ಬೆಂಗಳೂರು:ಯೋಗ ಎಲ್ಲರ ಕ್ಷೇಮ, ನೆಮ್ಮದಿ ಬಯಸುವಂತಹದ್ದಾಗಿದೆ. ಆದರೆ ಯೋಗಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿರುವುದು ಬೇಸರದ ಸಂಗತಿ ಎಂದು ಚಿತ್ರನಟಿ, ಯೋಗಪಟು ಅದಿತಿ ಪ್ರಭುದೇವ ವಿಷಾದಿಸಿದರು.
ರಾಜ್ಯ ಬಿಜೆಪಿ ಕಚೇರಿ ಮುಂದೆ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅದಿತಿ, ಯೋಗ ಯಾವುದೇ ಧರ್ಮ, ಮತ-ಪಂಥಕ್ಕೆ ಸೀಮಿತವಾದದ್ದಲ್ಲ. ಎಲ್ಲರೂ ಅಭ್ಯಾಸ ಮಾಡಬಹುದಾಗಿದೆ. ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಬಹಳಷ್ಟು ಕಸರತ್ತು ಮಾಡುತ್ತೇವೆ. ಆದರೆ, ಯೋಗದಿಂದ ದೈಹಿಕ, ಮಾನಸಿಕ, ಆತ್ಮ ಹಾಗೂ ಪರಮಾತ್ಮ ಈ ನಾಲ್ಕನ್ನೂ ಸಾಧಿಸಬಹುದಾಗಿದೆ ಎಂದರು.

ಉತ್ತಮ ಜೀವನ ಶೈಲಿಗೆ ಸಾಧನ:ವ್ಯಾಸ ಯೋಗ ವಿಶ್ವ ವಿದ್ಯಾಲಯದ ಉಪಕುಲಪತಿ ಬಿ.ಆರ್.ರಾಮಕೃಷ್ಣ ಮಾತನಾಡಿ, ಉತ್ತಮ ಜೀವನ ಶೈಲಿಗೆ ಯೋಗ ಸಾಧನ. ಇದರಿಂದ ಅನೇಕ ಕಾಯಿಲೆಗಳಿಂದ ಮುಕ್ತರಾಗಿ ವೈಯಕ್ತಿಕ ಆರೋಗ್ಯ ಹೊಂದಬಹುದಾಗಿದ್ದು, ಮಾನಸಿಕ, ಬೌದ್ಧಿಕ ಸಾಮರಸ್ಯದ ಜತೆಗೆ ಕುಟುಂಬವು ನೆಮ್ಮದಿಯಿಂದಿರಲು ನೆರವಾಗುತ್ತದೆ ಎಂದು ನಟಿ ಅದಿತಿ ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಮಾತನಾಡಿ, ಯೋಗ ವಿಶ್ವಕ್ಕೆ ಭಾರತ ನೀಡಿದ ಕೊಡುಗೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಐತಿಹಾಸಿಕ ದಿನದ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು. ಸಾಂಕೇತಿಕ ಯೋಗಾಭ್ಯಾಸದಲ್ಲಿ ಯೋಗಪಟುಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೈಸೂರಲ್ಲಿ ‘ನಮೋ’ ಯೋಗ: ನಿರಾಸೆಯಲ್ಲಿದ್ದ ಕೆಲ ಯೋಗಪಟುಗಳ ಮೊಗದಲ್ಲಿ ಸಂತಸ ಮೂಡಿಸಿದ ಡಿಸಿಪಿ

ಸಾಂಸ್ಕೃತಿಕ ನಗರಿ ಮೈಸೂರಲ್ಲಿ ‘ನಮೋ’ ಯೋಗ: 45 ನಿಮಿಷದಲ್ಲಿ ಯಾವೆಲ್ಲ ಯೋಗಾಸನ ಮಾಡಿದ್ರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
