ಮೇಲುಕೋಟೆ: ಬೆಂಗಳೂರಿನಿಂದ ಮೇಲುಕೋಟೆಗೆ, ಮತ್ತೆ ಚೆಲುವನಾರಾಯಣಸ್ವಾಮಿ ಸನ್ನಿಧಿಯಿಂದ ರಾಜಧಾನಿ ಬೆಂಗಳೂರಿಗೆ ಪ್ರತಿದಿನ ಎರಡು ಬಸ್​ಗಳು ಉಚಿತವಾಗಿ ಸಂಚರಿಸಲಿವೆ.ಮೇಲುಕೋಟೆ ಶಾಸಕ ಸಿ.ಎಸ್​.ಪುಟ್ಟರಾಜು ಅವರ ಸಲಹೆ ಮೇರೆಗೆ ಬೆಂಗಳೂರಿನ ಅರಮನೆ ಸೇವಾ ಪ್ರತಿಷ್ಠಾನ ಮತ್ತು ರಾಜು ಎಂಟರ್​ ಪ್ರೈಸಸ್​ನಿಂದ ಅರಮನೆ ಶಂಕರ್​ ಭಕ್ತರಿಗೆ ಕಲ್ಪಿಸಿರುವ ಉಚಿತ ಬಸ್​ ಸೌಲಭ್ಯವನ್ನು ಭಾನುವಾರ ಆರಂಭಿಸಲಾಗಿದೆ.
ಬೆಂಗಳೂರಿನ ಶ್ರೀನಗರದಿಂದ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಹೊರಡುವ ಒಂದು ಬಸ್​ ಬೆಳ್ಳೂರು ಕ್ರಾಸ್​, ನಾಗಮಂಗಲ ಮಾರ್ಗವಾಗಿ ಮೇಲುಕೋಟೆಗೆ ಪೂರ್ವಾಹ್ನ 11 ಗಂಟೆಗೆ ತಲುಪಲಿದೆ. ಭಕ್ತರು ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದರ್ಶನ ಪಡೆದು ಬಸ್​ಗೆ ಮರಳಲು 3 ಗಂಟೆಗಳ ಕಾಲ ಅವಕಾಶ ನೀಡಲಾಗಿದ್ದು, ಮೇಲುಕೋಟೆಯಿಂದ ಮಧ್ಯಾಹ್ನ 3ಕ್ಕೆ ಹೊರಡುವ ಬಸ್​ ಅದೇ ಮಾರ್ಗದಲ್ಲಿ ಸಂಚರಿಸಿ ರಾತ್ರಿ 7ಕ್ಕೆ ಶ್ರೀನಗರ ತಲುಪಲಿದೆ.
ಮತ್ತೊಂದು ಬಸ್​ ರಾಮನಗರ, ಮಂಡ್ಯ, ಶಿವಳ್ಳಿ, ಜಕ್ಕನಹಳ್ಳಿ ಮಾರ್ಗವಾಗಿ ಪೂರ್ವಾಹ್ನ 11.30ಕ್ಕೆ ಮೇಲುಕೋಟೆ ತಲುಪಲಿದೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ಇದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಡಲಿದೆ. ಇದೇ ಮಾದರಿಯಲ್ಲಿ ಬೆಂಗಳೂರಿನಿಂದ ನಾಗಮಂಗಲ ಹಾಗೂ ನಾಗಮಂಗಲದಿಂದ ಬೆಂಗಳೂರಿಗೆ ಉಚಿತ ಬಸ್​ ಸೌಕರ್ಯ ಕಲ್ಪಿಸಲಾಗಿದೆ.

ಮೇಲುಕೋಟೆ ಶಾಸಕ ಸಿ.ಎಸ್​.ಪುಟ್ಟರಾಜು ಅವರ ಸಲಹೆಯಂತೆ ಮೇಲುಕೋಟೆಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ಉಚಿತ ಬಸ್​ ಸೇವೆ ಆರಂಭಿಸಿದ್ದೇನೆ. ಭಕ್ತರಿಗೆ ಉಪಯೋಗವಾದರೆ ನನ್ನ ಸೇವೆ ಸಾರ್ಥಕವಾಗುತ್ತದೆ ಎಂದು ಅರಮನೆ ಶಂಕರ್​ ಹೇಳಿದ್ದಾರೆ.
ಬೆಂಗಳೂರಿನ ಶ್ರೀನಗರದಲ್ಲಿ ಬಸ್​ ಆರಂಭಿಸಿದ ಸರಳ ಕಾರ್ಯಕ್ರಮದಲ್ಲಿ ಉದ್ಯಮಿ ರಾಜು ಎಂಟರ್​ ಪ್ರೈಸಸ್​ ಮಾಲೀಕ ರಾಜು, ಮಾತೃಶ್ರೀ, ಬೆಂಗಳೂರು ಸಿಟಿ ಇನ್ಸ್​ಟಿಟ್ಯೂಟ್​ ಉಪಾಧ್ಯಕ್ಷ ಚಂದ್ರಶೇಖರ್​ ಮತ್ತಿತರರು ಇದ್ದರು.
ಮದ್ವೆ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ನುಗ್ಗಿದ ಮಳೆ ನೀರು! ಚಾಮರಾಜನಗರದಲ್ಲಿ ಕೆಲ ಗ್ರಾಮಗಳು ಜಲಾವೃತ

ಕಾರಿನ ಮೇಲೆ ಆಲದ ಮರ ಬಿದ್ದು ಓರ್ವ ಸಾವು: ಅರ್ಕಾವತಿ ನದಿ ನೀರಲ್ಲಿ ಕೊಚ್ಚಿಹೋದ ಹಸು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − 19 =
Remember me
