ಬೆಂಗಳೂರು:ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ, ನಟ ಕಟ್ಟೆ ರಾಮಚಂದ್ರ ಅವರು ಶುಕ್ರವಾರ ಬೆಳಗ್ಗೆ ನಿಧನರಾದರು.
ಇವರಿಗೆ 75 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ಸೇಂಟ್ ಜೋನ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಂದು ಮಧ್ಯಾಹ್ನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
1947ರ ಫೆಬ್ರವರಿ 15ರಂದು ಜನಿಸಿದ್ದ ಕಟ್ಟೆ ರಾಮಚಂದ್ರ ಅವರು ನಿರ್ದೇಶನ, ನಿರ್ಮಾಣ, ನಟನೆಯಲ್ಲೂ ತೊಡಗಿಸಿಕೊಂಡಿದ್ದರು. ತಬ್ಬಲಿ ನೀನಾದೆ ಮಗನೆ, ಒಂದು ಪ್ರೇಮದ ಕಥೆ, ಗೀಜಗನ ಗೂಡು, ನಮ್ಮಮ್ಮ ತಾಯಿ ಅಣ್ಣಮ್ಮ, ಗ್ರಹಣ, ಪ್ರೇಮ ಮತ್ಸರ, ಅಂತರಾಳ, ಕಾಡಿನ ಬೆಂಕಿ, ಬಿಂಬ… ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ.
ಕಟ್ಟೆ ರಾಮಚಂದ್ರರು ನಿರ್ದೇಶಿಸಿದ ‘ಅರಿವು’ ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಬಂದಿದೆ. ‘ವೈಶಾಖದ ದಿನಗಳು’ ಸಿನಿಮಾ ಕೂಡ ಇವರ ನಿರ್ದೇಶನದಲ್ಲೇ ತೆರೆಕಂಡಿತ್ತು.
ನಿರೂಪಕರ ಬದಲಾವಣೆ: ಸಿಎಂ ಮನೆ ಬಳಿ ಏಕಾಂಗಿ ಹೋರಾಟ ನಡೆಸಿದ್ದ ಡಾ.ಗಿರಿಜಾಗೆ ಮಣೆ, ಅಪರ್ಣಾಗೆ ತಪ್ಪಿದ ಅವಕಾಶ

ವೈದ್ಯರ ಎಡವಟ್ಟು: ಜ್ವರ, ಕೆಮ್ಮು, ನೆಗಡಿಯಿಂದ ಬಳಲುತ್ತಿದ್ದ ಯುವಕನಿಗೆ ಕಾಲು ಕತ್ತರಿಸುವ ಹಂತಕ್ಕೆ ಸೋಂಕು

ಬೇಡ ಬೇಡ ಅಂದ್ರೂ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಲೇ ಹೊಗೆನಕಲ್ ಜಲಪಾತಕ್ಕೆ ಬಿದ್ದು ವಿದ್ಯಾರ್ಥಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
