ಬೆಂಗಳೂರು:ಐಪಿಎಸ್​ ಅಧಿಕಾರಿ ರವಿ ಡಿ. ಚೆನ್ನಣ್ಣನವರ್​ ಅವರ ತಮ್ಮ ರಾಘವೇಂದ್ರ ಡಿ. ಚೆನ್ನಣ್ಣನವರ್​ ವಿರುದ್ಧ ವರದಕ್ಷಣೆ ಕಿರುಕುಳ ಆರೋಪದ ಮೇಲೆ ಚಂದ್ರಾಲೇಔಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಜಾನಪುರದ ಎಲ್​. ರೋಜಾ(26) ಎಂಬಾಕೆ ತನ್ನ ಪತಿ ರಾಘವೇಂದ್ರ ಡಿ. ಚೆನ್ನಣ್ಣನವರ್​ ಮತ್ತು ಹನುಮಂತ ತಿಮ್ಮಾಪುರ ಎಂಬುವರ ವಿರುದ್ಧ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ. ಘಟನೆ ನಡೆದಿರುವುದು ಗದಗ ಜಿಲ್ಲೆಯಾದ ಕಾರಣಕ್ಕೆ ಸಂಬಂಧಪಟ್ಟ ಪೊಲೀಸ್​ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯನಗರ ಅತ್ತಿಗುಪ್ಪೆ ಇಂದಿರಾ ಕಾಲನಿಯಲ್ಲಿ ನೆಲೆಸಿರುವ ರೋಜಾ, ತನ್ನ ದೂರಿನಲ್ಲಿ ವರದಕ್ಷಣೆ ಕಿರುಕುಳ ಆರೋಪದ ಮೇಲೆ ದೂರು ನೀಡಿದ್ದಾರೆ. 2016ರಲ್ಲಿ ರಾಘವೇಂದ್ರ ಜತೆ ಮದುವೆ ಆಗಿತ್ತು. ಇದಕ್ಕೂ ಮೊದಲು ರುಕ್ಮೀಣಿ ಎಂಬಾಕೆ ಜತೆ ರಾಘವೇಂದ್ರನಿಗೆ ಅಕ್ರಮ ಸಂಬಂಧವಿತ್ತು.
ಇದನ್ನು ಪ್ರಶ್ನಿಸಿದಾಗ ಕೌಟುಂಬಿಕ ಕಲಹ ಉಂಟಾಗಿತ್ತು. ವಿಷಯ ಗೊತ್ತಾಗಿ ರವಿ ಡಿ. ಚೆನ್ನಣ್ಣನವರ್​ ಅವರು ನನ್ನ ಮತ್ತು ನನ್ನ ಪತಿಯನ್ನು, ಕುಟುಂಬ ಸದಸ್ಯರನ್ನು ಕರೆದು ಮಾತುಕತೆ ನಡೆಸಿದರು. ರೋಜಾ ಮದುವೆಗೂ ಮೊದಲೇ ರುಕ್ಮೀಣಿಯನ್ನು ವಿವಾಹವಾಗಿದ್ದೆ. ಇಬ್ಬರ ಜತೆಗೂ ಸಂಸಾರ ನಡೆಸುತ್ತೇನೆ ಎಂದು ರಾಘವೇಂದ್ರ ತಿಳಿಸಿದ. ಇದು ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ಇಷ್ಟವಾಗಲಿಲ್ಲ.
ರಾಘವೇಂದ್ರ ನನ್ನ ಮದುವೆ ಆಗುವ ಮೊದಲೇ ರುಕ್ಮೀಣಿಯನ್ನು ವಿವಾಹ ಆಗಿರುವ ವಿಚಾರ ಮುಚ್ಚಿಟ್ಟು ನನಗೆ ಮೋಸ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಪದೇಪದೆ ತವರು ಮನೆಯಿಂದ ಹಣ ತರುವಂತೆ ಒತ್ತಾಯ ಮಾಡುತ್ತಿದ್ದಾರೆ. ರುಕ್ಮೀಣಿಯ ಸಹೋದರ ಹನುಮಂತ ತಿಮ್ಮಾಪುರ ನನಗೆ ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ರಾಘವೇಂದ್ರ ಮತ್ತು ಹನುಮಂತನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ರೋಜಾ ಮನವಿ ಮಾಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಮಸೀದಿಯಲ್ಲಿ ಸಿಕ್ಕಿದ್ದು ಶಿವಲಿಂಗವಲ್ಲ, ಕಾರಂಜಿ ಕಲ್ಲು! ಡಮರುಗ, ಕಮಲ, ಆನೆ, ಕುದುರೆ… ಹಿಂದೂ ಚಿಹ್ನೆಯಲ್ಲ’

ಕೂಲಿಕಾರಳ ಮಗ SSLC ಪರೀಕ್ಷೆಯಲ್ಲಿ ಟಾಪರ್​! ತಂದೆ ಇಲ್ಲದ ನೋವು, ಕಡುಬಡತನ ಇದ್ದರೂ ಓದಿನಲ್ಲಿ ಶ್ರೀಮಂತ

ಬಿಕಿನಿ ಧರಿಸಿಕೊಂಡೇ ಬರ್ತ್​ ಡೇ ಕೇಕ್​ ಕತ್ತರಿಸಿದ ಆಮಿರ್​ ಖಾನ್​ ಪುತ್ರಿ ಇರಾ! ಫೋಟೋ ವೈರಲ್​, ನೆಟ್ಟಿಗರಿಂದ ಬಗೆಬಗೆಯ ಕಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + one =
Remember me
