ಬೆಂಗಳೂರು:ಇಲ್ಲೊಬ್ಬ ನಕಲಿ ಸ್ವಾಮೀಜಿ, ದೋಷ ನಿವಾರಣೆ ಪೂಜೆ ನೆಪದಲ್ಲಿ ಮಾಡಬಾರದ್ದು ಮಾಡಿದ್ದಾನೆ. ಈತನ ಮಾತಿಗೆ ಮರುಳಾಗಿ ದೋಷ ನಿವಾರಿಸಿಕೊಳ್ಳಲೆಂದು ಹೋದ ಯುವತಿ ಐದಾರು ವರ್ಷಗಳಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್​ ಮೇಲ್​ ಮಾಡಿ ಹಣ ವಸೂಲಿ ಮಾಡಿದ್ದು ಮಾತ್ರವಲ್ಲ, ಇನ್ನೂ ಮುಂದುವರಿದು ಚಿತ್ರಹಿಂಸೆ ಕೊಟ್ಟು ಆಕೆಯ ಬಾಳಿಗೇ ಕಂಠವಾಗಿದ್ದಾನೆ. ನಕಲಿ ಸ್ವಾಮೀಜಿಯ ಈ ಹೇಯ ಕೃತ್ಯಕ್ಕೆ ಈತನ ಪತ್ನಿಯೂ ಸಾಥ್​ ಕೊಟ್ಟಿದ್ದು ದುರಂತ.
ಏನಿದು ಪ್ರಕರಣ?:ದೋಷ ನಾಶಕ್ಕೆ ವಿಶೇಷ ಪೂಜೆ ಮಾಡುವ ನೆಪದಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬ್ಲ್ಯಾಕ್​​ಮೇಲ್​ ಮಾಡಿದ ಆರೋಪದ ಮೇಲೆ ಆವಲಹಳ್ಳಿಯ ಇರಂಡನಹಳ್ಳಿಯ ನಕಲಿ ಸ್ವಾಮೀಜಿ ಆನಂದಮೂರ್ತಿ ಮತ್ತು ಆತನ ಪತ್ನಿ ಲತಾ ವಿರುದ್ಧ ಕೆ.ಆರ್​. ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಮೇಲೆ ಶೆಡ್​ ಮಾಡಿಕೊಂಡು ಮಾಟ-ಮಂತ್ರ ಮಾಡುವುದು ಮತ್ತು ದೋಷ ವಿನಾಶಕ್ಕೆ ಪೂಜೆ ಮಾಡುವುದಾಗಿ ಜನರನ್ನು ವಂಚಿಸುತ್ತಿದ್ದರು.
ಐದಾರು ವರ್ಷಗಳ ಹಿಂದೆ ಸಂಬಂಧಿಕರ ಮನೆಯ ವಿಶೇಷ ಪೂಜೆಯಲ್ಲಿ ಸಂತ್ರಸ್ತೆಯ ಪಾಲಕರಿಗೆ ಆನಂದಮೂರ್ತಿ ಪರಿಚಯವಾಗಿತ್ತು. ನಿಮ್ಮ ಮಗಳಿಗೆ ದೋಷವಿದೆ. ಕೆಲ ಪೂಜೆ ಮಾಡಿದರೆ ಸರಿ ಹೋಗುತ್ತದೆ. ಇಲ್ಲವಾದರೆ ಕುಟುಂಬಕ್ಕೆ ಕಂಠಕ ಎಂದು ಆನಂದಮೂರ್ತಿ ಹೇಳಿದ್ದ. ಇದನ್ನು ನಂಬಿದ ಯುವತಿ, ಆತನ ಮನೆಗೆ ಹೋಗಿದ್ದಳು. ಪೂಜೆ ನೆಪದಲ್ಲಿ ಪಾನೀಯದಲ್ಲಿ ಮತ್ತು ಬರುವ ಔಷಧ ಕುಡಿಸಿ ಪ್ರಜ್ಞೆ ತಪ್ಪಿಸಿದ್ದರು. ಸಂತ್ರಸ್ತೆ ಕಣ್ಣು ಬಿಟ್ಟಾಗ ಬೆಡ್​ ಮೇಲೆ ಅರೆಬೆತ್ತಲೆಯಾಗಿ ಇದ್ದಳು. ಆಕೆಯ ಮೇಲೆ ಆನಂದಮೂರ್ತಿ ದೌರ್ಜನ್ಯ ಎಸಗಿದ್ದ. ಇದಕ್ಕೆ ನಕಲಿ ಸ್ವಾಮೀಜಿಯ ಪತ್ನಿ ಲತಾ ಸಾಥ್​ ಕೊಟ್ಟು ಮೊಬೈಲ್​ನಲ್ಲಿ ಸೆರೆ ಹಿಡಿದುಕೊಂಡಿದ್ದಳು.
ಇದಾದ ಮೇಲೆ ಸಂತ್ರಸ್ತೆಗೆ ಬೆದರಿಕೆವೊಡ್ಡಿ, ಐದಾರು ವರ್ಷಗಳಿಂದ 2.50 ಲಕ್ಷ ರೂ.ಗಳನ್ನು ಹಂತ ಹಂತವಾಗಿ ವಸೂಲಿ ಮಾಡಿದ್ದರು. ಯಾರಿಗಾದರು ಹೇಳಿದರೆ ಪಾಲಕರು ಮತ್ತು ಅಣ್ಣನನ್ನು ಕೊಲೆ ಮಾಡಿ ನಿನ್ನ ಮರ್ಯಾದೆ ತೆಗೆಯುವುದಾಗಿ ಸಂತ್ರಸ್ತೆಯನ್ನು ಹೆದರಿಸಿದ್ದರು. ಇಷ್ಟಕ್ಕೆ ಸುಮ್ಮನಾಗದ ಆನಂದಮೂರ್ತಿ, ಗುರುಪೀಠಕ್ಕೆ ದೀಕ್ಷೆ ಕೊಡುವುದಾಗಿ ಪುಸಲಾಯಿಸಿ ದೌರ್ಜನ್ಯ ಎಸಗಿದ್ದ. ಇತ್ತೀಚೆಗೆ ಸಂತ್ರಸ್ತೆಗೆ ಪಾಲಕರು ಮದುವೆ ನಿಶ್ಚಯ ಮಾಡಿದ್ದರು. ಈ ವಿಷಯ ತಿಳಿದ ಆನಂದಮೂರ್ತಿ, ಮದುವೆ ಆಗಲಿದ್ದ ಹುಡುಗನ್ನು ಭೇಟಿ ಮಾಡಿ ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ತೋರಿಸಿ ಮದುವೆ ಮುರಿದುಬೀಳುವಂತೆ ಮಾಡಿದ್ದ.
ಪಾಲಕರು ವಿಚಾರಿಸಿದಾಗ ಐದಾರು ವರ್ಷಗಳಿಂದ ತನ್ನ ಮೇಲೆ ಆನಂದಮೂರ್ತಿ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಸಂತ್ರಸ್ತೆ ಬಾಯ್ಬಿಟ್ಟಿದ್ದಾಳೆ. ನೊಂದ ಪಾಲಕರು ದೂರು ನೀಡಿದ್ದಾರೆ. ದಂಪತಿ ತಲೆಮರೆಸಿಕೊಂಡಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು, ಆರೋಪಿ ದಂಪತಿಯ ಬಂಧನಕ್ಕೆ ಬಲೆಬೀಸಿದ್ದಾರೆ.
ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
