ಬೆಂಗಳೂರು:ರಾಜ್ಯ ರಾಜಧಾನಿ ನಿವಾಸಿಗಳೇ ಎಚ್ಚರ! ನಿಮ್ಮ ಮನೆಯಲ್ಲಿ ಯಾರಾದ್ರೂ ಮೃತಪಟ್ಟಾಗ ಬಿಬಿಎಂಪಿ ವ್ಯಾಪ್ತಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ‘ಲಾಸ್ಟ್​ ಜರ್ನಿ’ ವೆಬ್​ಸೈಟ್​ನ ಮೊರೆ ಹೋಗುವ ಮುನ್ನ ಜಾಗ್ರತೆ. ಯಾಕಂದ್ರೆ ವಂಚಕರು ಬಿಬಿಎಂಪಿ ಚಿತಾಗಾರದ ಹೆಸರಿನಲ್ಲಿ ವೆಬ್​ಸೈಟ್​ ತೆರೆದು ಶವ ಸಂಸ್ಕಾರದ ನೆಪದಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ರಾಜರಾಜೇಶ್ವರಿನಗರ ವಲಯ ಎಇಇ ಗವಿಸಿದ್ದಯ್ಯ ಅವರು ದಕ್ಷಿಣ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಾಲಿಕೆ ವ್ಯಾಪ್ತಿಯ ವಿದ್ಯುತ್​ ಚಿತಾಗಾರಗಳನ್ನು ಸಾರ್ವಜನಿಕರ ಉಪಯೋಗಕ್ಕೆ ಕೊಡಲಾಗಿದೆ. ಕೋವಿಡ್​ ಸೋಂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮೃತದೇಹಗಳು ಬರುತ್ತಿದ್ದ ಕಾರಣ ಸರತಿ ಸಾಲಿನಲ್ಲಿ ನಿಂತು ಕಾಯುವುದನ್ನು ತಪ್ಪಿಸಲು ಮತ್ತು ಸಮಯ ಉಳಿತಾಯಕ್ಕಾಗಿ ಪಾಲಿಕೆಯಿಂದ ಆನ್​ಲೈನ್​ನಲ್ಲಿ ಉಚಿತವಾಗಿ ಬುಕ್ಕಿಂಗ್​ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪ್ರತಿ ಶವ ದಹನ ಕ್ರಿಯೆಗೆ ಸ್ವಚ್ಛತೆ ಹಾಗೂ ಇನ್ನಿತರ ಸೇವೆಗೆಂದು ಪಾಲಿಕೆಯು 250 ರೂ. ಶುಲ್ಕ ಪಡೆದು ರಸೀದಿ ನೀಡುತ್ತದೆ. ಆದರೆ, ವಂಚಕರು ಅನಧಿಕೃತವಾಗಿ ‘ಲಾಸ್ಟ್​ ಜರ್ನಿ’ ಎಂಬ ವೆಬ್​ಸೈಟ್​ ತೆರೆದು ವಿದ್ಯುತ್​ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬುಕ್ಕಿಂಗ್​ ಮಾಡಿಕೊಡುವುದಾಗಿ ಹೇಳಿ 3,500 ರೂ. ವಸೂಲಿ ಮಾಡಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ.
ಸುಮ್ಮನಹಳ್ಳಿ, ಪೀಣ್ಯ, ಪ್ರಾಣಿಗಳ ವಿದ್ಯುತ್​ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಬಂದವರು ಪಾಲಿಕೆ ಶುಲ್ಕ 250 ರೂ. ಕೊಡಲು ನಿರಾಕರಿಸುತ್ತಿದ್ದಾರೆ. ಪ್ರಶ್ನಿಸಿದರೆ, ಈ ಮೊದಲೇ 3,500 ರೂ. ಪಾವತಿ ಮಾಡಿದ್ದೇವೆ. ಬಿಬಿಎಂಪಿ ಅಧಿಕಾರಿಗಳು ಸುಲಿಗೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಪಾಲಿಕೆ ಅಧಿಕಾರಿ ಉಲ್ಲೇಖಿಸಿದ್ದಾರೆ. ಇದರ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕನ್ ಶವರ್ಮ ಸೇವಿಸಿದ್ದ ಓರ್ವ ವಿದ್ಯಾರ್ಥಿನಿ ಸಾವು, 14 ಮಂದಿ ಅಸ್ವಸ್ಥ

ರಾಮನಗರದಲ್ಲಿ ಪೊಲೀಸ್​ ಮುಖ್ಯಪೇದೆ ಸಾವು: ಮದ್ವೆ ವಾರ್ಷಿಕೋತ್ಸವದ ಮುನ್ನಾದಿನವೇ ದುರಂತ

ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eight =
Remember me
