ರಾಮನಗರ:ಮನೆ ಬಾಗಿಲಿಗೆ ಗಿಫ್ಟ್​ ಕೂಪನ್​ ಬಂದಿದೆ. ಇನ್ನು ಗಿಫ್ಟ್​ ಕೊಡದೇ ಇರ್ತಾರಾ ಅಂತಾ ಅಪ್ಪಿತಪ್ಪಿ ಯಾಮಾರಿದ್ರೆ ನಿಮ್ಮ ಹಣಕ್ಕೆ ನಾಜೂಕಾಗಿಯೇ ಕತ್ತರಿ ಬೀಳುತ್ತೆ ಜೋಕೆ!
ಹೌದು, ಆನ್​ಲೈನ್​ ವಂಚನೆಯ ಹೊಸ ರೂಪ ಗಿಫ್ಟ್​ ಕೂಪನ್​! ಈ ಹೆಸರಲ್ಲಿ ವಂಚಿಸುವ ಜಾಲ ಸಕ್ರಿಯವಾಗಿದೆ. ಮನೆ ಬಾಗಿಲಿಗೆ ಬಂದ ಗಿಫ್ಟ್​ ಕವರ್​ ನೋಡಿ ಮೋಸ ಹೋಗಿ ಹಲವರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಇಂತಹದ್ದೇ ಪ್ರಕರಣ ರಾಮನಗರ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆನೇಕಲ್​ ಮುಖ್ಯರಸ್ತೆ ನಿವಾಸಿ, ವೃತ್ತಿಯಲ್ಲಿ ಚಾಲಕರಾಗಿರುವ ಶಿವಕುಮಾರ್​ ಆನ್​ಲೈನ್​ ವಂಚಕರ ಮೋಸಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಇವರ ಮನೆಗೆ ಸ್ಪೀಡ್​ಪೋಸ್ಟ್​ ಬಂದಿದ್ದು, ಇದರಲ್ಲಿ ಆನ್​ಲೈನ್​ ಶಾಪಿಂಗ್​ ಎಂದು ನಮೂದಿಸಿದ ಕೂಪನ್​ ಇರಿಸಲಾಗಿತ್ತು. ಕುತೂಹಲಗೊಂಡ ಶಿವಕುಮಾರ್​ ಪತ್ನಿ, ಕೂಪನ್​ನಲ್ಲಿದ್ದ ನಂಬರ್​ಗೆ ಕರೆ ಮಾಡಿದಾಗ ನಿಮಗೆ ಬಹುಮಾನವಾಗಿ ಕಾರು ಬಂದಿದೆ. ಕಾರು ಬೇಕಾ? ಅಥವಾ 14.80 ಲಕ್ಷ ರೂ. ಬೇಕಾ? ಎಂದು ಪ್ರಶ್ನಿಸಿದ್ದಾರೆ. ಖುಷಿಪಟ್ಟ ಶಿವಕುಮಾರ್​ ಕಾರು ಕೊಡಿ ಎಂದಿದ್ದಾರೆ.
ಕರೆ ಕಡಿತಗೊಳಿಸಿದ ವಂಚಕರು, ಮರುದಿನ ಕರೆ ಮಾಡಿ ಡಿಎಲ್​, ಆಧಾರ್​ ಕಾರ್ಡ್​ಗಳನ್ನು ಮತ್ತೊಂದು ನಂಬರ್​ಗೆ ವಾಟ್ಸ್​ಆ್ಯಪ್​ ಮೂಲಕ ತರಿಸಿಕೊಂಡಿದ್ದಾರೆ. ನಂತರ ಕಾರ್​ನ ಆರ್​ಟಿಒ ಶುಲ್ಕವೆಂದು 25600 ರೂ., ಟ್ರಾನ್ಸ್​ಪೋರ್ಟ್​ ಖರ್ಚು ಎಂದು 20 ಸಾವಿರ ರೂ., ಇತರ ಖರ್ಚು ಎಂದು 10 ಸಾವಿರ ರೂ., ನಂತರ ಡೀಸೆಲ್​ಗೆ 10 ಸಾವಿರ ರೂ.ಗಳನ್ನು ಕೇಳಿ ಎಲ್ಲವನ್ನೂ ಫೋನ್​ಪೇ ಮೂಲಕವಾಗಿ ಖಾತೆಗೆ ಹಾಕಿಸಿಕೊಂಡಿದ್ದಾರೆ. ಕೆಲ ದಿನ ಕಳೆದರೂ ಮನೆ ಬಾಗಿಲಿಗೆ ಕಾರು ಬರದಿದ್ದಾಗ ಅನುಮಾನಗೊಂಡು ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಪ್ರತಿದಿನ ರಾತ್ರಿ ತಡವಾಗಿ ಮನೆಗೆ ಬರ್ತಿದ್ದ ಗಂಡ… ಇದೇ ವಿಚಾರಕ್ಕೆ ನಡೀತು ಘೋರ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 13 =
Remember me
