ಬೆಂಗಳೂರು:ರಾಷ್ಟ್ರ ಪ್ರಶಸ್ತಿ ವಿಜೇತ, ಸ್ಯಾಂಡಲ್​ವುಡ್​ ನಟ ಸಂಚಾರಿ ವಿಜಯ್​ ಅಗಲಿಕೆ ನೋವು ಇನ್ನೂ ಹಸಿಯಾಗೆ ಇದೆ. ಅವರ ಅಭಿಮಾನಿಗಳು, ಸ್ನೇಹಿತರು, ಆಪ್ತರು ವಿಜಯ್​ ಫೋಟೋಗಳನ್ನು ಶೇರ್​ ಮಾಡಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಅವುಗಳನ್ನ ನೋಡುತ್ತಿದ್ದರೆ ವಿಜಯ್​ ನೆನಪು ಕಣ್ತುಂಬಿ ಬರುತ್ತೆ. ಈ ವೇಳೆ ನಟ ಸತೀಶ್​ ನೀನಾಸಂ ಅವರು ಸಾಮಾಜಿಕ ಜಾಲತಾಣದಲ್ಲಿ ವಿಜಯ್​ರ ಅಪರೂಪದ ವಿಡಿಯೋ ತುಣಕನ್ನು ಶೇರ್​ ಮಾಡಿಕೊಂಡಿದ್ದು, ನೆಟ್ಟಿಗರು ವಿಜಯ್ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದಾರೆ.
ವಿಜಯ್​ ಬದುಕಿದ್ದಾಗ ಕರೊನಾ ಸಂಕಷ್ಟ ಕಾಲದಲ್ಲಿ ಬಡವರ ಹಸಿವು ನೀಗಿಸಲು ಶ್ರಮಿಸಿದ್ದರು. ಆಹಾರ ಕಿಟ್​ ವಿತರಣೆ ಜತೆಗೆ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು. ಇಂತಹ ಮಾನವೀಯ ಗುಣಗಳನ್ನು ಸತೀಶ್​ ನೀನಾಸಂ ನೆನಪಿಸಿಕೊಂಡಿದ್ದಾರೆ.ವಿಡಿಯೋದಲ್ಲಿ ಏನಿದೆ?:ಚೀಲಕ್ಕೆ ಅಕ್ಕಿ ತುಂಬುತ್ತಿದ್ದ ವಿಜಯ್​ಗೆ ತಮಾಷೆ ಮಾಡಿದ ಸತೀಶ್, ‘ರೇಷನ್​ ತುಂಬುತ್ತಿರುವುದನ್ನು ನೋಡಿದ್ರೆ ನಿಮಗೆ ಇದರಲ್ಲೂ ನ್ಯಾಷನಲ್​ ಅವಾರ್ಡ್​ ಬಂದರೂ ಬರಬಹುದು’ ಎಂದಿದ್ದಾರೆ. ಇದಕ್ಕೆ ವಿಜಯ್​, ‘ಹೌದೌದು, ಅದು ನ್ಯಾಷನಲ್​ ಅವಾರ್ಡ್​ ಅಲ್ಲ, ರೇಷನಲ್​ ಅವಾರ್ಡ್’​ ಎಂದು ತಮಾಷೆ ಮಾಡುತ್ತಾ ನಕ್ಕಿದ್ದಾರೆ.
👣pic.twitter.com/7mDOmbwEjy
— Sathish Ninasam (@SathishNinasam)June 15, 2021

ಜೂ.12ರ ರಾತ್ರಿ​ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಕೋಮಾಗೆ ತಲುಪಿದ್ದ ವಿಜಯ್​ ಜೂ.15ರ ಬೆಳಗಿನ ಜಾವ 3.34ಕ್ಕೆ ಕೊನೆಯುಸಿರೆಳೆದಿದ್ದರು. ವಿಜಯ್​ರ ಅಂಗಾಂದವನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ. ವಿಜಯ್​ ಬದುಕಿದ್ದಾಗಲೂ ಸಾಮಾಜಿಕ ಕಳಕಳಿ ಹೊಂದಿದ್ದರು. ಸತ್ತ ಮೇಲೂ ಹಲವರಿಗೆ ಜೀವದಾನ ನೀಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಸಾವಿಗೂ 4 ದಿನ ಮೊದಲೇ ಸಂಚಾರಿ ವಿಜಯ್​ ಬರೆದಿದ್ದ ಈ ಬರಹ ಓದಿದ್ರೆ ಕಣ್ಣು ತುಂಬಿ ಬರುತ್ತೆ

ನನ್ನ ಪತ್ನಿ ಪರಪುರುಷನೊಂದಿಗೆ ಓಡಿಹೋಗಿದ್ದಾಳೆ… ಎಂದವನ ಅಜ್ಜಿ ಹೊಲದಲ್ಲಿ ಅಡಗಿತ್ತು ಭಯಾನಕ ರಹಸ್ಯ!

ಗಂಗಾ ನದಿಯಲ್ಲಿ ತೇಲಿ ಬಂದ ಪೆಟ್ಟಿಗೆಯಲ್ಲಿತ್ತು ಜೀವಂತ ಮಗು! ಜಾತಕ ಸಹಿತ ದುರ್ಗಾದೇವಿ ಫೋಟೋ ಪತ್ತೆ…

5 ದಿನದ ಬಾಣಂತಿ ಕರೊನಾಗೆ ಬಲಿ! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ.. 3 ಮಕ್ಕಳನ್ನ ತಬ್ಬಲಿ ಮಾಡಿಬಿಟ್ಟೆಯಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + twenty =
Remember me
