ಮಂಡ್ಯ:ವಿಶ್ವವಿಖ್ಯಾತ ಕೆಆರ್‌ಎಸ್ ಅಣೆಕಟ್ಟೆಯಿಂದ ಸುಮಾರು 85 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಆದರೆ ಇಷ್ಟು ದೊಡ್ಡಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೂ, ಮಂಡ್ಯ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ಪೈಪ್‌ಲೈನ್ ಹಾಳಾಗಿದೆ. ಪರಿಣಾಮ ಮೂರ್ನಾಲ್ಕು ದಿನದಿಂದ ನಗರಕ್ಕೆ ಅಗತ್ಯ ನೀರಿನ ಪೂರೈಕೆಯಾಗುತ್ತಿಲ್ಲ. ಪ್ರವಾಹ ಕಡಿಮೆ ಆಗದಿದ್ದರೆ ಸಮಸ್ಯೆ ಇನ್ನಷ್ಟು ತಲೆದೋರಲಿದೆ.
ಕೆಲ ದಿನದಿಂದ ಪ್ರವಾಹದ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್‌ನೊಳಗೆ ತ್ಯಾಜ್ಯ ಸೇರಿಕೊಂಡಿದೆ. ಇದರಿಂದಾಗಿ ನೀರು ಪೂರೈಕೆಯಾಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಸರಿ ಮಾಡಬಹುದಿತ್ತು. ಆದರೆ ಪ್ರವಾಹ ಜೋರಾಗಿರುವುದರಿಂದ ಪೈಪ್‌ಲೈನ್‌ನೊಳಗೆ ಇಳಿದು ತ್ಯಾಜ್ಯವನ್ನು ತೆಗೆಯುವುದು ಸುಲಭದ ಮಾತಲ್ಲ. ಇದು ಜಲಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಮಂಡ್ಯ ನಗರಕ್ಕೆ ಪ್ರತಿದಿನ 25 ರಿಂದ 30 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಇದರಲ್ಲಿ ಸ್ವಲ್ಪ ಮಟ್ಟದಲ್ಲಿ ಏರುಪೇರಾದರೂ ನೀರಿನ ಸಮಸ್ಯೆ ಎದುರಾಗುತ್ತದೆ. ಹೀಗಿರುವಾಗ ಪ್ರವಾಹದಿಂದಾಗಿ ಸದ್ಯಕ್ಕೆ ನಗರಕ್ಕೆ ಪೂರೈಕೆಯಾಗುತ್ತಿರುವುದು ಶೇ.10 ನೀರು ಮಾತ್ರ. ಇದರಿಂದ ಎಲ್ಲರಿಗೂ ನೀರು ಕೊಡುವುದು ಅಸಾಧ್ಯ.
ಈ ಸಮಸ್ಯೆ ಬಗೆಹರಿಸಲು ಪೈಪ್‌ಲೈನ್‌ನಲ್ಲಿ ಸೇರಿಕೊಂಡಿರುವ ತ್ಯಾಜ್ಯವನ್ನು ತೆಗೆಯುವುದಷ್ಟೇ ದಾರಿ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಎದುರಾಗಿದೆ. ಹಿಂದಿನ ವರ್ಷಗಳಲ್ಲಿ ಎಷ್ಟೇ ದೊಡ್ಡಮಟ್ಟದಲ್ಲಿ ಪ್ರವಾಹ ಬಂದಿದ್ದರೂ, ಪೈಪ್‌ಲೈನ್‌ನಲ್ಲಿ ತ್ಯಾಜ್ಯ ಸೇರಿಕೊಂಡಿರಲಿಲ್ಲ. ಸದ್ಯಕ್ಕೆ ಪೈಪ್‌ಲೈನ್ ಮೂಲಕ ಬರುತ್ತಿರುವ ಶೇ.10 ನೀರಿನ ಜತೆಗೆ ಬೋರ್‌ವೆಲ್‌ಗಳಿಂದ ಓವರ್‌ಹೆಡ್ ಟ್ಯಾಂಕ್ ತುಂಬಿಸುವ ಕೆಲಸ ನಡೆಯುತ್ತಿದೆ. ಇದಲ್ಲದೆ ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಜಾಕ್‌ವೆಲ್‌ನೊಳಗೆ ಇಳಿದು ತ್ಯಾಜ್ಯವನ್ನು ತೆಗೆಯುವುದು ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡಿದಂತಾಗಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಕೆಳಗಿರುವ ಜಾಕ್‌ವೆಲ್‌ಗೆ ಸಮೀಪ ಹೋಗಲು ನೀರಿನ ಮೇಲ್ಮಟ್ಟದಿಂದ ಸುಮಾರು 10 ಅಡಿ ಕೆಳಗಿಳಿಯಬೇಕು. ನೀರು ನಿಂತಲ್ಲೆ ಇದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಜೋರಾಗಿ ಹರಿಯುತ್ತಿರುವುದರಿಂದ ನುರಿತ ಈಜುಗಾರರು ಕೆಳಗೆ ಇಳಿಯುವ ಧೈರ್ಯ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಗೋವಾದಲ್ಲಿರುವ ನುರಿತ ಈಜುಗಾರರನ್ನು ಸಂಪರ್ಕಿಸಿದ್ದಾರೆ.
ಪ್ರವಾಹದ ನಡುವೆಯೇ ಪಿಂಡ ಪ್ರದಾನ! ಇಬ್ಬರು ಕೊಚ್ಚಿ ಹೋದರೂ ಬುದ್ಧಿ ಕಲಿಯದ ಜನತೆ- ತಾಲೂಕು ಆಡಳಿತ

‘ಹುಚ್ಚ ವೆಂಕಟ್’​ ಹೆಸರಲ್ಲಿ ಡಿಕೆಶಿ ಒಡೆತನದ ಶಾಲೆಗೆ ಬಾಂಬ್​ ಬೆದರಿಕೆ! ಪಾಲಕರಿಗೆ ಧೈರ್ಯ ತುಂಬಿದ ಅಪ್ಪ-ಮಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
