ಬೆಂಗಳೂರು:ಎತ್ತ ನೋಡಿದರೂ ಗ್ರಾಹಕರು, ಅವರಿಗೆ ಆಸ್ಥೆಯಿಂದ ಮಾಹಿತಿ ನೀಡುತ್ತಿದ್ದ ಮಳಿಗೆಗಳ ಸಿಬ್ಬಂದಿ, ವಿಭಿನ್ನ ಬಗೆಯ ವಸ್ತುಗಳನ್ನು ಕಂಡು ಖುಷಿ ಪಡುವುದು ಮಾತ್ರವಲ್ಲದೆ ಅವುಗಳನ್ನು ಬಳಸಿ ಪರೀಕ್ಷಿಸಿ ಪ್ರಮಾಣಿಸುತ್ತಿದ್ದ ಬಗೆ, ಪಾಲಕರ ಜತೆ ಬಂದಿದ್ದ ಮಕ್ಕಳ ಕಲರವ… ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ಏರ್ಪಡಿಸಿರುವ ‘ಪೀಠೋಪಕರಣ ಮತ್ತು ಮನೆ ಒಳಾಂಗಣ ವಿನ್ಯಾಸ ಮೇಳ-2022’ಕ್ಕೆ ಎರಡನೇ ದಿನವಾದ ಶನಿವಾರದ ಹೈಲೈಟ್‌ಗಳಿವು.
ವಿಜಯವಾಣಿಮತ್ತುದಿಗ್ವಿಜಯ 24/7 ನ್ಯೂಸ್ಮಾಧ್ಯಮ ಸಹಯೋಗದಲ್ಲಿ ಏರ್ಪಡಿಸಿರುವ ಫರ್ನೀಚರ್​ ಮೇಳ ಸೋಮವಾರದವರೆಗೂ ನಡೆಯುತ್ತದೆ. ಕೋವಿಡ್‌ಗೂ ಮುಂಚೆ ರಾಜಧಾನಿಯಲ್ಲಿ ನಡೆಯುತ್ತಿದ್ದ ಬೃಹತ್ ಶಾಪಿಂಗ್ ಉತ್ಸವ, ತರಹೇವಾರಿ ಮೇಳ, ಸ್ಟಾರ್ ನಟರು ಭಾಗವಹಿಸುತ್ತಿದ್ದ ಮನರಂಜನಾ ಸಮಾರಂಭಗಳಿಗೆ ಸಾಕ್ಷಿಯಾಗುತ್ತಿದ್ದ ಜನದಟ್ಟಣೆ ಇಲ್ಲಿಯೂ ಗೋಚರಿಸಿದ್ದು ವಿಶೇಷ.
ಈ ಮೇಳಕ್ಕೆ ಜನರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಐದಾರು ವರ್ಷಗಳಿಂದ ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತಿದ್ದ ದುಬಾರಿ ಮತ್ತು ಶ್ರೀಮಂತ ವಿನ್ಯಾಸದ ಪೀಠೋಪಕರಣಗಳು, ಉಪಕರಣಗಳು, ಒಳಾಂಗಣ ವಿನ್ಯಾಸದ ಪರಿಕರಗಳನ್ನು ನಮ್ಮ ದೇಶ ಮತ್ತು ರಾಜ್ಯದಲ್ಲಿ ಉತ್ಪಾದನೆ ಮಾಡುವ ಉದ್ಯಮಗಳು ಆರಂಭವಾಗಿವೆ. ಈಗ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಫರ್ನೀಚರ್ ಮೇಳದಲ್ಲಿಯೂ ದೇಸಿ ಉದ್ಯಮಗಳ ತಾಕತ್ತನ್ನು ಕಣ್ತುಂಬಿಕೊಳ್ಳಬಹುದು. ಸಾಮಾನ್ಯ, ಮಧ್ಯಮ ವರ್ಗದ ಕುಟುಂಬದಿಂದ ಐಷಾರಾಮಿ ಮನೆಗಳಿಗೆ ಹೊಂದಾಣಿಗೆ ಆಗುವ ಮಾದರಿಯಲ್ಲಿ ಸೂಕ್ಷ್ಮ ತಂತ್ರಜ್ಞಾನಗಳನ್ನು ಬಳಸಿ ಉತ್ಪಾದಿಸಿರುವ ಪೀಠೋಪಕರಣಗಳು ಮುಂದುವರಿದ ದೇಶಗಳ ತಂತ್ರಜ್ಞಾನವನ್ನು ಮೀರಿಸುವ ಶೈಲಿಗಳನ್ನು ಹೊಂದಿವೆ.

ಬಹುಪಯೋಗಿ ಸೋಫಾ:ಮನೆಗಳು ಎಷ್ಟೇ ದೊಡ್ಡದಾಗಿದ್ದರೂ ಅಗತ್ಯ ವಸ್ತುಗಳನ್ನು ತಂದು ಮನೆಯಲ್ಲಿರಿಸುತ್ತಾ ಹೋದಲ್ಲಿ ಬರೀ ವಸ್ತುಗಳೇ ತುಂಬಿಕೊಂಡು ವಾಸಕ್ಕೆ ಸ್ಥಳಾವಕಾಶ ಕಡಿಮೆಯಾಗುತ್ತದೆ. ಆದರೆ, ಪ್ರಸ್ತುತ ಫರ್ನೀಚರ್ ಮೇಳದಲ್ಲಿ ಬಹುಪಯೋಗಿ ಸೋಫಾಗಳು ಲಗ್ಗೆಯಿಟ್ಟಿವೆ. ಸಾಮಾನ್ಯವಾಗಿ ಸೋಫಾಗಳೆಂದರೆ ಕುಳಿತುಕೊಳ್ಳಲು ಮಾತ್ರ ಎಂದು ತಿಳಿದುಕೊಳ್ಳುತ್ತೇವೆ. ಇಲ್ಲಿನ ಕೆಲ ಸೋಫಾಗಳಲ್ಲಿ ಕುಳಿತುಕೊಳ್ಳಬಹುದು, ಮಲಗಲು ಬಳಸಬಹುದು, ಬಹುಪಯೋಗಿ ರೀತಿಯಲ್ಲಿ ಹಿಂದಕ್ಕೆ ಮತ್ತು ಮುಂದಕ್ಕೆ ಬಾಗುವ ಕುರ್ಚಿಯಂತೆಯೂ ಪರಿವರ್ತಿಸಬಹುದು. ಸಿಂಗಲ್ ಚೇರ್ ಸೋಫಾಗಳಲ್ಲಿ ಕೂಡ ಕಾಲು ಚಾಚಿಕೊಂಡು ಕೂರಲು ಮತ್ತು ಹಿಂದಕ್ಕೆ ಮುಂದಕ್ಕೆ ಬಾಗಿಸಲು ಅನುಕೂಲ ಆಗುವಂತೆ ನಿರ್ಮಿಸಲಾಗಿದೆ. ಇದರಲ್ಲಿ ಬಾಕ್ಸ್ ಮಾದರಿ ಇದ್ದು, ಬೆಡ್‌ಶೀಟ್‌ಗಳನ್ನು ಅದರಲ್ಲಿ ಇರಿಸಬಹುದು.
‘ಗೃಹ ಸಚಿವರ ಊರಲ್ಲಿ 2 ದಿನ ದಿವ್ಯಾ ಕಾರು ಇತ್ತು! ಪಿಎಸ್​ಐ ಹುದ್ದೆ ಅಕ್ರಮದ ಆರೋಪಿ ಜತೆ ನೇರ ಸಂಪರ್ಕ ಹೊಂದಿದ್ದರು…’

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಹಾಸ್ಯಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 18 =
Remember me
