ಬೆಂಗಳೂರು:ಎಲ್ಲಿ ನೋಡಿದಲ್ಲಿ ಗ್ರಾಹಕರು, ಅವರಿಗೆ ಆಸ್ಥೆಯಿಂದ ಮಾಹಿತಿ ನೀಡುತ್ತಿದ್ದ ಮಳಿಗೆಗಳ ಸಿಬ್ಬಂದಿ, ವಿಭಿನ್ನ ಬಗೆಯ ವಸ್ತುಗಳನ್ನು ಕಂಡು ಖುಷಿಪಡುವುದು ಮಾತ್ರವಲ್ಲದೆ ಅವುಗಳನ್ನು ಬಳಸಿ ಪರೀಕ್ಷಿಸಿ ಪ್ರಮಾಣಿಸುತ್ತಿದ್ದ ಬಗೆ, ಪಾಲಕರ ಜತೆ ಬಂದಿದ್ದ ಮಕ್ಕಳ ಕಲರವ… ಅರಮನೆ ಮೈದಾನದ ಗಾಯತ್ರಿ ವಿಹಾರ್​ನಲ್ಲಿ ಏರ್ಪಡಿಸಿರುವ ‘ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ’ದಲ್ಲಿನ 3ನೇ ದಿನವಾದ ಭಾನುವಾರದ ಹೈಲೈಟ್​ಗಳಿವು. ಕೋವಿಡ್​ಗೂ ಮುಂಚೆ ರಾಜಧಾನಿಯಲ್ಲಿ ನಡೆಯುತ್ತಿದ್ದ ಬೃಹತ್​ ಶಾಪಿಂಗ್​ ಉತ್ಸವ, ತರಹೇವಾರಿ ಮೇಳ, ಸ್ಟಾರ್​ ನಟರು ಭಾಗವಹಿಸುತ್ತಿದ್ದ ಮನರಂಜನಾ ಸಮಾರಂಭಗಳಿಗೆ ಸಾಕ್ಷಿಯಾಗುತ್ತಿದ್ದ ಜನದಟ್ಟಣೆ ಇಲ್ಲಿಯೂ ಗೋಚರಿಸಿದ್ದು ವಿಶೇಷ.
ವಿಜಯವಾಣಿಮತ್ತುದಿಗ್ವಿಜಯ ನ್ಯೂಸ್​ಮಾಧ್ಯಮ ಸಹಯೋಗ ಹಾಗೂ ಯುನಿಲೆಟ್​ ಸಹಭಾಗಿತ್ವದಲ್ಲಿ ಈ ಮೇಳ ನಡೆಯುತ್ತಿದ್ದು, ಗ್ರಾಹಕರು ಕುಟುಂಬಸಮೇತ ಆಗಮಿಸುತ್ತಿದ್ದಾರೆ. ಐದಾರು ವರ್ಷಗಳಿಂದ ಮೇಕ್​ ಇನ್​ ಇಂಡಿಯಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತಿದ್ದ ದುಬಾರಿ ಮತ್ತು ಶ್ರೀಮಂತ ವಿನ್ಯಾಸದ ಪೀಠೋಪಕರಣಗಳು, ಉಪಕರಣಗಳು, ಒಳಾಂಗಣ ವಿನ್ಯಾಸದ ಪರಿಕರಗಳನ್ನು ನಮ್ಮ ದೇಶ ಮತ್ತು ರಾಜ್ಯದಲ್ಲಿ ಉತ್ಪಾದನೆ ಮಾಡುವ ಉದ್ಯಮಗಳು ಆರಂಭವಾಗಿವೆ. ಈಗ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಫರ್ನೀಚರ್​ ಮೇಳದಲ್ಲಿಯೂ ದೇಸಿ ಉದ್ಯಮಗಳ ತಾಕತ್ತನ್ನು ಕಣ್ತುಂಬಿಕೊಳ್ಳಬಹುದು. ಸಾಮಾನ್ಯ, ಮಧ್ಯಮ ವರ್ಗದ ಕುಟುಂಬದಿಂದ ಐಷಾರಾಮಿ ಮನೆಗಳಿಗೆ ಹೊಂದಾಣಿಕೆ ಆಗುವ ಮಾದರಿಯಲ್ಲಿ ಸೂಕ್ಷ್ಮ ತಂತ್ರಜ್ಞಾನಗಳನ್ನು ಬಳಸಿ ಉತ್ಪಾದಿಸಿರುವ ಪೀಠೋಪಕರಣಗಳು ಮುಂದುವರಿದ ದೇಶಗಳ ತಂತ್ರಜ್ಞಾನವನ್ನು ಮೀರಿಸುವ ಶೈಲಿಗಳನ್ನು ಹೊಂದಿವೆ.
ಬಹುಪಯೋಗಿ ಸೋಫಾ:ಮನೆಗಳು ಎಷ್ಟೇ ದೊಡ್ಡದಾಗಿದ್ದರೂ ಅಗತ್ಯ ವಸ್ತುಗಳನ್ನು ತಂದು ಮನೆಯಲ್ಲಿರಿಸುತ್ತ ಹೋದಲ್ಲಿ ಬರೀ ವಸ್ತುಗಳೇ ತುಂಬಿಕೊಂಡು ವಾಸಕ್ಕೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಆದರೆ, ಪ್ರಸ್ತುತ ಫರ್ನೀಚರ್​ ಮೇಳದಲ್ಲಿ ಬಹುಪಯೋಗಿ ಸೋಫಾಗಳು ಲಗ್ಗೆಯಿಟ್ಟಿವೆ. ಸಾಮಾನ್ಯವಾಗಿ ಸೋಫಾಗಳೆಂದರೆ ಕುಳಿತುಕೊಳ್ಳಲು ಮಾತ್ರ ಎಂದು ತಿಳಿದುಕೊಳ್ಳುತ್ತೇವೆ. ಇಲ್ಲಿನ ಕೆಲ ಸೋಫಾಗಳಲ್ಲಿ ಕುಳಿತುಕೊಳ್ಳಬಹುದು, ಮಲಗಲು ಬಳಸಬಹುದು, ಬಹುಪಯೋಗಿ ರೀತಿಯಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ಬಾಗುವ ಕುರ್ಚಿಯಂತೆಯೂ ಪರಿವರ್ತಿಸಬಹುದು. ಸಿಂಗಲ್​ ಚೇರ್​ ಸೋಫಾಗಳಲ್ಲಿ ಕೂಡ ಕಾಲು ಚಾಚಿಕೊಂಡು ಕೂರಲು ಮತ್ತು ಹಿಂದಕ್ಕೆ ಮುಂದಕ್ಕೆ ಬಾಗಿಸಲು ಅನುಕೂಲ ಆಗುವಂತೆ ನಿರ್ಮಿಸಲಾಗಿದೆ. ಇದರಲ್ಲಿ ಬಾಕ್ಸ್​ ಮಾದರಿ ಇದ್ದು, ಬೆಡ್​ಶೀಟ್​ಗಳನ್ನು ಅದರಲ್ಲಿ ಇರಿಸಬಹುದು.
ಬಾಟಲಿ, ಟೀ-ಕಾಫಿ ಕಪ್​ ಹೋಲ್ಡರ್​:ಮನೆಯಲ್ಲಿ ಅತಿಥಿಗಳು ಬಂದಾಗ ಅಥವಾ ಕುಟುಂಬದ ಸದಸ್ಯರೊಂದಿಗೆ ಸೋಫಾದಲ್ಲಿ ಕುಳಿತುಕೊಂಡಾಗ ಟೀ, ಕಾಫಿ, ಜ್ಯೂಸ್​ ಅಥವಾ ನೀರಿನ ಬಾಟಲಿಗಳನ್ನು ತಂದುಕೊಟ್ಟಲ್ಲಿ ಅವುಗಳನ್ನು ನಾವು ಕುಳಿತಿರುವ ಸೋಫಾದಲ್ಲಿ ಇಡದೇ ಮುಂದಿನ ಮೇಜಿನ ಮೇಲೆ ಇಡುತ್ತೇವೆ. ಆದರೆ, ಇಲ್ಲಿ ಲಭ್ಯವಿರುವ ಸೋಫಾಗಳಲ್ಲಿ ಟೀ, ಕಾಫಿ, ಜ್ಯೂಸ್​ ಮತ್ತು ನೀರು ಸೇರಿ ಇತರೆ ಯಾವುದೇ ಬಾಟಲಿಗಳನ್ನು ಇಡಲು ಹೋಲ್ಡರ್​ ಅಳವಡಿಕೆ ಮಾಡಲಾಗಿದೆ. ಇನ್ನು ಕೆಲವು ಮಾದರಿಯ ಸೋಫಾಗಳಲ್ಲಿ ಕಟ್ಟಿಗೆಯಿಂದ ತಯಾರಿಸಲಾದ ಸುಮಾರು ಅರ್ಧ ಅಡಿ ಅಗಲದ ಬಣ್ಣದ ಕಟ್ಟಿಗೆ ಪಟ್ಟಿ ಅಳವಡಿಸಲಾಗಿದೆ. ಇದರ ಮೇಲೆ ಬಿಸಿಯಾದ ಟೀ, ಕಾಫಿ ಅಥವಾ ಇತರೆ ವಸ್ತುಗಳು ಸೇರಿ, ತಿಂಡಿ ಅಥವಾ ಸ್ನ್ಯಾಕ್ಸ್​ ಪ್ಲೇಟ್​ಗಳನ್ನು ಇಟ್ಟುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಫಳಫಳಿಸಲಿವೆ ಪಾತ್ರೆಗಳು:ಮನೆ ಕೆಲಸಗಳಲ್ಲಿ ಬಟ್ಟೆ ತೊಳೆಯಲು ವಾಷಿಂಗ್​ ಮಷಿನ್​, ಹಿಟ್ಟು ರುಬ್ಬಲು ಮಿಕ್ಸರ್​, ಗಾಳಿ ಬೀಸಲು ಫ್ಯಾನ್​, ಅಡುಗೆ ಬಿಸಿ ಮಾಡಲು ಓವನ್​ ಸೇರಿ ಅನೇಕ ವಸ್ತುಗಳು ಬಂದಿವೆ. ಈಗ ಪಾತ್ರೆ ತೊಳೆಯಲು ಡಿಶ್​ವಾಶರ್​ ಮಿಷನ್​ ತಯಾರಿಸಲಾಗಿದೆ. ಸುಮಾರು 13 ಜನರ ಊಟ ಮಾಡಿದ ಪಾತ್ರೆಗಳನ್ನು ತೊಳೆಯಲಿದ್ದು, ಎಕ್ಸ್​ಪೋದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮನೆಯಲ್ಲಿನ ಕೊಳಾಯಿ (ನಲ್ಲಿ)ಯಿಂದ ನೀರಿನ ಸಂಪರ್ಕ ಕೊಟ್ಟು, ವಿದ್ಯುತ್​ ಸ್ವಿಚ್​ ಆನ್​ ಮಾಡಿದರೆ ಡಿಶ್​ ವಾಷರ್​ ಮಷಿನ್​ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತದೆ. ತಟ್ಟೆ, ಲೋಟ, ಬಟ್ಟಲು, ಚಮಚ, 5 ಲೀ. ಸಾಮರ್ಥ್ಯದ ಕಡಾಯಿ, ಸ್ಟೀಲ್​ ಕುಕ್ಕರ್​ ಸ್ವಚ್ಛಗೊಳಿಸಲಿದೆ. ಎಲ್ಲ ಪಾತ್ರೆಗಳು ಬಿಸಿನೀರಿನಿಂದ ಸ್ವಚ್ಛಗೊಂಡು, ಬಿಸಿ ಹಬೆಯಿಂದ ಒಣಗಿ ಫಳಫಳಿಸಲಿವೆ.

ವಿಜಯವಾಣಿ,ದಿಗ್ವಿಜಯ ನ್ಯೂಸ್​ಕಾರ್ಯಕ್ಕೆ ಮೆಚ್ಚುಗೆ:ಈಗಾಗಲೇ ಮೂರು ದಿನಗಳಲ್ಲಿ ಪೂರೈಸಿದ ಫರ್ನೀಚರ್​ ಎಕ್ಸ್​ಪೋದಲ್ಲಿ ಕಣ್ಮನ ಸೆಳೆಯುವ ಪೀಠೋಪಕರಣಗಳು, ಒಳಾಂಗಣ ವಿನ್ಯಾಸ ಪರಿಕರ, ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್​ ವಸ್ತುಗಳನ್ನು ಒಂದೇ ಸೂರಿನಡಿ ಒದಗಿಸಿದ್ದಕ್ಕೆ ಸಾವಿರಾರು ಗ್ರಾಹಕರು ವಿಜಯವಾಣಿ, ದಿಗ್ವಿಜಯ ನ್ಯೂಸ್​ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆವರೆಗೆ ಎಕ್ಸ್​ಪೋಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ. ಗ್ರಾಹಕರಿಗೆ ಉಚಿತ ಪ್ರವೇಶ ಮತ್ತು ಉಚಿತ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಮಳಿಗೆಗಳಲ್ಲಿ ಪೀಠೋಪಕರಣಗಳನ್ನು ಶೇ.50 ರಿಂದ ಶೇ.70 ರಿಯಾಯಿತಿ ದರದಲ್ಲಿ ಉಪಕರಣ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು 1 ಸಾವಿರ ರೂ. ವಸ್ತುಗಳಿಂದ 5 ಲಕ್ಷ ರೂ.ವರೆಗಿನ ಅಗತ್ಯ ವಸ್ತುಗಳನ್ನು ಖರೀದಿಸಬಹುದು.

ಎಕ್ಸ್​ಪೋದಲ್ಲಿ ಏನೇನಿವೆ?ಒಂದೇ ಸೂರಿನಡಿ ವಿವಿಧ ಮಾದರಿಯ ಐಷಾರಾಮಿ ಸೋಫಾ, ಡೈನಿಂಗ್​ ಟೇಬಲ್​ ಸೆಟ್​, ಇಟಾಲಿಯನ್​ ವಿನ್ಯಾಸದ ಸೋಫಾ, ಕಚೇರಿ ಪೀಠೋಪಕರಣ, ಕಾರ್ಪೆಟ್​, ಬೆಡ್​ರೂಮ್​ ಸೆಟ್​, ಮರದ ಮಂಚ, ಮೇಜು, ಕುರ್ಚಿ, ಉಯ್ಯಾಲೆ, ವಾಲ್​ಫ್ರೇಮ್​, ಬಾಗಿಲು ಮತ್ತು ಕಿಟಕಿ ಪರದೆ, ಟೀಕ್​ವುಡ್​ ಪೀಠೋಪಕರಣ, ಶ್ವೇತವರ್ಣದ ಮಾರ್ಬಲ್​ ಕಲ್ಲಿನಿಂದ ಕೆತ್ತನೆ ಮಾಡಿದ ತುಳಸಿ ಕಟ್ಟೆ, ಆನೆ, ಸಿಂಹ, ಹಸುಗಳು, ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನಿಡಲು ಲಾಕರ್​ಗಳು ಲಭ್ಯವಿವೆ. ಜತೆಗೆ, ಯುನಿಲೆಟ್​ ಕಂಪನಿಯು ಎಲೆಕ್ಟ್ರಾನಿಕ್​ ವಸ್ತುಗಳಾದ ಟಿ.ವಿ., ರೆಫ್ರಿಜಿರೇಟರ್​, ಮಿಕ್ಸರ್​, ವಾಷಿಂಗ್​ ಮಷಿನ್​, ಮೊಬೈಲ್​ಗಳನ್ನು ಮಾರಾಟಕ್ಕಿಟ್ಟಿದೆ. ಜತೆಗೆ, ಕೃತಕ ಹೂಗಳು, ಅಲಂಕಾರಿಕ ವಸ್ತುಗಳು, ತಿನಿಸುಗಳು, ಮಕ್ಕಳ ಆಟಿಕೆ, ಅಡುಗೆ ಮಾಡಲು ಸಹಕಾರಿ ಆಗುವ ವಸ್ತುಗಳು, ಮಹಿಳೆಯರ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯವಿವೆ.

ಕೂಡು ಕುಟುಂಬದ ಸೋಫಾ:ಸೋಫಾ ಎಂದಾಕ್ಷಣ ಕೇವಲ 3 ಜನರು ಮತ್ತು ಎರಡು ಚೇರುಗಳು ಸೇರಿ 5 ಜನರು ಕುಳಿತುಕೊಳ್ಳಲು ಆಸನವಿರುತ್ತದೆ. ಆದರೆ, ಫರ್ನೀಚರ್​ ಮೇಳದಲ್ಲಿ 4- 10 ಜನರು ಕುಳಿತುಕೊಳ್ಳುವ ಮಾದರಿಯಲ್ಲಿ ಸೋಫಾ ಸಿದ್ಧಪಡಿಸಲಾಗಿದೆ. ಕಟ್ಟಿಗೆ, ರಗ್ಜಿನ್​, ಲೆದರ್​ ಮತ್ತು ಇತರೆ ವಸ್ತುಗಳನ್ನು ಬಳಸಿ ಈ ಸೋಫಾಗಳನ್ನು ತಯಾರಿಸಿದ್ದು, ಮನೆಗಳ ವಿನ್ಯಾಸ, ಬಣ್ಣ ಹಾಗೂ ಆವರಣಕ್ಕೆ ಒಪ್ಪುವ ವಿನ್ಯಾಸದಲ್ಲಿ ಡಿಸೈನ್​ ಮಾಡಲಾಗಿದೆ. ಸುಮಾರು 10 ಜನರು ಕೂರುವ ಸೋಫಾವನ್ನು ‘ಕೂಡು ಕುಟುಂಬ ಸೋಫಾ’ ಎಂದು ಕರೆಯಲಾಗುತ್ತಿದೆ. ಅಜ್ಜಿ-ತಾತ, ಅಪ್ಪ-ಅಮ್ಮ ಮತ್ತು ಮೊಮ್ಮಕ್ಕಳು ಸೇರಿ ಎಲ್ಲರೂ ಕುಳಿತುಕೊಳ್ಳಲು ಅವಕಾಶ ಇರುವ ಈ ಸೋಫಾಗಳಿಗೆ ಹೆಚ್ಚಿನ ಜನರು ಮನಸೋತಿದ್ದಾರೆ ಎಂದು ಯುನೀಕ್​ ಹೋಮ್​ ಫರ್ನೀಚರ್ಸ್​ನ ಮ್ಯಾನೇಜರ್​ ನೀಲ್​ ಮತ್ತು ಆ್ಯಪಲ್​ ಫರ್ನೀಚರ್ಸ್​ನ ಸಿಬ್ಬಂದಿ ರಾಜ್​ ಮಾಹಿತಿ ನೀಡಿದರು.

ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ

4 ದಿನ ಸ್ನೇಹಿತನ ಶವ ಬಚ್ಚಿಟ್ಟು ನಾಟಕವಾಡಿದ್ದ! ​ಮಿಸ್ಸಿಂಗ್​ ಕೇಸ್​ ದಾಖಲಾಗ್ತಿದ್ದಂತೆ ನಡೆಯಬಾರದ್ದು ನಡೆದೇ ಹೋಯ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 5 =
Remember me
