ಶಿವಮೊಗ್ಗ:ಬಿಟ್ಟಿಯಾಗಿ ಮದ್ಯ ಸಿಗುತ್ತದೆ ಎಂದು ಅಪರಿಚಿತರು ಕರೆದಾಕ್ಷಣ ಹೋದರೆ ಜೋಕೆ! ಮದ್ಯದ ಆಮಿಷವೊಡ್ಡಿ ಪುಸಲಾಯಿಸುವ ಗ್ಯಾಂಗ್​, ಕುಡಿಯಲು ಬಂದ ವ್ಯಕ್ತಿಗೇ ಗೊತ್ತಾಗದಂತೆ ಜೇಬಲ್ಲಿದ್ದ ಹಣ, ಮೈಮೇಲಿನ ಆಭರಣವನ್ನೇ ಎಗರಿಸಿಬಿಡ್ತಾರೆ…
ಹೌದು, ಇಂತಹದ್ದೇ ಒಂದು ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಬೆಳಗಿನ ಜಾವ ಟೀ ಕುಡಿದು ಸಿಗರೇಟ್ ಖರೀದಿ ಮಾಡಲು ತೆರೆಳಿದ್ದ ಪ್ರಿಯದರ್ಶಿನಿ ಲೇಔಟ್‌ನ ಯುವಕನನ್ನು ಪರಿಚಯ ಮಾಡಿಕೊಂಡ ಮೂವರು ಸಮೀಪದ ತೋಟಕ್ಕೆ ಹೋಗಿ ಮದ್ಯ ಸೇವಿಸಿ ಊಟ ಮಾಡುವುದಕ್ಕೆ ಒಪ್ಪಿಸಿದ್ದಾರೆ. ಬಳಿಕ ನಾಲ್ವರೂ ಪುರಲೆ ಸುಬ್ಯಯ್ಯ ಆಸ್ಪತ್ರೆ ಎದುರಿನ ತೋಟವೊಂದಕ್ಕೆ ಹೋಗಿ ಮದ್ಯ ಸೇವಿಸಿ ಅಲ್ಲಿಯೇ ಊಟವನ್ನೂ ಮಾಡಿದ್ದಾರೆ.
ಉಂಡು, ಕುಡಿದು ತೇಗುತ್ತಾ ಮನೆಗೆ ಬಂದ ಯುವಕನಿಗೆ ಬಳಿಕ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಈತನ ಕೊರಳಲ್ಲಿದ್ದ 93,500 ರೂ. ಮೌಲ್ಯದ 18 ಗ್ರಾಂ ಚಿನ್ನದ ಸರ ಮಾಯವಾಗಿತ್ತು. ಅಪರಿಚಿತರು ಮದ್ಯ ಕುಡಿಸಿ ಗಮನ ಬೇರೆಡೆ ಸೆಳೆದು ಬಂಗಾರದ ಸರವನ್ನು ಎಗರಿಸಿದ್ದಾರೆ. ಈ ಘಟನೆ ಮೇ 8ರಂದು ನಡೆದಿದೆ. ಆರೋಪಿಗಳಿಗಾಗಿ ಹುಡುಕಿ ಹುಡಕಿ ಸುಸ್ತಾದ ಯುವಕ ಇದದೀಗ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಆರತಕ್ಷತೆಗೂ 2 ದಿನ ಮೊದಲೇ ನವ ವಿವಾಹಿತೆ ಕಿಡ್ನ್ಯಾಪ್​! ಹುಬ್ಬಳ್ಳಿ ಕಾರ್ಪೋರೇಟರ್ ಸೇರಿ ಮೂವರ ವಿರುದ್ಧ ಕೇಸ್​​

ಸಿದ್ದುಗೆ ಸಿಕ್ತು ಸೇಫ್​ ಝೋನ್​… ಪದೇಪದೆ ಯತೀಂದ್ರ ಭೇಟಿ, ಸಿದ್ದುಗಾಗಿ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದ ಶಾಸಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
