ಬೆಂಗಳೂರು:ಕನ್ನಡ ಸಿನಿಮಾ ರಂಗದ ಹಿರಿಯ ನಟ ದ್ವಾರಕೀಶ್ ಅವರ ಮೊದಲ ಪತ್ನಿ ಅಂಬುಜಾ ನಿಧನರಾದರು.
ಅಂಬುಜಾ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲವರ್ಷಗಳಿಂದ ಅವರಿಗೆ ಮಂಡಿ ನೋವಿನ ಸಮಸ್ಯೆಯೂ ಕಾಡುತ್ತಿತ್ತು. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಶುಕ್ರವಾರ ಮಧ್ಯಾಹ್ನ ಎಚ್​.ಎಸ್​.ಆರ್​. ಲೇಔಟ್​ನಲ್ಲಿ ಕೊನೆಯುಸಿರೆಳೆದರು.ಇದನ್ನೂ ಓದಿರಿಸಿಎಂ ಯಡಿಯೂರಪ್ಪಗೆ ಮತ್ತೆ ಕರೊನಾ ಪಾಸಿಟಿವ್​! ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್​ಗೆ ಶಿಫ್ಟ್
ದ್ವಾರಕೀಶ್​ಗೆ ಇಬ್ಬರು ಪತ್ನಿಯರು. ಅಂಬುಜಾ ಮೊದಲನೆಯವರು. ದ್ವಾರಕೀಶ್​ 51ನೇ ವರ್ಷದಲ್ಲಿ ಶೈಲಜಾ ಎಂಬುವರ ಜತೆ ಎರಡನೇ ಮದುವೆ ಆಗುತ್ತಾರೆ. ಇದಕ್ಕೆ ಅಂಬುಜಾ ಅವರ ಸಂಪೂರ್ಣ ಒಪ್ಪಿಗೆ ಇತ್ತಂತೆ. ಈ ಬಗ್ಗೆ ಹಲವು ವೇದಿಕೆಗಳಲ್ಲಿ ಸ್ವತಃ ದ್ವಾರಕೀಶ್​ ಅವರೇ ಹೇಳಿಕೊಂಡಿದ್ದಾರೆ. ‘ಅಂಬುಜಾ.. ಐ ಹ್ಯಾವ್ ಲವ್ ವಿತ್ ಒನ್ ಲೇಡಿ’ ಎಂದು ನನ್ನ ಪತ್ನಿಗೆ ಹೇಳಿದೆ. ಅದಕ್ಕೆ ಉತ್ತರಿಸಿದ್ದ ಅಂಬುಜಾ, ‘ದ್ವಾರ್ಕಿ ನೀನು ಯಾವುದನ್ನು ಇಷ್ಟಪಡ್ತೀಯಾ ಅದನ್ನು ನಾನೂ ಇಷ್ಟಪಡ್ತೀನಿ’ ಎಂದಿದ್ದನ್ನು ದ್ವಾರಕೀಶ್​ ಸ್ಮರಿಸಿಕೊಂಡಿದ್ದರು. ‘ಅಂಬುಜಾ ಮತ್ತು ಶೈಲಾಜಾ ಜೊತೆಜೊತೆಗೆ ಇದ್ದೇನೆ. ನನ್ನ ಜೀವನ ಹೀಗೆ ಸಾಗುತ್ತಿದೆ’ ಎಂದು ಹೇಳಿಕೊಂಡಿದ್ದರು. ದ್ವಾರಕೀಶ್​ರ ಆಸೆ-ಆಕಾಂಕ್ಷೆಗಳಿಗೆ ಎಂದೂ ಅಡ್ಡಿಯಾಗದ ಅಂಬುಜಾ ಇಂದು ಇಹಲೋಕ ತ್ಯಜಿಸಿದ್ದಾರೆ.
ಗಂಡನ ಬಿಟ್ಟು ಅತ್ತೆಮಗನ ಜತೆ ಬಂದವಳ ಬದುಕಲ್ಲಿ ದುರಂತ! ಪ್ರಿಯಕರನಿಂದಲೇ ನಡೆಯಿತು ಘೋರ ಕೃತ್ಯ

ಕಾಡ್ಗಿಚ್ಚಿನಲ್ಲಿ ಸುಟ್ಟುಕರಕಲಾಗಿದ್ದ ವ್ಯಕ್ತಿ ಪ್ರಕರಣ: ಬ್ಯಾನರ್​ ಕೊಟ್ಟ ಸುಳಿವಿಂದ ಬಯಲಾಯ್ತು ನಿಗೂಢ ರಹಸ್ಯ

ಅಪ್ರಾಪ್ತರ ಲವ್​ ಕೇಸ್​: ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬಿತ್ತು ಬಾಲಕನ ಹೆಣ, ಊರಲ್ಲಿ ಪ್ರಕ್ಷುಬ್ಧ ವಾತಾವರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 11 =
Remember me
