ಬೆಳಗಾವಿ: ‘ಮಹಾ’ಮಳೆಗೆ ಬೆಳಗಾವಿ ಜಿಲ್ಲೆಯ ಜನತೆ ಪ್ರವಾಹಕ್ಕೆ ಸಿಲುಕಿದ್ದು, ಆತಂಕದಲ್ಲೇ ದಿನದೂಡುತ್ತಿದ್ದಾರೆ. ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗಿದ್ದು, ಗ್ರಾಮಕ್ಕೆ ಗ್ರಾಮವೇ ನೀರಲ್ಲಿ ಮುಳುಗಿವೆ. ಮಹಾಪ್ರವಾಹಕ್ಕೆ ಸಿಲುಕಿದ ರಾಯಭಾಗ ತಾಲೂಕಿನ ಭಾವನಸೌದತ್ತಿ ಮತ್ತು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ದೃಶ್ಯ ಡ್ರೋಣ್ ಕ್ಯಾಮರಾ ಕಣ್ಣಲ್ಲಿ ಸರೆಯಾಗಿದ್ದು, ಮನೆ, ಮಂದಿರ, ಮಸೀದಿ, ರೈತನ ಬೆಳೆ ಎಲ್ಲವೂ ಜಲಾವೃತಗೊಂಡಿದೆ. ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಲಕ್ಷಾಂತರ ಮಂದಿ ಆತಂಕದಲ್ಲೇ ದಿನದೂಡುತ್ತಿದ್ದಾರೆ.
ನಿನ್ನೆ ಮತ್ತೆ ಕೊಯ್ನಾ ಜಲಾಶಯದಿಂದ ೫೦ ಸಾವಿರ ಕ್ಯೂಸೆಕ್​ ನೀರು, ವಾರಣಾ ಜಲಾಶಯದಿಂದ 15 ಸಾವಿರ ಕ್ಯೂಸೆಕ್​ ನೀರನ್ನು ಹೊರಬಿಡಲಾಗಿದೆ. ಇಂದಿನಿಂದ ಹೆಚ್ಚುವರಿಯಾಗಿ 25 ಸಾವಿರ ಕ್ಯೂಸೆಕ್​ ನೀರನ್ನು ನದಿಗೆ ಬಿಡಲಾಗುತ್ತಿದೆ. ಪರಿಣಾಮ ಕೃಷ್ಣಾ ನದಿಗೆ ಒಳಹರಿವು ಹೆಚ್ಚಾಗುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಆತಂಕ ಮಡುಗಟ್ಟಿದೆ.
ಕಿಡ್ನ್ಯಾಪ್‌ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್​

ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ

ಮನೆಯೊಳಗೆ ಅಕ್ಕ-ತಂಗಿ ನಿಗೂಢ ಸಾವು! 5 ದಿನದ ಹಿಂದೆ ಆ ಮನೆಗೆ ಬಂದು ಹೋಗಿದ್ದ ಅಕ್ಕನ ಗಂಡ

Sign in to your account
Please enter an answer in digits:6 + five =
Remember me
