯೇ ಇಟ್ಟಿದ್ದ ಕುಂಭಾಗ್ನಿಯು ಅಂಗಾರಗಳಿಂದ(ಕೆಂಡಗಳಿಂದ) ಯೋಧರು ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದರು.ಇನ್ನೊಂದೆಡೆ ವೈರಿ ಸೈನಿಕರು ಇಟ್ಟಿದ್ದ ಕುಂಭದಲ್ಲಿರುವ ವಿಷದ ಜಲತನ್ನ ಸಂಪರ್ಕಕ್ಕೆ ಬಂದ ಜನರನ್ನು ಸಾಯಿಸುತ್ತಿತ್ತು. ಒಟ್ಟಾರೆ ಆ ಯುದ್ಧದ ಸಂಭ್ರಮವನ್ನು (ತೀವ್ರತೆಯನ್ನು) ಎಷ್ಟು ಹೇಳಿದರೂ ಕಮ್ಮಿಯೇ.ಬಾಣಗಳೆಂಬ ಮಳೆಗಳನ್ನು ವೀರರೆಂಬ ಮೋಡಗಳು ರಣಾಂಗದಲ್ಲಿವೆ.ಮಳೆಗಾಲದ ಮೋಡವನ್ನು ನೋಡಿ ಕುಣಿಯುವ ನವಿಲುಗಳಂತೆ ಆ ರಣಾಂಗದಲ್ಲಿ ಕಬಂಧಗಳೆಂಬ (ಯುದ್ಧದಲ್ಲಿ ಸೈನಿಕರು ಶಿರಚ್ಛೇದ ಮಾಡಿದ್ದರಿಂದ ಪ್ರಾಣ ಹೋಗುವವರೆಗೆ ತೂರಾಡುತ್ತಿರುವ ಅಥವಾ ನರಳಾಡುತ್ತಿರುವ ಶರೀರಗಳು) ನವಿಲುಗಳು ನರ್ತಿಸುತ್ತಿವೆ. ಬೆಟ್ಟಗಳಂತಿರುವ ಆನೆಗಳು ವೇಗವಾಗಿ ಚಲಿಸುತ್ತಿರುವುದರಿಂದ ಚಲಿಸುತ್ತಿರುವ ಬೆಟ್ಟಗಳು ಆ ರಣಾಂಗಣವನ್ನು ಆವರಿಸಿಕೊಂಡಿರು ವಂತೆ ಕಾಣುತ್ತಿತ್ತು. ಈ ಎಲ್ಲ ದೃಶ್ಯಗಳನ್ನು ನೋಡಿದರೆ ಕಲ್ಪಾಂತ್ಯದ ಪ್ರಳಯಕಾಲವೇ ಬಂದಿದೆಯೋ ಎಂಬಂತೆ ಕಾಣುತ್ತಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
