ಚಿಕ್ಕಬಳ್ಳಾಪುರ:ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳಿಗೆ ಸ್ವಯಂ ಉದ್ಯೋಗ ಮತ್ತು ಹೆಚ್ಚುವರಿ ಆದಾಯದ ಹೆಸರಿನಲ್ಲಿ ಕಿಡಿಗೇಡಿಗಳು ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ.
ಶ್ವೇತಾ ಹಣ ಕಳೆದುಕೊಂಡವರು. 27 ವರ್ಷ ವಯಸ್ಸಿನ ಶ್ವೇತಾ ಚಿಕ್ಕಬಳ್ಳಾಪುರ ಡಿಸಿ ಕಚೇರಿಯಲ್ಲಿ ಕಂಪ್ಯೂಟರ್​ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಪರಿಚಿತರು ತನ್ನ ಮೊಬೈಲ್​ಗೆ ಕಳಿಸಿದ್ದ ಸ್ವಯಂ ಉದ್ಯೋಗ ಹಾಗೂ ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶ ಎಂಬ ಲಿಂಕ್​ನಲ್ಲಿ ಶ್ವೇತಾ ತನ್ನ ಹೆಸರು ನೋಂದಾಯಿಸಿಕೊಂಡಿದ್ದರು. ವಿವಿಧ ಹಂತಗಳ ಗಳಿಕೆ, ಲಾಭಾಂಶ ಎಂಬುದು ಸೇರಿ ನಾನಾ ಕಾರಣಗಳಿಗಾಗಿ ಅಪರಿಚಿತರು ಶ್ವೇತಾ ಅವರಿಂದ ಆನ್​ಲೈನ್​ನಲ್ಲಿ 3.71 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ.
ಕೆಲ ದಿನಗಳ ಬಳಿಕ ತಮಗೆ ಕಂಪನಿಯಿಂದ ಬಂದಿರಬಹುದಾದ ಆದಾಯ ಎಷ್ಟು ಎಂಬ ಮಾಹಿತಿಗಾಗಿ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಶ್ವೇತಾಗೆ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಡವರು ಮೇಕೆಯಂತೆ ಶ್ರೀಮಂತರು ಹಂದಿಯಂತೆ!

ಗಣಪತಿ ಕೆರೆಗೆ ಹಾರಿ ವೈದ್ಯೆ ಆತ್ಮಹತ್ಯೆ! ಸಾವಿನ ಮನೆಯ ಕದ ತಟ್ಟುವ ಕೊನೇ ಗಳಿಗೆಯೂ ಕರ್ತವ್ಯ ನಿರ್ವಹಿಸಿದ್ದರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 14 =
Remember me
