ಬೆಂಗಳೂರು:ನನ್ನ ಗಂಡ ಬೇರೆಯವರ‌ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ. ಮೂರ್ನಾಲ್ಕು ಮಹಿಳೆಯರನ್ನ ಮದ್ವೆ ಆಗಿದ್ದಾನೆ. ನನ್ನನ್ನು ಮದ್ವೆ ಆಗುವಾಗ ಯಾರನ್ನೋ ಕರೆದುಕೊಂಡು ಬಂದು ಇವರೇ ತನ್ನ ತಂದೆ-ತಾಯಿ ಎಂದು ಪರಿಚಯಿಸಿದ್ದ. ಸುಳ್ಳು ಹೇಳಿ ನನ್ನನ್ನು ಮದ್ವೆ ಮಾಡಿಕೊಂಡು ಮೋಸ ವಂಚಿಸಿದ್ದಾನೆ… ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್​ ಠಾಣೆಯ ಪಿಎಸ್​ಐ ರಮೇಶ್ ಗೂಗರಿ ವಿರುದ್ಧವೇ ಇವರ ಪತ್ನಿ ಎಪ್​ಐಆರ್​ ದಾಖಲಿಸಿದ್ದಾರೆ. ರಮೇಶ್ ಗೂಗರಿ ಕೆಸಲ ಮಾಡುವ ಪೊಲೀಸ್​ ಠಾಣೆಯಲ್ಲೇ ದೂರು ದಾಖಲಾಗಿದೆ.
ಪಿಎಸ್ಐ ರಮೇಶ್ ಕೂಗರಿ ಮತ್ತು ರಾಶಿ ಎಂಬುವವರು ಪ್ರೀತಿಸಿ 2021ರ ನವೆಂಬರ್​ನಲ್ಲಿ ಮದುವೆ ಆಗಿದ್ದರು. ಇವರಿಬ್ಬರೂ ಸಬ್​ರಿಜಿಸ್ಟ್ರಾರ್​ ಕಚೇರಿಯಲ್ಲೂ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ನನ್ನನ್ನು ಮದ್ವೆಯಾಗಲು ಸುಳ್ಳು ತಂದೆ-ತಾಯಿಯನ್ನ‌ ತೋರಿಸಿ ವಂಚಿಸಿದ್ದಾರೆ. ಮದ್ವೆವೆಯಾದ ನಂತರ ಬೇರೆಯವರ‌ ಜೊತೆ ಸಂಬಂಧವಿಟ್ಟುಕೊಂಡು ನನಗೆ ಕಿರುಕುಳ‌ ಕೊಟ್ಟಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಧಾನ ನಡೆದಿದೆ. ಆದರೂ ನನ್ನ ಗಂಡ ಬೇರೆ ಯುವತಿಯರ ಜೊತೆ ಸಂಪರ್ಕ ಹೊಂದಿ ನನಗೆ ಕಿರುಕುಳ ಕೊಟ್ಟಿದ್ದಾನೆ ಎಂದು ರಾಶಿ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ನ್ಯಾಯಕ್ಕಾಗಿ ಎಸ್ಪಿ ಕಚೇರಿಯ ಮೊರೆ ಹೋಗಿದ್ದಾಳೆ. ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರಿಟ್ಟಿದ್ದಾಳೆ.
ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ರಮೇಶ್ ಗೂಗರಿ, ನಾನು ರಾಶಿಯನ್ನ ಪ್ರೀತಿಸಿ ಮದ್ವೆಯಾಗಿದ್ದೆ. ಒಟ್ಟಿಗೆ ಬಾಳಬೇಕು ಅಂತ ಕನಸು ಕಂಡಿದ್ದೆ. ಆದ್ರೆ ಮದ್ವೆಯಾದ ನಂತರ ಅವಳು ಹೇಳಿದಾಗೆ ನಾನು ಕೇಳ್ತಿಲ್ಲ ಅಂತ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾಳೆ. ನನಗೆ ಊರಿಗೆ ಹೋಗಲೂ ಬಿಡುತ್ತಿರಲಿಲ್ಲ. ನನ್ನ ತಂದೆ-ತಾಯಿ ಸೊಸೆಯನ್ನು ಕರೆದುಕೊಂಡು ಬರುವಂತೆ ಹೇಳಿದ್ದರು. ನಾನು ಅವಳನ್ನ ಮದ್ವೆ ಆಗಿದ್ದೀನಿ. ನಾನು ಅವಳನ್ನ ಯೂಸ್​ ಮಾಡಿಕೊಂಡು ಬಿಟ್ಟಿಲ್ಲ. ನಮ್ಮೂರಿಗೆ ಬಾ ಅಂದ್ರೆ ಆಕೆ ಬರ್ತಿಲ್ಲ.. ನಾನು ಅವಳಿಗೆ ಮೋಸ ಮಾಡಿಲ್ಲ… ನಾಲ್ಕೈದು ಜನರನ್ನು ನಾನು ಮದ್ವೆ ಆಗಿದ್ದೀನಿ ಅಂತ ಹೇಳ್ತಿರೋದೆಲ್ಲಾ ಸುಳ್ಳು. ಆಕೆ ಜೊತೆ ಬಾಳಬೇಕೆಂದೇ ನಾನು ಅವಳನ್ನ ಮದ್ವೆ ಆಗಿರೋದು ಎಂದು ಸ್ಪಷ್ಟ ಪಡಿಸಿದರು.
ಟ್ರಿಪ್ ನೆಪದಲ್ಲಿ ಶಾಸಕ ಗೌರಿಶಂಕರ್ ನಾಪತ್ತೆ! ಜೆಡಿಎಸ್​ಗೆ ತಲೆನೋವಾದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ

ಸತ್ತ ಗಂಡ ಹಾವಿನ ರೂಪದಲ್ಲಿ ಮನೆಗೆ ಬಂದನೇ..? ಬಾಗಲಕೋಟೆಯಲ್ಲಿ ಹಾವಿನ ಜತೆ 4 ದಿನ ವಾಸವಿದ್ದ ಅಜ್ಜಿ!

ಬಟ್ಟೆ ಸರಿಸಿ ತೊಡೆ ಸವರುತ್ತಿದ್ದ.. ತುಟಿಗೆ ಚುಂಬಿಸಿ ಪ್ಯಾಂಟ್​ ಬಿಚ್ಚಿದ್ದ… ಬೆಂಗ್ಳೂರಲ್ಲಿ ಬಾಲಿವುಡ್​ ನಟಿ ಅನುಭವಿಸಿದ ನೋವು ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
