ಬೆಂಗಳೂರು:ಚಂದನವನದ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಕ್ರೇಜಿಸ್ಟಾರ್​ ವಿ. ರವಿಚಂದ್ರನ್​ ಅವರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಇನ್ನಿಲ್ಲ. ತಾಯಿಯನ್ನು ಕಳೆದುಕೊಂಡ ಕುಟುಂಬವೀಗ ಶೋಕಸಾಗರದಲ್ಲಿ ಮುಳುಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಟ್ಟಮ್ಮಾಳ ಅವರು ಮೂರ್ನಾಲ್ಕು ವರ್ಷಗಳಿಂದ ಮಾತು ನಿಂತಿತ್ತು. ಯಾರು ಮಾತನಾಡಿಸಿದರೂ ಸ್ಪಂದಿಸುತ್ತಿರಲಿಲ್ಲ… ಆದರೆ, ರವಿಚಂದ್ರನ್​ ಅವರ ಧ್ವನಿ ಕೇಳಿದ್ರೆ ಎಚ್ಚರಗೊಳ್ಳುತ್ತಿದ್ದ ತಾಯಿ, ಕಣ್ಣುಬಿಟ್ಟು ನೋಡುತ್ತಿದ್ದರು…
ಹೌದು, ಈ ಬಗ್ಗೆ ಸ್ವತಃ ರವಿಚಂದ್ರನ್​ ಅವರೇ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ನಾನು ಅಮ್ಮನ ಕೈ ಮುಟ್ಟಿದರೆ ಎಚ್ಚರ ಆಗುತ್ತಾರೆ, ನನ್ನ ಧ್ವನಿ ಕೇಳಿದ್ರೆ ಕಣ್ಣುಬಿಟ್ಟು ನೋಡುತ್ತಾರೆ… ಎಂದಿದ್ದರು. ನಟ ಪುನೀತ್​ ರಾಜ್​ಕುಮಾರ್​ ಅವರು ನಿಧನರಾದ ದಿನವೂ ಪುಟ್ಟಮ್ಮಾಳ್​ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು.ಅಮ್ಮನ ಚೇತರಿಕೆಗಾಗಿ ರವಿಚಂದ್ರನ್​ ಕುಟುಂಬ ತೀವ್ರಾ ನಿಗಾ ವಹಿಸಿತ್ತಾದರೂ ಫಲಿಸಲಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ 6.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.
ಅಂತಿಮ ದರ್ಶನ:ರಾಜಾಜಿನಗರದಲ್ಲಿರುವ ರವಿಚಂದ್ರನ್ ನಿವಾಸದಲ್ಲಿ ಪಟ್ಟಮ್ಮಾಳ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ರ ನಂತರ ಗಾಯತ್ರಿ ನಗರದಲ್ಲಿರುವ ಹರಿಶ್ಚಂದ್ರ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಯೂಕ್ರೇನ್​ಗೆ ಸೇರಿದ್ದ ವಿಶ್ವದ ಅತಿದೊಡ್ಡ ವಿಮಾನವನ್ನೂ ನಾಶ ಮಾಡಿದ ರಷ್ಯಾ ಸೇನೆ!

ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × four =
Remember me
