ಬೆಂಗಳೂರು:ಸಿನಿಮಾ ರಂಗ ಎಂಬ ಬಣ್ಣದ ಜಗತ್ತಿನಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ವಿರುದ್ಧ ಪೋಷಕ ನಟ, ಯುವರತ್ನ ಸಿನಿಮಾ ಖ್ಯಾತಿಯ ಎಂ.ಕೆ. ಮಠ ಧ್ವನಿ ಎತ್ತಿದ್ದಾರೆ. ರಂಗಭೂಮಿ ಕಲಾವಿದೆಯೊಬ್ಬರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ಎಲ್ಲ ರೀತಿಯಲ್ಲೂ ಕಾಂಪ್ರೋಮೈಸ್ ಮಾಡಿಕೊಳ್ಳಬೇಕು ವ್ಯಕ್ತಿಯೊಬ್ಬ ​ವಾಟ್ಸ್​ಆ್ಯಪ್​ನಲ್ಲಿ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶದ ಸ್ಕ್ರೀನ್​ ಶಾಟ್​ ಅನ್ನು ಫೇಸ್​ಬುಕ್​ನಲ್ಲಿ ಹಾಕಿರುವ ​ಎಂ.ಕೆ. ಮಠ, ಆ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಇಂಥ ನಾಮಾರ್ದರಿಗೆ ಯಾವತ್ತು ಬುದ್ಧಿಬರತ್ತೆ? ಇಂಥವರಿಂದಾಗಿಯೇ ಚಿತ್ರರಂಗಕ್ಕೆ ಕಟ್ಟ ಹೆಸರು ಬರ್ತಿರೋದು. ಈತ ಒಬ್ಬ ರಂಗಭೂಮಿ ಕಲಾವಿದೆಗೆ ಕಳುಹಿಸಿರುವ ಸಂದೇಶವನ್ನು ಗಮನಿಸಿ… 36 ದಿನ ಶೂಟಿಂಗ್ ಅಂತೆ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವಂತೆ, ದಿನವೊಂದಕ್ಕೆ 500 ರೂಪಾಯಿ ಪೇಮೆಂಟ್ ಕೊಡ್ತಾನಂತೆ. ಪ್ರಯಾಣ- ಕಾಸ್ಟ್ಯೂಂ-ಅಪಾರ್ಟ್​ಮೆಂಟ್ ಎಲ್ಲಾ ಅವ್ರದ್ದೇ ಅಂತೆ, ಓಕೆ ಅಂದ್ರೆ ಮಾತಾಡ್ತಾನಂತೆ #ಕಾಂಪ್ರೋಮೈಸ್​ಗೆ ಒಪ್ಕೋಬೇಕಂತೆ… ಎಂಥಾ ಮಾನಗೇಡಿ ಜನರು ಇವ್ರೆಲ್ಲಾ? ಎಂದು ಕಿಡಿಕಾರಿರುವ ಪೋಷಕ ನಟ ಎಂ.ಕೆ‌.ಮಠ, ಇವರೆಲ್ಲಾ ಅವರವರ ತಾಯಿ ಹೊಟ್ಟೇಲಿ ಹುಟ್ಟಿ ಬಂದಿರೋದಲ್ವ? ಸಾವಿರಾರು ಕನಸು ಹೊತ್ಕೊಂಡು, ಚಿತ್ರರಂಗದಲ್ಲಿ ಏನನ್ನಾದ್ರೂ ಸಾಧಿಸಬೇಕು, ತಾನು ಮಾಡೋ ಸೀರಿಯಲ್-ಸಿನಿಮಾಗಳನ್ನು ನೋಡುವವರು ತನ್ನನ್ನು ಗುರುತಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ನಂಬಿರುವವರಿಗೆ ಮೂರುಹೊತ್ತು ಅನ್ನ ಕೊಡಬೇಕೆಂದು ಚಿತ್ರರಂಗಕ್ಕೆ ಬರುವ ಹೆಣ್ಮಕ್ಕಳನ್ನು ಹೀಗಾ ನಡೆಸಿಕೊಳ್ಳೋದು? ಇಷ್ಟೆಲ್ಲಾ ಆದ್ಮೇಲೆ ಆತ ಶೂಟಿಂಗ್ ಪ್ರಾರಂಭ ಮಾಡ್ತಾನೆ ಅನ್ಕೊಂಡ್ರ? ನೆವರ್… ಒಂದಷ್ಟು ದಿನ ಹೆಣ್ಮಕ್ಳ ಜೊತೆ ಸುತ್ತಾಡಿ ತಿಂದು-ತೇಗಿ ತನ್ನ ಸಿಮ್ ಕಾರ್ಡ್ ಬದಲಾಯಿಸ್ತಾನೆ ಅಷ್ಟೆ…’ ಎಂದು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
‘ಕನಸುಗಳ ಮೂಟೆ ಹೊತ್ಕೊಂಡು ಚಿತ್ರರಂಗಕ್ಕೆ ಬರುವ ಹೆಣ್ಮಕ್ಕಳೇ, ಇಂಥ ಪೀಡಕರಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮಲ್ಲಿ ಪ್ರತಿಭೆ ಇದ್ದರೆ ಖಂಡಿತಾ ನಿಮಗೆ ಅವಕಾಶ ಸಿಕ್ಕೇ ಸಿಗತ್ತೆ. ನೀವು ಪಾತ್ರಕ್ಕಾಗಿ ಹಣ ಕೊಡಬೇಕಾಗಿಲ್ಲ, ನೀವು ಪಾತ್ರ ಮಾಡಿದ್ದಕ್ಕಾಗಿ ಅವರೇ ಸಂಭಾವನೆ ಕೊಡ್ತಾರೆ. ಸಿಗುವ ಸಂಭಾವನೆ ಹೆಚ್ಚೋ ಕಮ್ಮೀನೋ ನಿಮ್ಮ ಪ್ರತಿಭೆಯನ್ನು ಪ್ರೂವ್ ಮಾಡೋವರೆಗೆ ಕಣ್ಣಿಗೊತ್ಕೊಂಡು ತಗೊಳ್ಳಿ… ಮೋಸ ಹೋಗಬೇಡಿ, ನೀವು ನೀವಾಗಿರಿ ಮಕ್ಕಳೇ, ನಿಮಗೆ ಶುಭವಾಗಲಿ’ ಎಂದು ಫೇಸ್​ಬುಕ್​ನಲ್ಲಿ ಎಂ.ಕೆ‌.ಮಠ ಬರೆದುಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + five =
Remember me
