ಬೆಳಗಾವಿ:ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹುಲ್ಯಾನೂರ ಗ್ರಾಮದಲ್ಲಿ ನಡೆದಿದೆ.
ಅಭಿಷೇಕ್ ಬುಡ್ರಿ(19) ಕೊಲೆಯಾದ ಯುವಕ. ಹುಲ್ಲೆಪ್ಪಾ ಕರೀಕಟ್ಟಿ ಕೊಲೆ ಮಾಡಿದ ಆರೋಪಿ. ಮಹಿಳೆ ಮೇಲೆ ಕಣ್ಣು ಹಾಕಿ ಅದೇ ಗ್ರಾಮದ ಸ್ನೇಹಿತ ಹುಲ್ಲೆಪ್ಪಾ ಕರೀಕಟ್ಟಿಯಿಂದ ಅಭಿಷೇಕ್ ಬುಡ್ರಿ ಹತ್ಯೆಯಾಗಿದ್ದಾನೆ.
ಇದನ್ನೂ ಓದಿ:ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ (ಪಿಎಂಕೆಎಸ್ಕೆ): ಭಾರತೀಯ ಕೃಷಿಯ ಸಬಲೀಕರಣದತ್ತ
ನಡೆದಿದ್ದೇನು?:ಅತ್ತಿಗೆ ಮೇಲೆ ಕಣ್ಣು ಹಾಕಿದ್ದಕ್ಕೆ ಗೆಳೆಯನನ್ನು ಕೊಲೆ ಮಾಡಲು ಹುಲ್ಲೆಪ್ಪಾ ಮಾಸ್ಟರ್​ ಪ್ಲ್ಯಾನ್​​ ಮಾಡಿದ್ದಾನೆ. ಆ.9ರಂದು ರಾತ್ರಿ ಬರ್ತಡೇ ಪಾರ್ಟಿ ಇದೆ ಅಂತಾ ಅಭಿಷೇಕ್ ಬುಡ್ರಿಯನ್ನು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಕೊಲೆಗೆ ಸ್ಕೇಚ್​ ಹಾಕಿದ್ದಾನೆ.
ಇದನ್ನೂ ಓದಿ:ಸ್ನೇಹಕ್ಕಾಗಿ ಪ್ರಾಣ ಕೊಡುತ್ತೇನೆಂದು ತನ್ನ ಕಾಲನ್ನೇ ಕತ್ತರಿಸಿಕೊಂಡು ಪ್ರಾಣ ಬಿಟ್ಟ ಗೆಳೆಯ
ಅಭಿಷೇಕ್ ಬುಡ್ರಿಗೆ ಚಾಕುವಿನಿಂದ ಇರಿದು ಹುಲ್ಲೆಪ್ಪಾ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಬುಡ್ರಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:ಕಾಲುಗಳ ಫೋಟೋ ಮಾರಾಟ ಮಾಡಿ ಕೋಟಿ…ಕೋಟಿ ಹಣ ಗಳಿಸಿದ 32 ವರ್ಷದ ಮಹಿಳೆ
ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಹುಲ್ಲೆಪ್ಪಾನನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ನನ್ನ ಜೀವಮಾನದ ಕನಸು ನನಸಾಯಿತು…‘ನಾನಿನ್ನು ನಾಯಿಯಂತೆ ಬದುಕಲಾರೆ’; ನಾಯಿವೇಷಕ್ಕಾಗಿ ಈತ ವ್ಯಯಿಸಿದ್ದು ಬರೋಬ್ಬರಿ 12 ಲಕ್ಷ ರೂ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + four =
Remember me
