ದಾವಣಗೆರೆ:ಉಕ್ಕಿ ಹರಿಯುತ್ತಿರುವ ನೀರಿನಲ್ಲಿ ಅಪಾಯವನ್ನೂ ಲೆಕ್ಕಿಸದೆ ಮೀನು ಹಿಡಿಯಲು ಹೋದ ಯುವಕ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುವಷ್ಟರಲ್ಲಿ ಅದೃಷ್ಟವಶಾತ್​ ಪಾರಾದ ದೃಶ್ಯ ವೈರಲ್​ ಆಗಿದೆ.
ಭಾರಿ ಮಳೆಯಿಂದಾಗಿ ಹರಿಹರ ತಾಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂ ತುಂಬಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಡ್ಯಾಂನ ಎಲ್ಲ ಗೇಟ್ ಓಪನ್ ಮಾಡಿದ್ದು, ಜೋರಾಗಿ ಹರಿಯುತ್ತಿರುವ ನೀರಲ್ಲಿ ಮೀನು ಹಿಡಿಯಲು ಹೋದ ಯುವಕ ಕೆಲ ದೂರ ಕೊಚ್ಚಿಹೋದ. ಸ್ವಲ್ಪ ಹೊತ್ತು ಈಜಾಡಿ ಪ್ರಾಣ ಉಳಿಸಿಕೊಂಡ ಯುವಕನತ್ತ ಹಗ್ಗ ಬಿಟ್ಟು ಸ್ಥಳೀಯರು ಮೇಲಕ್ಕೆ ಎಳೆದುಕೊಂಡರು.
VIDEO| ಪ್ರಾಣವನ್ನೇ ಪಣಕ್ಕಿಟ್ಟು ಜಲಾವೃತಗೊಂಡ ಗ್ರಾಮಗಳಲ್ಲಿ ಬೆಳಕು ಹರಿಸಿದ ಪವರ್​ಮನ್​!

ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

ಬಹಿರ್ದೆಸೆಗೆ ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ!

Sign in to your account
Please enter an answer in digits:18 + nine =
Remember me
